Friday, January 24, 2025
Homeರಾಷ್ಟ್ರೀಯ | Nationalಮಹಾರಾಷ್ಟ್ರದಲ್ಲಿ 10 ಕೋಟಿ ಮೌಲ್ಯದ ಅಪಯಕಾರಿ ರಾಸಾಯನಿಕ ವಶ

ಮಹಾರಾಷ್ಟ್ರದಲ್ಲಿ 10 ಕೋಟಿ ಮೌಲ್ಯದ ಅಪಯಕಾರಿ ರಾಸಾಯನಿಕ ವಶ

Hazardous chemicals worth Rs 10 crore seized from godowns in Bhiwandi, owner booked

ಥಾಣೆ, ಜ 24 (ಪಿಟಿಐ) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪೊಲೀಸರು 30 ಗೋದಾಮುಗಳ ಮೇಲೆ ದಾಳಿ ನಡೆಸಿ 10 ಕೋಟಿ ರೂಪಾಯಿ ಮೌಲ್ಯದ ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಗೋದಾಮುಗಳ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, ಪರಿಸರ ಸಂರಕ್ಷಣಾ ಕಾಯ್ದೆ, ಅಪಾಯಕಾರಿ ರಾಸಾಯನಿಕಗಳ ತಯಾರಿಕೆ, ಸಂಗ್ರಹಣೆ ಮತ್ತು ಆಮದು ನಿಯಮಗಳು ಮತ್ತು ಪೆಟ್ರೋಕೆಮಿಕಲ್‌ ಕಾಯಿದೆಗಳ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಿವಂಡಿ ಪಟ್ಟಣದ ಪೂರ್ಣಾ ಪ್ರದೇಶದಲ್ಲಿನ ಗೋದಾಮುಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಆವರಣದಲ್ಲಿ ಅನುಚಿತವಾಗಿ ಮತ್ತು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಬ್ರಾಂಡ್‌ಗಳ ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಅಪಾಯಕಾರಿ ರಾಸಾಯನಿಕಗಳಿಂದ ಉಂಟಾಗುವ ಅಪಾಯದ ಬಗ್ಗೆ ಮಾಲೀಕರು ಸಂಪೂರ್ಣವಾಗಿ ತಿಳಿದಿದ್ದರು ಆದರೆ ಯಾವುದೇ ಮುನ್ನೆಚ್ಚರಿಕೆಗಳು ಅಥವಾ ಅನುಮತಿಗಳಿಲ್ಲದೆ ಅವುಗಳನ್ನು ಒಟ್ಟಿಗೆ ಸಂಗ್ರಹಿಸಿದರು ಎಂದು ಅಧಿಕಾರಿ ಹೇಳಿದರು.ಗೋದಾಮು ಮಾಲೀಕ ಬಾಜಿರಾವ್‌ ಚಿಕ್ನೆ ಅವರಿಗೆ ನೋಟಿಸ್‌‍ ಜಾರಿ ಮಾಡಲಾಗಿದೆ ಎಂದರು.

RELATED ARTICLES

Latest News