Tuesday, February 25, 2025
Homeರಾಜ್ಯರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ -ಶ್ಲಾಘನೀಯ ಸೇವಾ ಪದಕ

ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ -ಶ್ಲಾಘನೀಯ ಸೇವಾ ಪದಕ

President's Distinguished Service Medal 21 police officers and personnel

ಬೆಂಗಳೂರು,ಜ.25- ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಗಳು ಮತ್ತು ಶ್ಲಾಘನೀಯ ಸೇವಾ ಪದಕಗಳು ಲಭಿಸಿವೆೆ.

ಕೆಎಸ್ಆರ್ಪಿ-ಡಿಐಜಿಪಿ ಬಸವರಾಜು ಶರಣಪ್ಪ ಜಿಳ್ಳೆ ಹಾಗೂ ಕೆಎಸ್ಆರ್ಪಿ 12ನೇ ಪಡೆಯ ಕಮಾಂಡೆಂಟ್ಹಂಜಾ ಹುಸೇನ್ ಅವರು ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಡಿಸಿಆರ್ಇ-ಡಿಐಜಿಪಿ ರೇಣುಕಾ ಕೆ. ಸುಕುಮಾರ ಹಾಗೂ ಚೀಫ್ ಆಫೀಸ್ನ ಎಐಜಿಪಿ ಜನರಲ್ ಡಾ.ಸಂಜೀವ್ ಎಂ.ಪಾಟೀಲ್ ಅವರಿಗೆ ಶ್ಲಾಘನೀಯ ಸೇವಾಪದಕ ಲಭಿಸಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್, ಐಆರ್ಬಿ-ಕಮಾಂಡೆಂಟ್ ಜಿ.ಎಂ.ಪ್ರಸಾದ್, ಹಾಸನದ 11ನೇ ಪಡೆಯ ಡೆಪ್ಯೂಟಿ ಕಮಾಂಡೆಂಟ್ ವೀರೇಂದ್ರ ನಾಯಕ್, ಸಿಸಿಬಿ ಎಸಿಪಿ ಗೋಪಾಲ ಡಿ ಜೋಗಿನ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಬಿ ಗೌಡರ್, ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಗುರುಬಸವರಾಜ, ಬೆಂಗಳೂರಿನ ಗೋವಿಂದಪುರ ಠಾಣೆ ಇನ್‌ಸ್ಪೆಕ್ಟರ್‌ ಜಯರಾಜ್, ಹಾಸನ ಜಿಲ್ಲಾ ಹೊಳೆನರಸೀಪುರ ಸರ್ಕಲ್ ಇನ್‌ಸ್ಪೆಕ್ಟರ್‌ ಪ್ರದೀಪ್, ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್‌ ಮೊಹಮದ್ ಮುಕರಮ್, ಬ್ಯುರೋ ಆಫ್ ಇಮಿಗೇರೇಷನ್ ಇನ್ಸ್ ಪೆಕ್ಟರ್ ವಸಂತಕುಮಾರ್, ಸಿಐಡಿ ಎಎಸ್ಐ ಮಂಜುನಾಥ, ವಿಲ್ಸನ್ಗಾರ್ಡನ್ ಠಾಣೆ ಎಎಸ್ಐ ಅಲ್ತಾಫ್ ಹುಸೇನ್ ಎನ್ ದಖನಿ, ಕೆಎಸ್ಆರ್ಪಿ 4ನೇ ಪಡೆಯ ಹೆಡ್ ಕಾನ್ಸ್ಟೇಬಲ್ ಬಲೇಂದ್ರನ್, ಕಲಬುರಗಿ ಈಶಾನ್ಯ ವಲಯದ ಡಿಐಜಿಪಿ ಕಚೇರಿಯ ಹೆಡ್ ಕಾನ್ಸ್ಟೇಬಲ್ ಅರುಣಕುಮಾರ, ಚಿಕ್ಕಮಗಳೂರು ಜಿಲ್ಲೆ ಡಿಪಿಒ ಹೆಡ್ ಕಾನ್ಸ್ಟೇಬಲ್ ನಯಾಜ್ ಅಂಜುಮ್, ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ, ರಾಜ್ಯ ಗುಪ್ತವಾರ್ತೆಯ ಹಿರಿಯ ಗುಪ್ತ ಸಹಾಯಕರಾದ ಅಶ್ರಫ್ ಹಾಗೂ ಉಡುಪಿ ಜಿಲ್ಲೆ ಕುಂದಾಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಿವಾನಂದ ಅವರಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

RELATED ARTICLES

Latest News