Friday, January 24, 2025
Homeರಾಜ್ಯಸಿಎಂಗೆ `ಲೋಕಾ' ಕ್ಲೀನ್ ಚಿಟ್ ನೀಡಿದರೆ ಸಿಬಿಐ ತನಿಖೆಗೆ ಪೂರಕವಾಗಲಿದೆ : ಸ್ನೇಹಮಯಿ ಕೃಷ್ಣ

ಸಿಎಂಗೆ `ಲೋಕಾ’ ಕ್ಲೀನ್ ಚಿಟ್ ನೀಡಿದರೆ ಸಿಬಿಐ ತನಿಖೆಗೆ ಪೂರಕವಾಗಲಿದೆ : ಸ್ನೇಹಮಯಿ ಕೃಷ್ಣ

If the Lokayukta gives a clean chit to the CM, it will help the CBI investigation: Snehamayi Krishna

ಮೈಸೂರು,ಜ.23– ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿಯವರ ಪಾತ್ರ ಇಲ್ಲ ಎಂದು ಲೋಕಾಯುಕ್ತರು ತನಿಖಾ ವರದಿ ನೀಡಿದ್ದರೆ ಅದು ಸಿಬಿಐ ತನಿಖೆಗೆ ವಹಿಸಲು ಪೂರಕವಾಗಲಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ವಿಶ್ಲೇಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆಯ ಅಧಿಕೃತ ವರದಿ ನನಗೆ ಸಿಕ್ಕಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ಪ್ರಭಾವ ಇಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದರೆ, ಅದು ಸಿಬಿಐ ತನಿಖೆಗೆ ಸಹಾಯವಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದರು.

ಸಿದ್ದರಾಮಯ್ಯನವರು ಬೇರೆಬೇರೆ ಹಂತದಲ್ಲಿ ಅಧಿಕಾರದಲ್ಲಿದ್ದಾಗಲೇ ಜಮೀನು ಖರೀದಿ, ಭೂ ಪರಿವರ್ತನೆ, ದಾನಪತ್ರ ಸೇರಿದಂತೆ ನಾನಾ ರೀತಿಯ ಪ್ರಕ್ರಿಯೆಗಳು ನಡೆದಿವೆ. ಇದನ್ನು ಕುರಿತಂತೆ ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಲೋಕಾಯುಕ್ತ ತನಿಖೆ ಪ್ರಭಾವಕ್ಕೆ ಒಳಗಾಗಿ ಸುಳ್ಳು ಅಥವಾ ತಪ್ಪು ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ನಾನು ಮೊದಲಿನಿಂದ ಹೇಳುತ್ತಲೇ ಬಂದಿದ್ದೇನೆ. ಒಂದು ವೇಳೆ ವರದಿಯಲ್ಲಿ ಆ ರೀತಿ ಅಂಶಗಳಿದ್ದರೆ ನನ್ನ ವಾದಕ್ಕೆ ಪುಷ್ಟಿ ಸಿಗುತ್ತದೆ ಎಂದು ಹೇಳಿದರು.

ಲೋಕಾಯುಕ್ತ ಯಾವ ಸಾಕ್ಷ್ಯಾಧಾರಗಳನ್ನು ಆಧರಿಸಿ ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂದು ಅಭಿಪ್ರಾಯಪಟ್ಟಿದೆಯೋ ಗೊತ್ತಿಲ್ಲ. ಮೇಲ್ನೋಟಕ್ಕೆ ಪ್ರಭಾವದ ದುರ್ಬಳಕೆಯಾಗಿರುವುದಕ್ಕೆ ನನ್ನ ಬಳಿ ಎಲ್ಲಾ ಪುರಾವೆಗಳಿವೆ. ಹೈಕೋರ್ಟ್ನಲ್ಲಿ ನಾನು ಅರ್ಜಿ ಸಲ್ಲಿಸಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದೇನೆ. ಅದರ ವಿಚಾರಣೆ ಹಂತದಲ್ಲಿ ಈ ರೀತಿ ವರದಿ ಇದ್ದರೆ ಅದು ಅನುಕೂಲವಾಗಲಿದೆ. ಲೋಕಾಯುಕ್ತ ವರದಿ ನನಗೆ ಹಿನ್ನಡೆಯಲ್ಲ ಎಂದರು. ನನ್ನ ಕಾನೂನುಬದ್ಧ ಹೋರಾಟ ಮುಂದುವರೆಯಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ನನ್ನ ಆದ್ಯತೆ.

ಲೋಕಾಯುಕ್ತದ ತನಿಖಾಧಿಕಾರಿಗಳು ಲೋಪವೆಸಗಿದ್ದರೆ ಅವರ ವಿರುದ್ಧವೂ ತನಿಖೆ ನಡೆಸಲು ಅವಕಾಶವಿದೆ. ಇದೇ 27 ರಂದು ಹೈಕೋರ್ಟ್ನಲ್ಲಿ ಅದೇಶ ಜಾರಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. ಅಧಿಕಾರಿಗಳ ಲೋಪವಾಗಿದೆ. ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂಬ ವರದಿ ಇದ್ದರೆ ಅದು ಆಘಾತಕಾರಿ ಏನೂ ಅಲ್ಲ. ಪ್ರಭಾವ ಇಲ್ಲದೆ ಅಧಿಕಾರಿಗಳು ತಪ್ಪು ಮಾಡುತ್ತಾರೆ ಎಂದು ಭಾವಿಸಲು ಸಾಧ್ಯವಿಲ್ಲ. ಭಾರತೀಯ ನ್ಯಾಯ ಸಂಹಿತೆ ಕಲಂ 14 ರಡಿ ಮಾತುಗಳು ಕೂಡ ಸಾಕ್ಷ್ಯಗಳಾಗಿ ಪರಿಗಣಿಸಲ್ಪಡುತ್ತವೆ. ನನ್ನ ಬಳಿ ಇರುವ ದಾಖಲೆಗಳನ್ನು ಹೈಕೋರ್ಟ್ಗೆ ಸಲ್ಲಿಸುತ್ತೇನೆ. ಅದನ್ನು ಆಧರಿಸಿ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ವಿಶ್ವಾಸವಿದೆ ಎಂದರು.

ಸಿದ್ದರಾಮಯ್ಯ ಅವರ ಪ್ರಭಾವದ ಬಗ್ಗೆ ಲಿಖಿತ ದಾಖಲೆಗಳಿದ್ದರೆ ಕೊಡಿ ಎಂದು ಬೆಂಬಲಿಗರು ಸವಾಲು ಹಾಕುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಅನೇಕ ಸಂದರ್ಭಗಳಲ್ಲಿ ಇದಕ್ಕೆ ಪೂರಕ ದಾಖಲೆಗಳು ದೊರೆಯುತ್ತವೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಭೂಮಿ ಖರೀದಿಯಾಗಿದೆ. ಭೂಸ್ವಾಧೀನದಿಂದ ಕೈಬಿಡಲಾಗಿದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಯಾವ ಪ್ರಕ್ರಿಯೆಗಳೂ ನಡೆಯುವುದಿಲ್ಲ.

ವಿರೋಧಪಕ್ಷದ ನಾಯಕರಾಗಿದ್ದಾಗಲೂ ಪ್ರಭಾವ ಬೀರಿಯೇ ಭೂಮಿ ವಹಿವಾಟಿನ ಪ್ರಕ್ರಿಯೆಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು. ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ ಎಂದು ಲಿಖಿತವಾಗಿ ಬರೆದುಕೊಟ್ಟಿರಲಿಲ್ಲ. ಆದರೂ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ವಿರುದ್ಧ ಆರೋಪಗಳು ಕೇಳಿಬಂದಿಲ್ಲವೇ? ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದರು.

x

ಮೈಸೂರು,ಜ.23- ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿಯವರ ಪಾತ್ರ ಇಲ್ಲ ಎಂದು ಲೋಕಾಯುಕ್ತರು ತನಿಖಾ ವರದಿ ನೀಡಿದ್ದರೆ ಅದು ಸಿಬಿಐ ತನಿಖೆಗೆ ವಹಿಸಲು ಪೂರಕವಾಗಲಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ವಿಶ್ಲೇಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆಯ ಅಧಿಕೃತ ವರದಿ ನನಗೆ ಸಿಕ್ಕಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ಪ್ರಭಾವ ಇಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದರೆ, ಅದು ಸಿಬಿಐ ತನಿಖೆಗೆ ಸಹಾಯವಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದರು.

ಸಿದ್ದರಾಮಯ್ಯನವರು ಬೇರೆಬೇರೆ ಹಂತದಲ್ಲಿ ಅಧಿಕಾರದಲ್ಲಿದ್ದಾಗಲೇ ಜಮೀನು ಖರೀದಿ, ಭೂ ಪರಿವರ್ತನೆ, ದಾನಪತ್ರ ಸೇರಿದಂತೆ ನಾನಾ ರೀತಿಯ ಪ್ರಕ್ರಿಯೆಗಳು ನಡೆದಿವೆ. ಇದನ್ನು ಕುರಿತಂತೆ ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಲೋಕಾಯುಕ್ತ ತನಿಖೆ ಪ್ರಭಾವಕ್ಕೆ ಒಳಗಾಗಿ ಸುಳ್ಳು ಅಥವಾ ತಪ್ಪು ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ನಾನು ಮೊದಲಿನಿಂದ ಹೇಳುತ್ತಲೇ ಬಂದಿದ್ದೇನೆ. ಒಂದು ವೇಳೆ ವರದಿಯಲ್ಲಿ ಆ ರೀತಿ ಅಂಶಗಳಿದ್ದರೆ ನನ್ನ ವಾದಕ್ಕೆ ಪುಷ್ಟಿ ಸಿಗುತ್ತದೆ ಎಂದು ಹೇಳಿದರು.

ಲೋಕಾಯುಕ್ತ ಯಾವ ಸಾಕ್ಷ್ಯಾಧಾರಗಳನ್ನು ಆಧರಿಸಿ ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂದು ಅಭಿಪ್ರಾಯಪಟ್ಟಿದೆಯೋ ಗೊತ್ತಿಲ್ಲ. ಮೇಲ್ನೋಟಕ್ಕೆ ಪ್ರಭಾವದ ದುರ್ಬಳಕೆಯಾಗಿರುವುದಕ್ಕೆ ನನ್ನ ಬಳಿ ಎಲ್ಲಾ ಪುರಾವೆಗಳಿವೆ. ಹೈಕೋರ್ಟ್ನಲ್ಲಿ ನಾನು ಅರ್ಜಿ ಸಲ್ಲಿಸಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದೇನೆ. ಅದರ ವಿಚಾರಣೆ ಹಂತದಲ್ಲಿ ಈ ರೀತಿ ವರದಿ ಇದ್ದರೆ ಅದು ಅನುಕೂಲವಾಗಲಿದೆ. ಲೋಕಾಯುಕ್ತ ವರದಿ ನನಗೆ ಹಿನ್ನಡೆಯಲ್ಲ ಎಂದರು. ನನ್ನ ಕಾನೂನುಬದ್ಧ ಹೋರಾಟ ಮುಂದುವರೆಯಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ನನ್ನ ಆದ್ಯತೆ.

ಲೋಕಾಯುಕ್ತದ ತನಿಖಾಧಿಕಾರಿಗಳು ಲೋಪವೆಸಗಿದ್ದರೆ ಅವರ ವಿರುದ್ಧವೂ ತನಿಖೆ ನಡೆಸಲು ಅವಕಾಶವಿದೆ. ಇದೇ 27 ರಂದು ಹೈಕೋರ್ಟ್ನಲ್ಲಿ ಅದೇಶ ಜಾರಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. ಅಧಿಕಾರಿಗಳ ಲೋಪವಾಗಿದೆ. ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂಬ ವರದಿ ಇದ್ದರೆ ಅದು ಆಘಾತಕಾರಿ ಏನೂ ಅಲ್ಲ. ಪ್ರಭಾವ ಇಲ್ಲದೆ ಅಧಿಕಾರಿಗಳು ತಪ್ಪು ಮಾಡುತ್ತಾರೆ ಎಂದು ಭಾವಿಸಲು ಸಾಧ್ಯವಿಲ್ಲ. ಭಾರತೀಯ ನ್ಯಾಯ ಸಂಹಿತೆ ಕಲಂ 14 ರಡಿ ಮಾತುಗಳು ಕೂಡ ಸಾಕ್ಷ್ಯಗಳಾಗಿ ಪರಿಗಣಿಸಲ್ಪಡುತ್ತವೆ. ನನ್ನ ಬಳಿ ಇರುವ ದಾಖಲೆಗಳನ್ನು ಹೈಕೋರ್ಟ್ಗೆ ಸಲ್ಲಿಸುತ್ತೇನೆ. ಅದನ್ನು ಆಧರಿಸಿ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ವಿಶ್ವಾಸವಿದೆ ಎಂದರು.

ಸಿದ್ದರಾಮಯ್ಯ ಅವರ ಪ್ರಭಾವದ ಬಗ್ಗೆ ಲಿಖಿತ ದಾಖಲೆಗಳಿದ್ದರೆ ಕೊಡಿ ಎಂದು ಬೆಂಬಲಿಗರು ಸವಾಲು ಹಾಕುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಅನೇಕ ಸಂದರ್ಭಗಳಲ್ಲಿ ಇದಕ್ಕೆ ಪೂರಕ ದಾಖಲೆಗಳು ದೊರೆಯುತ್ತವೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಭೂಮಿ ಖರೀದಿಯಾಗಿದೆ. ಭೂಸ್ವಾಧೀನದಿಂದ ಕೈಬಿಡಲಾಗಿದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಯಾವ ಪ್ರಕ್ರಿಯೆಗಳೂ ನಡೆಯುವುದಿಲ್ಲ.

ವಿರೋಧಪಕ್ಷದ ನಾಯಕರಾಗಿದ್ದಾಗಲೂ ಪ್ರಭಾವ ಬೀರಿಯೇ ಭೂಮಿ ವಹಿವಾಟಿನ ಪ್ರಕ್ರಿಯೆಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.
ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ ಎಂದು ಲಿಖಿತವಾಗಿ ಬರೆದುಕೊಟ್ಟಿರಲಿಲ್ಲ. ಆದರೂ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ವಿರುದ್ಧ ಆರೋಪಗಳು ಕೇಳಿಬಂದಿಲ್ಲವೇ? ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದರು.

RELATED ARTICLES

Latest News