Saturday, February 1, 2025
Homeರಾಷ್ಟ್ರೀಯ | Nationalಸನಾತನ ಮಂಡಳಿ ಸ್ಥಾಪನೆಗೆ ಋಷಿಗಳ ಕರೆ

ಸನಾತನ ಮಂಡಳಿ ಸ್ಥಾಪನೆಗೆ ಋಷಿಗಳ ಕರೆ

ಮಹಾಕುಂಭ ನಗರ, ಜ. 28 (ಪಿಟಿಐ) ಇಲ್ಲಿ ನಡೆಯುತ್ತಿರುವ ಮಹಾಕುಂಭದ ನಡುವೆ ನಡೆದ ಧರ್ಮ ಸಂಸದ್‌ನಲ್ಲಿ ಸನಾತನ ಮಂಡಳಿಯನ್ನು ಸ್ಥಾಪಿಸಲು ವಿವಿಧ ಮಠಮಾನ್ಯಗಳು ಮತ್ತು ಗುಂಪುಗಳನ್ನು ಪ್ರತಿನಿಧಿಸುವ ಋಷಿಗಳು ಕರೆ ನೀಡಿದ್ದಾರೆ. ಹಿಂದೂ ದೇವಾಲಯಗಳನ್ನು ಕೆಡವಿ ನಿರ್ಮಿಸಿದ ಮಸೀದಿಗಳನ್ನು ಸಂರಕ್ಷಿಸಲು ಸಮಾಲೋಚನೆಯಿಲ್ಲದೆ ಕಾನೂನನ್ನು ಹೇರಲಾಗಿದೆ ಎಂದು ಹೇಳಿದ ಜಗದ್ಗುರು ವಿದ್ಯಾಭಾಸ್ಕರ್‌ ಜಿ ಮಹಾರಾಜ್‌ ಅವರು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯನ್ನು ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ತಮ ಬಹುಮತವನ್ನು ಬಳಸಿಕೊಂಡು ಪೂಜಾ ಸ್ಥಳಗಳ ಕಾಯಿದೆಯನ್ನು ಕಿತ್ತೊಗೆಯಬೇಕು. ಆ ಸಮಯದಲ್ಲಿ ಸರಕಾರ ಯಾವುದೇ ಚರ್ಚೆಯಿಲ್ಲದೆ ಈ ಕಾನೂನನ್ನು ಜಾರಿಗೊಳಿಸಿ ರಾಷ್ಟ್ರದ ಮೇಲೆ ಹೇರಿತ್ತು ಎಂದಿದ್ದಾರೆ. ಸನಾತನ ಧರ್ಮವನ್ನು ಉಳಿಸುವುದರ ಮೇಲೆ ಎಲ್ಲಾ ಜೀವಿಗಳ ಉಳಿವು ಅವಲಂಬಿತವಾಗಿದೆ ಎಂದು ಅವರು ಪ್ರತಿಪಾದಿಸಿದರು. ಸನಾತನ ಮಂಡಳಿಯನ್ನು ಸ್ಥಾಪಿಸುವುದು ಸನಾತನಿಯನ್ನು ರಕ್ಷಿಸಲು ಈ ಸಮಯದ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸನಾತನ ಧರ್ಮ ಸಂಸದ್‌ (ಸನಾತನ ಧಾರ್ಮಿಕ ಸಂಸತ್ತು) ಅಧ್ಯಕ್ಷತೆ ವಹಿಸಿದ್ದ ನಿಂಬಾಕರ್‌ ಪೀಠಾಧೀಶ್ವರ ಶ್ಯಾಮ್‌ ಶರಣ ದೇವಾಚಾರ್ಯರು, ಮಂಡಳಿಯು ಸನಾತನ ಧರ್ಮವನ್ನು ಕಾಪಾಡುತ್ತದೆ ಮತ್ತು ಭವಿಷ್ಯದ ಪೀಳಿಗೆಯ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ತಿರುಪತಿ ಬಾಲಾಜಿಯಂತಹ ದೇವಾಲಯಗಳಿಗೆ ಹೊರಗಿನವರು ನುಸುಳುವುದನ್ನು ತಡೆಯಲು ಮತ್ತು ನಮ ನಂಬಿಕೆಯನ್ನು ಭ್ರಷ್ಟಗೊಳಿಸುವುದನ್ನು ತಡೆಯಲು ಮಂಡಳಿಯು ನಿರ್ಣಾಯಕವಾಗಿದೆ. ಒಮೆ ಇರಾನ್‌‍, ಅಫ್ಘಾನಿಸ್ತಾನ, ನೇಪಾಳ ಮತ್ತು ಭೂತಾನ್‌ನಂತಹ ರಾಷ್ಟ್ರಗಳು ಭಾರತದೊಂದಿಗೆ ಸಾಂಸ್ಕೃತಿಕವಾಗಿ ಹೊಂದಿಕೊಂಡವು. ನಾವು ಕಾರ್ಯನಿರ್ವಹಿಸದಿದ್ದರೆ ಭಾರತವೂ ಹಿಂದೂಗಳ ಕೈಯಿಂದ ಜಾರಿಕೊಳ್ಳಬಹುದು ಎಂದು ಎಚ್ಚರಿಸಿದರು. ಇಸ್ಕಾನ್‌ ನಾಯಕ ಗೌರಂಗ್‌ ದಾಸ್‌‍ ಜಿ ಮಹಾರಾಜ್‌ ಅವರು ಸನಾತನಿಗಳು ಏಕೀಕತ ಸಂಸ್ಥೆಯ ಅಗತ್ಯವನ್ನು ಎತ್ತಿ ತೋರಿಸಿದರು.

RELATED ARTICLES

Latest News