Sunday, January 19, 2025
Homeಮನರಂಜನೆಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ದುನಿಯಾ ವಿಜಯ್

ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ದುನಿಯಾ ವಿಜಯ್

Duniya Vijay gives good news to fans

ಬೆಂಗಳೂರು, ಜ.18- ಸಲಗ, ಭೀಮ ಚಿತ್ರಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ದುನಿಯಾ ವಿಜಯ್ ಕುಮಾರ್ ಅವರು ಜನವರಿ 20 ರಂದು ತಮ 51 ಜನದಿನವನ್ನು ಆಚರಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ದುನಿಯಾ ವಿಜಯ್ ಅವರು ಗುರುಶಿಷ್ಯರು, ಕಾಟೇರ ಚಿತ್ರಗಳ ನಿರ್ದೇಶಕರಾದ ಜಡೇಶ್ ಕುಮಾರ್ ಹಂಪಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದು ಅಂದು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ದುನಿಯಾ ವಿಜಯ್ ಹೇಳಿದ್ದಾರೆ.

ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಅವರ ಮನೆಯ ಅಥವಾ ಊರಿನ ಹುಟ್ಟುಹಬ್ಬದಂತೆ ಆಚರಿಸುತ್ತಿದ್ದರು, ಈ ಬಾರಿಯೂ ನನ್ನ ಹುಟ್ಟುಹಬ್ಬವನ್ನು ನಿಮೊಂದಿಗೆ ಆಚರಿಸಿಕೊಳ್ಳಲು ಬಯಸಿದ್ದೆ, ಆದರೆ ಹೊಸ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವುದರಿಂದ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

RELATED ARTICLES

Latest News