ಬೆಂಗಳೂರು,ಜ.18- ಬೀದರ್ ನಗರದ ಜನನಿಬಿಡ ಪ್ರದೇಶದಕ್ಕೆ ಬೈಕ್ನಲ್ಲಿ ಬಂದ ಇಬ್ಬರು ದರೋಡೆ ಕೋರರು ಎಟಿಎಮ್ಗೆ ಹಣ ತುಂಬುವ ಎಜೆನ್ಸಿ ವಾಹನದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಒಬ್ಬರನ್ನು ಹತ್ಯೆಮಾಡಿ 93 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಉತ್ತರ ಭಾರತದಲ್ಲಿ ವಿಶೇಷ ತಂಡಗಳು ಶೋಧ ನಡೆಸುತ್ತಿವೆ.
ದರೋಡೆಕೋರರ ಬಂಧನಕ್ಕಾಗಿ ರಚಿಸಲಾಗಿರುವ 8 ವಿಶೇಷ ತಂಡಗಳು ಈಗಾಗಲೇ ಉತ್ತರ ಪ್ರದೇಶ, ಬಿಹಾರ, ಛತ್ತೀಸಘಡ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ.ಒಂದೊಂದು ತಂಡ ಒಂದೊಂದು ರಾಜ್ಯಕ್ಕೆ ತೆರಳಿದ್ದು, ದರೋಡೆಕೋರರ ಬಂಧನಕ್ಕೆ ಹಗಲಿರುಳು ಹುಡುಕಾಟ ನಡೆಸುತ್ತಿವೆ.
ಮೊಕ್ಕಾಂ: ಅಪಾರಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಹರಿಶೇಖರನ್ ಅವರು ಬೀದರ್ನಲ್ಲಿ ಮೊಕ್ಕಾಂ ಹೂಡಿದ್ದು, ದರೋಡೆಕೋರರ ಬಂಧನಕ್ಕಾಗಿ ವಿಶೇಷ ತಂಡಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.ಈಗಾಗಲೇ ದರೋಡೆಕೋರರ ಗುರುತು ಪತ್ತೆಹಚ್ಚಿರುವ ಹಿನ್ನಲೆಯಲ್ಲಿ ಶೋಧ ಚುರುಕುಗೊಂಡಿದ್ದು, ಪೊಲೀಸರು ತ್ವರಿತಗತಿಯಲ್ಲಿ ದರೋಡೆಕೋರರ ಬಂಧನಕ್ಕೆ ಶ್ರಮಿಸುತ್ತಿದ್ದಾರೆ.
ಮೊನ್ನೆ ಬೆಳಗ್ಗೆ 11.30ರ ಸುಮಾರಿನಲ್ಲಿ ಬೀದರ್ ನಗರದ ಎಸ್ಬಿಐ ಕಚೇರಿ ಎದುರು ಎಟಿಎಮ್ಗೆ ಹಣ ತುಂಬಲು ಬಂದಿದ್ದ ಏಜೆನ್ಸಿ ವಾಹನವನ್ನು ಇಬ್ಬರು ದರೋಡೆಕೋರರು ಹೆಲೆಟ್ ಧರಿಸಿ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಏಕಾಏಕಿ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಗುಂಡು ಹಾರಿಸಿ 93 ಲಕ್ಷ ಹಣವಿದ್ದ ಬ್ಯಾಗ್ನ್ನು ತೆಗೆದುಕೊಂಡು ಪರಾರಿಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಈ ಇಬ್ಬರು ದರೋಡೆಕೋರರು ಅಂದು ರಾತ್ರಿ ಹೈದ್ರಾಬಾದ್ನಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿನ ಟ್ರಾವೆಲ್‌್ಸ ಏಜೆನ್ಸಿಗೆ ಹೋಗಿ ಛತ್ತಿಸ್ಗಡಕ್ಕೆ ತೆರಳಲು ಬಸ್ ಟಿಕೇಟ್ ಬುಕ್ ಮಾಡಿದ್ದಾರೆ. ಬಸ್ ಹೊರಡುವ ವೇಳೆ ಇವರ ಬಳಿಯಿದ್ದ ಭಾರೀ ಗಾತ್ರದ ಬ್ಯಾಗ್ ಗಮನಿಸಿದ ಬ್ಯಾಗ್ನಲ್ಲಿಏನಿದೆ ಎಂದು ಟ್ರಾವೆಲ್‌್ಸನ ಮ್ಯಾನೇಜರ್ ವಿಚಾರಿಸುತ್ತಿದ್ದಂತೆ ಭಯಗೊಂಡ ದರೋಡೆಕೋರರು ಏಕಾಏಕಿ ಅವರ ಮೇಲೆ ಗುಂಡು ಹಾರಿಸಿ ಬ್ಯಾಗ್ಗಳೊಂದಿಗೆ ಪರಾರಿಯಾಗಿದ್ದಾರೆ.
ಗಾಯಗೊಂಡಿರುವ ಟ್ರಾವೆಲ್ಸ್ ಏಜೆನ್ಸಿ ಮ್ಯಾನೇಜರ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆಕೋರರು ಹೈದರಾಬಾದ್ನಿಂದ ತಪ್ಪಿಸಿಕೊಂಡು ಉತ್ತರಭಾರತದ ರಾಜ್ಯಗಳಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.