Sunday, January 19, 2025
Homeರಾಜ್ಯರಾಜ್ಯ ಪತ್ರಕರ್ತರ ಸಮೇಳನಕ್ಕೆ ಚಾಲನೆ

ರಾಜ್ಯ ಪತ್ರಕರ್ತರ ಸಮೇಳನಕ್ಕೆ ಚಾಲನೆ

CM Inaugurate State Journalists' Conference

ತುಮಕೂರು, ಜ.18- ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಲೋಕ ಸಾಕಷ್ಟು ಬದಲಾವಣೆ ಹಾದಿಯಲ್ಲಿ ಸಾಗುತ್ತಿದ್ದು, ಕವಲು ದಾರಿಯಲ್ಲಿ ನಡೆಯುವಂತಾಗಿದ್ದು, ಸವಾಲಿನ ಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿದ್ಧಾರ್ಥ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 39ನೆ ರಾಜ್ಯ ಪತ್ರಕರ್ತರ ಸಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಅಕ್ಷರಗಳನ್ನು ಮಳೆ ಅಚ್ಚುಗಳ ಮೂಲಕ ಸಿದ್ಧಪಡಿಸಿ ಮುದ್ರಿಸಲಾಗುತ್ತಿತ್ತು. ಆದರೆ, ಇಂದು ತಾಂತ್ರಿಕತೆ ಸಾಕಷ್ಟು ಬದಲಾಗಿದೆ.

ಕ್ಷಣಮಾತ್ರದಲ್ಲಿ ಪತ್ರಿಕೆಗಳು ಮುದ್ರಣವಾಗುವಂತಹ ತಂತ್ರಜ್ಞಾನ ನಮಲ್ಲಿದೆ. ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಒಂದು ಬಟನ್ ಒತ್ತಿದರೆ ಕ್ಷಣಾರ್ಧದಲ್ಲಿ ಬಿಸಿಬಿಸಿ ಸುದ್ದಿಗಳು ಕೈ ಸೇರುತ್ತವೆ ಎಂದರು.

ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ಸಹ ಕೆಲ ವರ್ಗ ಪತ್ರಿಕೆಗಳನ್ನೇ ಓದುತ್ತ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಸಮಾಜವನ್ನು ಬದಲಾಯಿಸುವ ಶಕ್ತಿ ಪತ್ರಕರ್ತರಿಗಿದೆ. ವಸ್ತುನಿಷ್ಠ ವರದಿಗಳಿಗೆ ಆದ್ಯತೆ ನೀಡಿ ಎಂದು ಪತ್ರಕರ್ತರಿಗೆ ಕರೆ ನೀಡಿದರು.

ಉದ್ಘಾಟನೆಗೂ ಮುನ್ನ ನಗರದ ಟೌನ್ಹಾಲ್ ವೃತ್ತದಲ್ಲಿ ಲಕ್ಷ್ಮೀ ಆನೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು 39ನೇ ರಾಜ್ಯ ಪತ್ರಕರ್ತರ ಸಮೇಳನದ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

RELATED ARTICLES

Latest News