Friday, January 24, 2025
Homeರಾಷ್ಟ್ರೀಯ | Nationalಬಿಹಾರ : ಸ್ಮಶಾನದಲ್ಲಿ ಹೂತಿದ್ದ ಶವಗಳ ರುಂಡಗಳೇ ಮಾಯ..!

ಬಿಹಾರ : ಸ್ಮಶಾನದಲ್ಲಿ ಹೂತಿದ್ದ ಶವಗಳ ರುಂಡಗಳೇ ಮಾಯ..!

Bihar: The heads of the bodies buried in the graveyard have disappeared..!

ಪಾಟ್ನಾ,ಜ.23- ಸ್ಮಶಾನದಲ್ಲಿ ಹೂಳಲಾಗಿದ್ದ ಮೃತದೇಹಗಳ ತಲೆಗಳು ಮಾತ್ರ ನಿಗೂಢವಾಗಿ ಕಾಣೆಯಾಗಿರುವ ಅಚ್ಚರಿಯ ಬೆಳವಣಿಗೆ ಬಿಹಾರದಲ್ಲಿ ನಡೆದಿದೆ. ಮತದೇಹಗಳ ತಲೆಯನ್ನು ಕತ್ತರಿಸಿ ಕಳ್ಳಸಾಗಣೆ ಮಾಡುತ್ತಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಮಶಾನದಲ್ಲಿ ಸಮಾಧಿಯನ್ನು ಅಗೆದಿರುವುದು ಕಂಡು ಬಂದು ಪರಿಶೀಲಿಸಿದಾಗ ಶವಗಳ ರುಂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಒಂದು ಬಾರಿಯಲ್ಲ ಐದು ಬಾರಿ ಇದೇ ರಿತಿಯ ಪ್ರಕರಣಗಳು ನಡೆದಿವೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸ್‌‍ ವರಿಷ್ಠಾಧಿಕಾರಿ ಎಸ್‌‍ಡಿಪಿಒಗೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಘಟನೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಲಾಗಿದ್ದು, ಜನರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಮಾಧಿಯಿಂದ ಮತದೇಹಗಳ ತಲೆಗಳು ಮಾಯವಾಗುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಹಳೆಯ ಸಶಾನವಿದೆ. ಇಲ್ಲಿ ಮುಸ್ಲಿಂ ಸಮುದಾಯದವರ ಶವಗಳನ್ನು ಹೂಳಲಾಗುತ್ತದೆ.

ಕಳೆದ ಸೋಮವಾರ, ಕಳ್ಳಸಾಗಾಣಿಕೆದಾರರು ಇಲ್ಲಿನ ಸಮಾಧಿಯಲ್ಲಿ ಹೂತಿಟ್ಟಿದ್ದ ಮಹಿಳೆಯ ತಲೆಯನ್ನು ತೆಗೆದುಕೊಂಡು ಹೋಗಿದ್ದರು ಈ ಶವ ಬದ್ರು ಎಂಬುವರ ತಾಯಿಯದ್ದು, 6 ತಿಂಗಳ ಹಿಂದೆ ಬದ್ರು ತನ್ನ ತಾಯಿಯನ್ನು ಇದೇ ಸಮಾಧಿಯಲ್ಲಿ ಹೂಳಿದ್ದರು.

ಕಳ್ಳಸಾಗಣೆದಾರರು ಈ ಸಶಾನದಿಂದ ಸಮಾಧಿಗಳನ್ನು ಅಗೆದು, ಮುಖ್ತಾರ್‌ ಅವರ ಅತ್ತೆ, ಮೊಹಿದ್‌ ಅವರ ಪತ್ನಿ, ಮೊಹಿದ್‌ ಆಶಿಕ್‌ ಅಲಿ ಅವರ ಪತ್ನಿಯ ಶಿರಚ್ಛೇದ ಮಾಡಿ ಅದರೊಂದಿಗೆ ಪರಾರಿಯಾಗಿದ್ದಾರೆ. ಆದರೆ, ಇದು ಮಾಂತ್ರಿಕರ ಕೈವಾಡ, ಅವರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎನ್ನುತ್ತಾರೆ ಕೆಲ ಗ್ರಾಮಸ್ಥರು. ಈ ಘಟನೆಯಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್‌ನ ಕೈವಾಡವಿದೆ ಎಂದು ಜನರು ಶಂಕಿಸಿದ್ದಾರೆ. ಸಮಾಧಿಯನ್ನು ಅತ್ಯಂತ ಎಚ್ಚರಿಕೆಯಿಂದ ಅಗೆದು ನಂತರ ಬಿದಿರಿನ ಬತ್ತಿಗಳಿಂದ ಮುಚ್ಚಿ ಅದರ ಮೇಲೆ ಮಣ್ಣನ್ನು ಸುರಿಯಲಾಗುತ್ತದೆ.

ಸಶಾನದಲ್ಲಿ ನಿರ್ಮಿಸಲಾಗಿರುವ ಗಡಿ ಗೋಡೆಯನ್ನು ಯಾರೋ ಪದೇ ಪದೇ ಒಡೆಯುತ್ತಿದ್ದಾರೆ, ಮೂರರಿಂದ ನಾಲ್ಕು ಗ್ರಾಮಗಳ ಮುಸ್ಲಿಂ ಸಮುದಾಯದ ಜನರು ಮತ ದೇಹಗಳನ್ನು ಹೂಳಲು ಈ ಸಶಾನಕ್ಕೆ ಬರುತ್ತಾರೆ, ಈ ಬಗ್ಗೆ ತನಿಖೆ ನಡೆಸುವಂತೆ ಕಹಲ್‌ಗಾಂವ್‌ ಎಸ್‌‍ಡಿಪಿಒಗೆ ಸೂಚಿಸಲಾಗಿದೆ ಎಂದು ಭಾಗಲ್ಪುರ ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ ಹದಯ್‌ ಕಾಂತ್‌ ಹೇಳಿದ್ದಾರೆ.

RELATED ARTICLES

Latest News