Sunday, January 19, 2025
Homeರಾಷ್ಟ್ರೀಯ | Nationalಸ್ಪಷ್ಟ ಜನಾದೇಶದೊಂದಿಗೆ ದೆಹಲಿ ಗದ್ದುಗೆ ಏರಲಿದೆ ಬಿಜೆಪಿ : ಸಮೀಕ್ಷೆ

ಸ್ಪಷ್ಟ ಜನಾದೇಶದೊಂದಿಗೆ ದೆಹಲಿ ಗದ್ದುಗೆ ಏರಲಿದೆ ಬಿಜೆಪಿ : ಸಮೀಕ್ಷೆ

BJP to come to power in Delhi with clear mandate: Survey

ನವದೆಹಲಿ,ಜ.19– ಭಾರೀ ಹಣಾಹಣಿಯಿಂದ ಕೂಡಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಎಪಿಯು ಬಿಜೆಪಿಯ ತೀವ್ರ ಪ್ರತಿಸ್ಪರ್ಧಿಯ ನಡುವೆಯೂ ಮೂರನೇ ಬಾರಿಗೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆದರೆ ಈ ಹಿಂದೆ 2015 ಮತ್ತು 2020ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ಆಮ್‌ ಆದಿ ಈ ಬಾರಿ ಸ್ಥಾನ ಗಳಿಕೆಯಲ್ಲಿ ಗಣನೀಯ ಪ್ರಮಾಣ ಕುಸಿತ ಕಾಣಲಿದೆ. ಜನತ್‌ ಎಂಬ ಖಾಸಗಿ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಆಮ್‌ ಆದಿ ಈ ಬಾರಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ, 39ರಿಂದ 41 ಸ್ಥಾನ ಪಡೆಯಬಹುದು. ಬಿಜೆಪಿ 29ರಿಂದ 31, ಕಾಂಗ್ರೆಸ್‌‍ ಹೆಚ್ಚೆಂದರೆ 1ರಿಂದ 2 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂದು ಅಂದಾಜಿಸಿದೆ.

ಸರ್ಕಾರ ರಚನೆಗೆ 36 ಸ್ಥಾನಗಳು ಬೇಕಾಗಿದ್ದು, ಆಡಳಿತ ವಿರೋಧಿ ಅಲೆಯಲ್ಲೂ ಸರಳ ಬಹುಮತದ ಮೂಲಕ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಸಮೀಕ್ಷೆ ನುಡಿದಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್‌‍ ಇಂಡಿಯಾ ಮೈತ್ರಿಕೂಟದಲ್ಲಿ ಮಿತ್ರಪಕ್ಷಗಳು. ಆದರೆ ದೆಹಲಿ ವಿಧಾನಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಏಕಾಂಗಿಯಾಗಿ ಎದುರಿಸುತ್ತಿವೆ.

2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 62 ಸೀಟುಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ 2ನೇ ಬಾರಿಗೆ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ 8 ಸೀಟುಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್‌‍ ಒಂದು ಸ್ಥಾನ ಗೆಲ್ಲಲು ಸಹ ವಿಫಲವಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್‌‍ 1-2 ಸೀಟು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಕಾಂಗ್ರೆಸ್‌‍, ಬಿಜೆಪಿಯ ಪ್ರಕಾರ ದೆಹಲಿಯಲ್ಲಿ ಎಎಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಭ್ರಷ್ಟಾಚಾರ ಆರೋಪ, ಅರವಿಂದ ಕೇಜ್ರಿವಾಲ್‌ ಜೈಲುವಾಸ, ಮುಖ್ಯಮಂತ್ರಿಗಳ ಬದಲಾವಣೆ ಬಳಿಕ ಎಎಪಿ ವಿರುದ್ಧ ಜನಾಕ್ರೋಶವಿದೆ. ಇದನ್ನು ಬಳಸಿಕೊಂಡು ಅಧಿಕಾರ ಹಿಡಿಯಬೇಕು ಎಂದು ಎರಡೂ ಪಕ್ಷಗಳು ತಂತ್ರ ರೂಪಿಸಿವೆ.

ಫೆಬ್ರವರಿ 5ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ 70 ಕ್ಷೇತ್ರಗಳಿಗೆ 981 ಅಭ್ಯರ್ಥಿಗಳು 1,521 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಿನ್ನೆ ನಾಮಪತ್ರಗಳ ಪರಿಶೀಲನೆ ನಡೆದಿದೆ. ನಾಮಪತ್ರಗಳನ್ನು ವಾಪಸ್‌‍ ಪಡೆಯಲು ಜನವರಿ 20ರ ಸೋಮವಾರ ಕೊನೆಯ ದಿನವಾಗಿದೆ.

ಹಾಲಿ ದೆಹಲಿಯ ಮುಖ್ಯಮಂತ್ರಿ ಅತಿಶಿ ಮಾರ್ಲೆನಾ. ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಅರವಿಂದ ಕೇಜ್ರಿವಾಲ್‌ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅತಿಶಿ ಮಾರ್ಲೆನಾ ಮತ್ತು ಎಎಪಿ ಪಕ್ಷ ಈಗಾಗಲೇ ಘೋಷಣೆ ಮಾಡಿದೆ. ಬಿಜೆಪಿ, ಕಾಂಗ್ರೆಸ್‌‍ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆ ಎದುರಿಸುತ್ತಿವೆ.

RELATED ARTICLES

Latest News