Sunday, January 19, 2025
Homeರಾಷ್ಟ್ರೀಯ | Nationalಮಹಾಕುಂಭದಲ್ಲಿ ವೈರಲ್ ಆಗಿದ್ದ ಐಐಟಿ ಬಾಬಾಗೆ ಮನೆಗೆ ಮರಳುವಂತೆ ತಂದೆಯ ಮನವಿ

ಮಹಾಕುಂಭದಲ್ಲಿ ವೈರಲ್ ಆಗಿದ್ದ ಐಐಟಿ ಬಾಬಾಗೆ ಮನೆಗೆ ಮರಳುವಂತೆ ತಂದೆಯ ಮನವಿ

IIT Baba’s Family Wants Him to Return Home

ಪ್ರಯಾಗ್‌ರಾಜ್‌,ಜ.19– ಮುಂಬೈನ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿದ ಮತ್ತು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಖ್ಯಾತಿ ಗಳಿಸುತ್ತಿರುವ ಮೂಲತಃ ಅಭಯ್‌ ಸಿಂಗ್‌ ಎಂದು ಕರೆಯಲ್ಪಡುವ ಐಐಟಿ ಬಾಬಾ ಅವರ ತಂದೆ, ಮನೆಗೆ ಮರಳುವಂತೆ ತಮ್ಮ ಮಗನಿಗೆ ಮನಃಪೂರ್ವಕವಾಗಿ ಮನವಿ ಮಾಡಿದ್ದಾರೆ. ಸಂತನ ಜೀವನವನ್ನು ಸ್ವೀಕರಿಸಿದ ನಂತರ ಅಭಯ್‌, ಕುಟುಂಬಕ್ಕೆ ಮರಳಲು ಸಾಧ್ಯವಿಲ್ಲ ಎಂದು ತಂದೆ ಕರಣ್‌ ಗ್ರೆವಾಲ್‌ ಒಪ್ಪಿಕೊಂಡರು. ಅವರು ಬಾಲ್ಯದಿಂದಲೂ ತಮ ಮಗನ ಅಸಾಧಾರಣ ಶಿಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಐಐಟಿ ಬಾಬಾ ಅಭಯ್‌ ಸಿಂಗ್‌ ಹರಿಯಾಣದ ಜಜ್ಜರ್‌ ಜಿಲ್ಲೆಯವರು. ಐಐಟಿ ಪದವೀಧರರಾಗಿದ್ದು, ಈಗ ಸಂತನಾಗಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ಕುಂಭದಲ್ಲಿ ಚರ್ಚೆಯ ವಿಷಯವಾಗಿದೆ. ಜಜ್ಜರ್‌ ಕೋರ್ಟ್‌ನಲ್ಲಿ ವಕೀಲರಾಗಿದ್ದ ಗ್ರೆವಾಲ್‌ ಅವರು ತಮ ಮಗನ ಶೈಕ್ಷಣಿಕ ಪ್ರತಿಭೆಯನ್ನು ಮೆಲುಕು ಹಾಕಿದರು ಮತ್ತು ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಕೂಡಲೇ ಅಭಯ್‌, ದೆಹಲಿಯಲ್ಲಿ ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದರು ಮತ್ತು ನಂತರ ಐಐಟಿ ಮುಂಬೈನಲ್ಲಿ ತಮ ಅಧ್ಯಯನವನ್ನು ಮುಂದುವರಿಸಿದರು.

ಗ್ರೆವಾಲ್‌ ಆರು ತಿಂಗಳ ಹಿಂದೆ ತನ್ನ ಮಗನೊಂದಿಗಿನ ತನ್ನ ಕೊನೆಯ ಸಂಭಾಷಣೆಯನ್ನು ಹಂಚಿಕೊಂಡಿದ್ದು, ಅದರ ನಂತರ ಅಭಯ್‌ ಕುಟುಂಬದಿಂದ ದೂರವಾಗಿದ್ದರು ಎಂದು ಹೇಳಿದ್ದಾರೆ. ಅಭಯ್‌ ಸಿಂಗ್‌ ಮನೆಗೆ ಮರಳಲು ಅವರ ಮತ್ತು ಅವರ ಕುಟುಂಬದವರ ಆಳವಾದ ಬಯಕೆಯನ್ನು ತಂದೆ ವ್ಯಕ್ತಪಡಿಸಿದರು, ಆದಾಗ್ಯೂ, ಅವರು ಸಂತತ್ವವನ್ನು ಸ್ವೀಕರಿಸಿದ ನಂತರ ಅದು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಒಪ್ಪಿಕೊಂಡರು.

ಉನ್ನತ ಉದ್ಯೋಗ ಬಿಟ್ಟು ಆಧ್ಯಾತದ ದಾರಿ :
ಐಐಟಿಯಿಂದ ಪದವಿ ಪಡೆದ ನಂತರ, ಅವರು ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ದೆಹಲಿ ಮತ್ತು ಕೆನಡಾದ ಉನ್ನತ ಕಂಪನಿಗಳಲ್ಲಿ ಕೆಲಸ ಮಾಡಿದರು. ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ ಸುಮಾರು 3 ಲಕ್ಷ ರೂ.ಸಂಬಳ ಪಡೆಯುತ್ತಿದ್ದರೂ ಅವರು ಆಧ್ಯಾತದ ಜೀವನದ ದಾರಿ ತುಳಿದರು.

ಅಭಯ್‌ ಅವರು ಅಂತಿಮವಾಗಿ ಭಾರತಕ್ಕೆ ಹಿಂದಿರುಗಿ ಮನಾಲಿ, ಶಿಮ್ಲಾ ಮತ್ತು ಹರಿದ್ವಾರದಂತಹ ಸ್ಥಳಗಳಿಗೆ ಪ್ರಯಾಣಿಸಿದರು. ಅವರು ಮಾಜಿ ಏರೋಸ್ಪೇಸ್‌‍ ಎಂಜಿನಿಯರ್‌ ಆಗಿದ್ದು, ಅವರು ಆಧ್ಯಾತಿಕತೆಯನ್ನು ಅಳವಡಿಸಿಕೊಳ್ಳಲು ಕೆನಡಾದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ತ್ಯಜಿಸಲು ನಿರ್ಧರಿಸಿದರು. ಅವರು ಶ್ರೀ ಪಂಚದಶನಂ ಜುನಾ ಅಖಾರದ ಭಾಗವಾಗಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದರು.

ಮಹಾಕುಂಭದಲ್ಲಿ ಹೆಚ್ಚು ಗಮನ ಸೆಳೆದಿದ್ದ ಐಐಟಿ ಬಾಬಾ ಅಭಯ್‌ ಸಿಂಗ್‌ ಅಲಿಯಾಸ್‌‍ ಮಸಾನಿ ಗೋರಖ್‌ ದಿಢೀರ್‌ ನಾಪತ್ತೆಯಾಗಿದ್ದಾರೆ. ಅವರು ಸಂಗಮ ನಗರವನ್ನು ತೊರೆದಿದ್ದಾರೆ. ಬಾಬಾ ಎಲ್ಲಿಗೆ ಹೋದರು ಎಂಬ ಬಗ್ಗೆ ಅವರ ಗುರುಗಳು ಒಂದಷ್ಟು ಮಾಹಿತಿ ನೀಡಿದ್ದು, ಅವರು ಪ್ರವಾಸಕ್ಕೆ ಹೋಗಿದ್ದಾರೆ ಎಂದು ನಂಬಲಾಗಿದೆ.

ಐಐಟಿ ಬಾಬಾ ಜುನಾ ಅಖಾರಾದ ಮಡಿ ಆಶ್ರಮ ಶಿಬಿರದಲ್ಲಿ ವಾಸಿಸುತ್ತಿದ್ದರು. ಅವರನ್ನು ಭೇಟಿಗಾಗಿ ಮಾಧ್ಯಮಗಳು ಮತ್ತು ಜನರು ಹೆಚ್ಚಾಗಿ ಬರುತ್ತಿದ್ದರು. ಮನೆಯವರು ಮತ್ತೆ ಮನೆಗೆ ಮರಳುವಂತೆ ಒತ್ತಡ ಹೇರುತ್ತಿದ್ದು, ಈ ಕಾರಣದಿಂದ ಅವರು ಯಾವುದೋ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News