Tuesday, January 21, 2025
Homeಕ್ರೀಡಾ ಸುದ್ದಿ | Sportsಮಹಾಕುಂಭದಲ್ಲಿ ಗಂಗಾ ಸ್ನಾನ ಮಾಡಿದ ಹಿಮಾ ದಾಸ್‌‍

ಮಹಾಕುಂಭದಲ್ಲಿ ಗಂಗಾ ಸ್ನಾನ ಮಾಡಿದ ಹಿಮಾ ದಾಸ್‌‍

Hima Das Takes Spiritual Plunge at Maha Kumbh

ಮಹಾಕುಂಭ ನಗರ, ಜ. 21 (ಪಿಟಿಐ) ಸ್ಟಾರ್‌ ಓಟಗಾರ್ತಿ ಹಿಮಾ ದಾಸ್‌‍ ಅವರು ಇಲ್ಲಿನ ಮಹಾಕುಂಭಕ್ಕೆ ಭೇಟಿ ನೀಡಿ ಗಂಗಾನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರು. ಧಿಂಗ್‌ ಎಕ್ಸ್ ಪ್ರೆಸ್‌‍ ಎಂದು ಕರೆಯಲ್ಪಡುವ ಹಿಮಾ, ತನ್ನ ಆಧ್ಯಾತಿಕ ಗುರು ಕೇಶವ್‌ ದಾಸ್‌‍ ಜಿ ಮಹಾರಾಜ್‌ ಅವರಿಂದ ಆಶೀರ್ವಾದ ಪಡೆದ ನಂತರ ತನ್ನ ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದಾರೆ.

ಹಿಮಾ ಈಶಾನ್ಯ ಶಿಬಿರದ ಬಗ್ಗೆ (ಮಹಾ ಕುಂಭದಲ್ಲಿ) ತಿಳಿದುಕೊಂಡಾಗ, ಆಕೆಗೆ ಭೇಟಿ ನೀಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಹಿಮಾ ತನ್ನ ಸ್ನೇಹಿತರೊಂದಿಗೆ ಬಂದು, ಗಂಗಾ ಸ್ನಾನ ಮಾಡಿ, ಹೊರಟು ಹೋದರು, ಎಂದು ಮಹಾರಾಜ್‌ ಪಿಟಿಐಗೆ ತಿಳಿಸಿದರು.

ಅವರು ಅನುಭವದ ಬಗ್ಗೆ ತುಂಬಾ ಉತ್ಸುಕರಾಗಿದ್ದರು ಮತ್ತು ನಾಮ್ಘರ್‌ ಅನ್ನು ನೋಡಲು ಬಂದರು. ಮೇಳಕ್ಕೆ ಅವರ ಭೇಟಿ ಸಂತೋಷಕರವಾಗಿತ್ತು ಎಂದು ಅವರು ಹೇಳಿದರು.
ಜಕಾರ್ತಾ ಏಷ್ಯನ್‌ ಗೇಮ್ಸ್‌‍ 2018 ರ ಚಿನ್ನದ ವಿಜೇತೆ ಹಿಮಾ, ಜುಲೈ 22, 2023 ರಿಂದ ನವೆಂಬರ್‌ 21, 2024 ರವರೆಗೆ ನಡೆದ 16 ತಿಂಗಳ ಅಮಾನತು ಅವಧಿಯ ನಂತರ ಈ ವರ್ಷ ಈವೆಂಟ್‌ಗಳಿಗೆ ಸಜ್ಜಾಗುತ್ತಿದ್ದಾರೆ.

RELATED ARTICLES

Latest News