ಬೆಂಗಳೂರು,ಜ.28- ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದ ಕರ್ನಾ ಟಕದ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರಕ್ಕೆ ಓಟು ಹಾಕಿ ಬೆಂಬಲಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಮನವಿ ಮಾಡಿದ್ದಾರೆ. ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಜನಾಭಿಪ್ರಾಯ ಆಧರಿಸಿ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರಸರ್ಕಾರದ ರಕ್ಷಣಾ ಸಚಿವಾಲಯ ಆನ್ಲೈನ್ನಲ್ಲಿ ಓಟು ಮಾಡಲು ಅವಕಾಶ ಕಲ್ಪಿಸಿದೆ.
ಈ ಬಾರಿ ಕರ್ನಾಟಕದಿಂದ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರ ಭಾಗವಹಿಸಿ ಎಲ್ಲರ ಗಮನ ಸೆಳೆಯಲಾಗಿತ್ತು. ಇಂದು ಮಧ್ಯರಾತ್ರಿ 12 ವರೆಗೆ ಓಟು ಮಾಡಲು ಅವಕಾಶವಿದ್ದು ಸಾರ್ವಜನಿಕರು ನಿಗದಿತ ಅವಧಿಯೊಳಗೆ ಓಟು ಮಾಡಿ ರಾಜ್ಯದ ಸ್ತಬ್ಧಚಿತ್ರವನ್ನು ಬೆಂಬಲಿಸ ಬಹುದಾಗಿದೆ.ಸಾರ್ವಜನಿಕರು ಓಟು ಮಾಡಲು ವೆಬ್ಸೈಟ್ :https://www.mygov.in/group&poll/vote&favourite&tableau ವೆಬ್ ಸೈಟ್ಗೆ ಲಾಗ್ ಇನ್ ಆಗಿ ಓಟು ಹಾಕಬೇಕು.
ಎಸ್ಎಂಎಸ್ ಮೂಲಕವೂ ಕೂಡ ಓಟಿಂಗ್ಗೆ ಅವಕಾಶವಿದ್ದು ತಮ ಮೊಬೈಲ್ನಲ್ಲಿ MYGOVPOLL 357037,12 ಎಂದು ಟೈಪ್ ಮಾಡಿ 77282 99899 ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಓಟ್ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.