Tuesday, January 21, 2025
Homeರಾಷ್ಟ್ರೀಯ | Nationalಮಣಿಪುರದಲ್ಲಿ ನಿಷೇಧಿತ ಸಂಘಟನೆಯ ನಾಲ್ವರ ಸೆರೆ

ಮಣಿಪುರದಲ್ಲಿ ನಿಷೇಧಿತ ಸಂಘಟನೆಯ ನಾಲ್ವರ ಸೆರೆ

Four members of banned outfit arrested near India-Myanmar border in Manipur

ಇಂಫಾಲ, ಜ. 21 (ಪಿಟಿಐ) ಮಣಿಪುರದ ತೆಂಗನೌಪಾಲ್‌ ಜಿಲ್ಲೆಯ ಭಾರತ-ವ್ಯಾನಾರ್‌ ಗಡಿಯಲ್ಲಿ ನಿಷೇಧಿತ ಸಂಘಟನೆಯಾದ ಸೋಷಿಯಲಿಸ್ಟ್‌ ರೆವಲ್ಯೂಷನ್‌ ಪಾರ್ಟಿ ಆಫ್‌ ಕಂಗ್ಲೀಪಾಕ್‌ನ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ.

ಮೋರೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪಂಗಲ್‌ ಬಸ್ತಿಯಲ್ಲಿ ಗಡಿ ಪಿಲ್ಲರ್‌ 79 ರಿಂದ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ವಶದಿಂದ ಮೂರು ಸಿಮ್‌ ಕಾರ್ಡ್‌ಗಳನ್ನು ಹೊಂದಿರುವ ಒಂದು ಸಾರ್ಟ್‌ಫೋನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಬಂಧಿತ ಸಂಘಟನೆಯ ಕಾರ್ಯಕರ್ತರನ್ನು ಲೀಶಾಂಗ್ಥೆಮ್‌ ಸೊಮೊರ್ಜಿತ್‌ ಸಿಂಗ್‌ (34), ಪೆಬಮ್‌ ಮಾಲೆಮ್‌ಗಂಬ ಸಿಂಗ್‌ (18), ಲೈಶ್ರಾಮ್‌ ನೆಲ್ಸನ್‌ ಸಿಂಗ್‌ (22) ಮತ್ತು ನಿಂಗ್‌ತೌಜಮ್‌ ಮಿಲನ್‌ ಮೈತೆ (25) ಎಂದು ಗುರುತಿಸಲಾಗಿದೆ.

ಕಾಂಗ್‌ಪೊಕ್ಪಿ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ ಎಂಟು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುರಾಚಂದ್‌ಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ತೊರ್ಬಂಗ್‌ನ ಪಿಕೆ ಪಾರ್ಕ್‌ನಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಯ ತಂಡವು ಐದು ಬಂದೂಕುಗಳು ಮತ್ತು ಎಂಟು ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಕಾಂಗ್ಪೊಕ್ಪಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಮಾಹಿಂಗ್‌ ಗ್ರಾಮದಲ್ಲಿ ನಡೆದ ಮತ್ತೊಂದು ಶೋಧ ಕಾರ್ಯಾಚರಣೆಯಲ್ಲಿ ಮೂರು ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಈ ಕಾರ್ಯಾಚರಣೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಮೇ 2023 ರಿಂದ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರೀತರಾಗಿದ್ದಾರೆ.

RELATED ARTICLES

Latest News