ನವದೆಹಲಿ,ಜ.26- ನಾಡಿನ ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 76ನೇ ಗಣರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ. ನಮ ಸಂವಿಧಾನವನ್ನು ರಚಿಸಿದ ಮತ್ತು ನಮ ಪ್ರಯಾಣವು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯಲ್ಲಿ ಬೇರೂರಿದೆ ಎಂದು ಖಚಿತಪಡಿಸಿದ ಎಲ್ಲಾ ಮಹಾನ್ ಮಹಿಳೆಯರು ಮತ್ತು ಪುರುಷರಿಗೆ ನಾವು ನಮಸ್ಕರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭವು ನಮ ಪ್ರಯತ್ನಗಳನ್ನು ಬಲಪಡಿಸಲಿ ನಮ ಸಂವಿಧಾನದ ಆದರ್ಶಗಳನ್ನು ಸಂರಕ್ಷಿಸಲು ಮತ್ತು ಬಲಿಷ್ಠ ಮತ್ತು ಸಮದ್ಧ ಭಾರತಕ್ಕಾಗಿ ಕೆಲಸ ಮಾಡುವ ಕಡೆಗೆ ನಾವಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ವರ್ಷದ ಆಚರಣೆಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ, ಏಕತೆ, ಸಮಾನತೆ, ಅಭಿವದ್ಧಿ ಮತ್ತು ಮಿಲಿಟರಿ ಪರಾಕ್ರಮದ ವಿಶಿಷ್ಟ ಮಿಶ್ರಣವಾಗಿದೆ ಎಂದಿದ್ದಾರೆ. ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಒಟ್ಟು 31 ಸ್ತಬ್ಧಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಪಥ ಸಂಚಲನದಲ್ಲಿ ಗದಗ ಜಿಲ್ಲೆ ಲಕ್ಕುಂಡಿಯ ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ.
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್‌ನ ಜಂಟಿ ಸ್ತಬ್ಧಚಿತ್ರ, ಜಂಟಿ ಆಪರೇಷನ್ ಕೊಠಡಿ, ಅರ್ಜುನ್ ಟ್ಯಾಂಕರ್, ತೇಜಸ್, ಐಎನ್‌ಎಸ್ ವಿಶಾಖಪಟ್ಟಣ ನೌಕೆ ಮಾದರಿಗಳು ಪಥಸಂಚಲನದಲ್ಲಿ ಗಮನ ಸೆಳೆದಿವೆ.