ಮುಂಬೈ, ಜ.18– ಹಿಂದಿ ಕಿರುತೆರೆಯಲ್ಲಿ ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅಮನ್ ಜೈಸ್ವಾಲ್ (22) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧರ್ತಿ ಪುತ್ರ ನಂದಿನಿ ಧಾರಾವಾಹಿಯ ಲೇಖಕ ಧೀರಜ್ ಮಿಶ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಬೆಳಗ್ಗೆ ಧಾರಾವಾಹಿಯೊಂದರ ಅಡಿಷನ್ ನೀಡಲು ಅಮನ್ ಜೈಸ್ವಾಲ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಜೋಗೇಶ್ವರಿ ಹೆದ್ದಾರಿಯಲ್ಲಿ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು.
ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಉತ್ತರ ಪ್ರದೇಶದ ಬೈಲಿಯಾ ಮೂಲದ ಅಮನ್ ಜೈಸ್ವಾಲ್ , ಧರ್ತಿ ಪುತ್ರ ನಂದಿನಿ ಅಲ್ಲದೆ ಸೋನಿ ಟಿವಿಯಲ್ಲಿ ಪ್ರಸಾರಗೊಂಡಿದ್ದ ಪುಣ್ಯಶ್ಲೋಕ ಅಹಲ್ಯಾಬಾಯಿಯಲ್ಲಿ ಯಶ್ವಂತ್ ರಾವ್ ಪಾನ್ಸೆ ಪಾತ್ರ ನಿಭಾಯಿಸಿದ್ದರು. ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ನಿರ್ಮಿಸಿದ್ದ ಉದಯರಿಯಾನ್ ಎಂಬ ಜನಪ್ರಿಯ ಶೋನಲ್ಲಿ ನಟಿಸಿದ್ದರು.
ಸಂತಾಪ:
ನಿನ್ನ ನೆನಪು ನನ್ನ ಮನಸ್ಸಿನಲ್ಲಿ ಕೊನೆಯವರೆಗೂ ಶಾಶ್ವತವಾಗಿ ಉಳಿಯುತ್ತದೆ, ದೇವರು ಕೆಲವೊಮೆ ಕ್ರೂರಿಯಾಗುತ್ತಾನೆ ಎಂಬುದು ನಿನ್ನ ಸಾವಿನಿಂದ ನನಗೆ ಅರಿವಾಗಿದೆ ಎಂದು ಧೀರಜ್ ಮಿಶ್ರಾ ತಮ ಎಕ್‌್ಸ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ಕಿರುತೆರೆಯ ಹಲವು ಕಲಾವಿದರು ಹಾಗೂ ತಂತ್ರಜ್ಞರು ಕೂಡ ಅಮನ್ ಜೈಸ್ವಾಲ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.