Saturday, January 18, 2025
Homeರಾಜ್ಯಯಲಹಂಕ ಸುತ್ತಮುತ್ತ ಜ.23 ರಿಂದ ಫೆ.17 ರವರೆಗೆ ಮಾಂಸ ಮಾರಾಟ ನಿಷೇಧ

ಯಲಹಂಕ ಸುತ್ತಮುತ್ತ ಜ.23 ರಿಂದ ಫೆ.17 ರವರೆಗೆ ಮಾಂಸ ಮಾರಾಟ ನಿಷೇಧ

Bengaluru: Ahead of Aero India, sale of meat, non-vegetarian dishes banned in Yelahanka

ಬೆಂಗಳೂರು,ಜ.18- ಯಲಹಂಕ ವಾಯುನೆಲೆಯಲ್ಲಿ ಏರ್‌ ಶೋ-2025 ಪ್ರಯುಕ್ತ 23ನೇ ಜನವರಿಯಿಂದ 17ನೇ ಫೆಬ್ರಬರಿ 2025 ರವರೆಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಮೊಹದ್‌ ನಯೀಮ್‌ ಮೊಮಿನ್‌ ತಿಳಿಸಿದ್ದಾರೆ.

ಯಲಹಂಕ ಏರ್‌ ಪೋರ್ಸ್‌ ಸ್ಟೇನ್‌ನಲ್ಲಿ ದಿನಾಂಕ: 10.02.2025 ರಿಂದ 14.02.2025 ರವರೆಗೆ ಅಂತರಾಷ್ಟ್ರೀಯ ಏರ್‌ ಶೋ ನಡೆಯಲಿದೆ. ಈ ಸಂಬಂಧ ಯಲಹಂಕ ವಲಯದ ಏರ್‌ಪೋರ್ಸ್‌ ಸ್ಟೇಷನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವುದು ಹಾಗೂ ಹೋಟೆಲ್‌ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

ಆದುದರಿಂದ ದಿನಾಂಕ: 23.01.2025 ರಿಂದ 17.02.2025 ರವರೆಗೆ ಎಲ್ಲಾ ಮಾಂಸಾಹಾರ ಮಾರಾಟ ಉದ್ದಿಮೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್‌ ಕ್ರಾಫ್ಟ್ ರೂಲ್ಸ್‌‍ 1937 ರ ರೂಲ್‌ 91 ರಂತೆ ಮತ್ತು ಇತರ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಡಾ. ಮನೋಹರ್‌ ಸಹಾಯಕ ನಿರ್ದೇಶಕರು, ಪಶುಪಾಲನಾ ವಿಭಾಗ, ಯಲಹಂಕ ವಲಯ ಮೊ.ಸಂ: 9845588227 ಸಂಪರ್ಕಿಸಲು ಕೋರಲಾಗಿದೆ.

RELATED ARTICLES

Latest News