ನೊಯ್ದಾ, ಜ. 18 (ಪಿಟಿಐ) ಭಾರತದಲ್ಲಿ ಅಕ್ರಮವಾಗಿ ತಂಗಿದ್ದ ಆರೋಪದ ಮೇಲೆ ಸಾರ್ಟ್‌ಫೋನ್ ತಯಾರಕ ವಿವೋ ಜೊತೆ ಕೆಲಸ ಮಾಡುತ್ತಿರುವ ಮೂವರು ಚೀನಾ ಪ್ರಜೆಗಳನ್ನು ಇಲ್ಲಿ ಬಂಧಿಸಲಾಗಿದೆ.
ಗೌತಮ್ ಬುಧ್ ನಗರ್ ಪೊಲೀಸ್‌ನ ಸ್ವಾಟ್ ತಂಡ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಚೀನಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಗೌತಮ್ ಬುದ್ ನಗರದ ಖೇರ್ಲಿ ಭಾವ್ ಪ್ರದೇಶದಲ್ಲಿ ವಿವೋ ಜೊತೆ ಕೆಲಸ ಮಾಡುತ್ತಿರುವ ಮೂವರು ಚೀನಾದ ಪ್ರಜೆಗಳು ತಮ್ಮ ವೀಸಾ ಅವಧಿ ಮುಗಿದ ನಂತರ ಭಾರತದಲ್ಲಿ ಅಕ್ರಮವಾಗಿ ತಂಗಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ವಲಯ-3) ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಆರೋಪಿಗಳನ್ನು ಯುಸಿಂಗ್ಬೋ, ಚಾನ್ ಚೌ ಮತ್ತು ಪೆಂಗ್‌ಶಾವೊ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.