ಮುಂಬೈ,ಜ.17- ಬಾಲಿವುಡ್ ನಟ ಸೈಫ್ ಆಲಿಖಾನ್ ಮೇಲೆ ನಡೆದ ದಾಳಿಯ ಮಾದರಿಯಲ್ಲೇ ಶಾರುಖ್ ಖಾನ್ ಅವರ ಮೇಲೂ ಕಿಡಿಗೇಡಿಗಳು ದಾಳಿಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಶಾರುಖ್ ಖಾನ್ ಅವರ ನಿವಾಸದ ಬಳಿ ಅನುಮಾನಾಸ್ಪದ ಓಡಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೈಫ್ ಮೇಲಿನ ದಾಳಿಯ ನಂತರ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ತಂಡ ಶಾರುಖ್ ಖಾನ್ ಅವರ ನಿವಾಸ ಮನ್ನತ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಜನವರಿ 14 ರಂದು ಶಾರುಖ್ ಖಾನ್ ಅವರ ನಿವಾಸದ ಬಳಿ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನ್ನತ್ ಪಕ್ಕದಲ್ಲಿರುವ ರಿಟ್ರೀಟ್ ಹೌಸ್‌ನ ಹಿಂಭಾಗದಲ್ಲಿ 6-8 ಅಡಿ ಉದ್ದದ ಕಬ್ಬಿಣದ ಏಣಿಯನ್ನು ಇರಿಸುವ ಮೂಲಕ ವ್ಯಕ್ತಿಯೊಬ್ಬರು ಆವರಣವನ್ನು ವೀಕ್ಷಿಸಲು ಪ್ರಯತ್ನಿಸಿದರು.