Sunday, April 20, 2025
Homeರಾಷ್ಟ್ರೀಯ | National76ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮಕ್ಕೆ ದೆಹಲಿ ಸಜ್ಜು

76ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮಕ್ಕೆ ದೆಹಲಿ ಸಜ್ಜು

Republic Day Parade 2025

ನವದೆಹಲಿ,ಜ.25- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆ ನಡೆಯಲಿರುವ ಗಣರಾಜೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಕರ್ತವ್ಯ ಪಥ್ನಲ್ಲಿ ಪರೇಡ್ಗೆ ತಯಾರಿ ಕೂಡ ಮಾಡಲಾಗುತ್ತಿದೆ. ಜ.26 ರಂದು 76ನೇ ಗಣರಾಜೋತ್ಸವ ಆಚರಣೆ ಹಿನ್ನೆಲೆ ದೆಹಲಿಯ ಕೆಂಪುಕೋಟೆಯಲ್ಲಿ ಗಣರಾಜೋತ್ಸವ ಸಂಭ್ರಮಕ್ಕಾಗಿ ಸಕಲ ಸಿದ್ಧತೆ ನಡೆದಿದ್ದು, ಅಂತಿಮ ಹಂತದ ತಯಾರಿಯೂ ಪೂರ್ಣಗೊಂಡಿದೆ.

ಸುವರ್ಣ ಭಾರತ,ಪರಂಪರೆ ಮತ್ತು ಅಭಿವೃದ್ಧಿ ಥೀಮ್ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಗುತ್ತಿದ್ದು, ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸಮುಖದಲ್ಲಿ ಪರೇಡ್ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ.

ಪರೇಡ್ನಲ್ಲಿ 15 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಂದ ಸ್ತಬ್ಧಚಿತ್ರ ಪ್ರದರ್ಶನ, ಹತ್ತು ಸಾವಿರಕ್ಕೂ ಅಧಿಕ ವಿಶೇಷ ಅತಿಥಿಗಳು, ಒಂದು ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆ ಕರ್ತವ್ಯ ಪಥ್ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, 15,000ಕ್ಕೂ ಅಧಿಕ ಪೊಲೀಸರು, 70 ಪ್ಯಾರಾ ಮಿಲಿಟರಿ ಕಂಪನಿಗಳ ನಿಯೋಜನೆ ಮಾಡಲಾಗಿದೆ. ಒಟ್ಟು ಆರು ಹಂತಗಳಲ್ಲಿ ಭದ್ರತೆಯನ್ನು ಮಾಡಿಕೊಳ್ಳಲಾಗಿದ್ದು, ಎಲ್ಲ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ, 500 ಎಐ ಕ್ಯಾಮೆರಾಗಳ ಅಳವಡಿಸಲಾಗಿದೆ. 40 ಅಧಿಕ ಕಂಟೋಲ್ ರೂಂಗಳಿಂದ ಇಡೀ ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.

RELATED ARTICLES

Latest News