Friday, November 28, 2025
Homeರಾಜಕೀಯರಾಜ್ಯ ರಾಜಕಾರಣದಲ್ಲಿ ಭಾರೀ ನಂಬರ್‌ಗೇಮ್‌, ಎದುರಾಳಿ ಬಣದ ಶಾಸಕರನ್ನು ಸೆಳೆಯಲು ಪ್ರಯತ್ನ

ರಾಜ್ಯ ರಾಜಕಾರಣದಲ್ಲಿ ಭಾರೀ ನಂಬರ್‌ಗೇಮ್‌, ಎದುರಾಳಿ ಬಣದ ಶಾಸಕರನ್ನು ಸೆಳೆಯಲು ಪ್ರಯತ್ನ

Huge numbers game in Karnataka politics, attempt to attract MLAs from opposing factions

ಬೆಂಗಳೂರು, ನ.27– ರಾಜ್ಯ ರಾಜಕಾರಣದಲ್ಲಿ ನಂಬರ್‌ಗೇಮ್‌ ಆಟ ಜೋರಾಗಿದ್ದು, ಪರಸ್ಪರ ಎದುರಾಳಿಗಳ ಬಣದಲ್ಲಿರುವ ಶಾಸಕರನ್ನೇ ಸೆಳೆಯುವ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.ಆರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣದ ಕೆಲವು ಶಾಸಕರು ದೆಹಲಿಯಾತ್ರೆ ನಡೆಸಿದ್ದರು. ಅದರಲ್ಲಿ ಮಂಡ್ಯ, ತುಮಕೂರು, ದಾವಣಗೆರೆ ಜಿಲ್ಲೆಯ ಕೆಲವು ಶಾಸಕರು ಭಾಗವಹಿಸಿದ್ದರು.

ನಿಧಾನಕ್ಕೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ ಕೂಡ ದೆಹಲಿಯಾತ್ರೆಗೆ ಜೊತೆಗೂಡಿದ್ದರು. ಹಳೇ ಮೈಸೂರು ಭಾಗದ ಶಾಸಕರಷ್ಟೇ ಇದ್ದರೆ, ಸಾಲುವುದಿಲ್ಲ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಬೆಳಗಾವಿ ಜಿಲ್ಲೆಯ ಇಬ್ಬರೂ ಶಾಸಕರನ್ನು ದೆಹಲಿಯಾತ್ರೆಗೆ ತೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಅವರು, ಕಿತ್ತೂರು ಶಾಸಕ ಬಾಬಾ ಸಾಹೇಬ್‌ ಪಾಟೀಲ್‌ ಮತ್ತು ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮಣ್ಣನವರ್‌ ಅವರ ಜೊತೆ ಮಾತುಕತೆ ನಡೆಸಿದ್ದು, ಇಬ್ಬರೂ ಶಾಸಕರು ದೆಹಲಿಗೆ ತೆರಳುವ ತಂಡದಲ್ಲಿರುವಂತೆ ನೋಡಿಕೊಂಡಿದ್ದರು ಎನ್ನಲಾಗಿದೆ.
ಶಾಸಕರ ಮನವೊಲಿಕೆಯ ವೇಳೆ ದೆಹಲಿಯಾತ್ರೆಗೆ ಡಿ.ಕೆ.ಶಿವಕುಮಾರ್‌ ಅವರ ಬೆಂಬಲ ಇದೆ ಎಂದು ಶಾಸಕರಿಗೆ ಸ್ಪಷ್ಟಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

ಡಿ.ಕೆ.ಶಿವಕುಮಾರ್‌ ಒಂದು ಹೆಜ್ಜೆ ಮುಂದೆ ಹೋಗಿ, ಸಿದ್ದರಾಮಯ್ಯ ಅವರ ಬಣದ ಪರಮಾಪ್ತ ಸಚಿವರಾದ ಸತೀಶ್‌ ಜಾರಕಿಹೊಳಿ, ಜಮೀರ್‌ ಅಹಮದ್‌ಖಾನ್‌, ಕೆ.ಜೆ.ಜಾರ್ಜ್‌ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌‍ ಅಧಿಕಾರಕ್ಕೆ ತರಲು ತಾವೆಷ್ಟು ಶ್ರಮಿಸಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಸಿದ್ದರಾಮಯ್ಯ ಅವರು 7 ವರ್ಷ ಮುಖ್ಯಮಂತ್ರಿಯಾಗಿದ್ದಾರೆ, ಒಬ್ಬರಿಗೆ 10 ವರ್ಷ ಅಧಿಕಾರ ಸಿಕ್ಕರೆ, ಉಳಿದವರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ, ಪಕ್ಷವನ್ನು ಅಧಿಕಾರಕ್ಕೆ ತಂದ ಬಳಿಕ ಉಳಿದ ಚರ್ಚೆಗಳಾಗಲಿ. ಸದ್ಯಕ್ಕೆ ಹೈಕಮಾಂಡ್‌ ನಾಯಕರು ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು.ಮತ್ತಷ್ಟು ಕಾರ್ಯಾಚರಣೆಯನ್ನು ಮುಂದುವರೆಸುವಂತೆ ಡಿ.ಕೆ.ಸಹೋದರರು, ಪ್ರಭಾವಿ ನಾಯಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್‌, ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ರಾಮಲಿಂಗಾರೆಡ್ಡಿ ಕಾಂಗ್ರೆಸ್‌‍ನಲ್ಲಿ ಅತ್ಯಂತ ಪ್ರಬಲ ನಾಯಕರಾಗಿದ್ದು, ಅವರ ಮಾತಿಗೆ ಹೆಚ್ಚಿನ ತೂಕ ಇದೆ ಎಂಬ ವಾತಾವರಣ ಇದೆ.

ಮೊದಲಿನಿಂದಲೂ ಸಿದ್ದರಾಮಯ್ಯ ಅವರ ಬಣದ ಆಪ್ತ ಸಚಿವರು ಪ್ರತ್ಯೇಕ ಔತಣಕೂಟಗಳನ್ನು ನಡೆಸುತ್ತಿದ್ದರು. ಈಗ ಸಚಿವರ ಪ್ರತ್ಯೇಕ ಸಭೆಗಳು ಮತ್ತಷ್ಟು ತೀವ್ರಗೊಂಡಿವೆ. ದೆಹಲಿಯಾತ್ರೆ ಕೈಗೊಂಡಿದ್ದ ಶಾಸಕರಾದ ಎಚ್‌.ಸಿ.ಬಾಲಕೃಷ್ಣ, ಇಕ್ಬಾಲ್‌ ಹುಸೇನ್‌, ನಯನ ಮೋಟಮ ಹಾಗೂ ಮತ್ತಿರರಿಗೆ ಸಚಿವ ಜಮೀರ್‌ ಅಹಮದ್‌ಖಾನ್‌ ಅವರ ಫೋನ್‌ನಿಂದಲೇ ಕರೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಯಾವ ಕಾರಣಕ್ಕೆ ದೆಹಲಿಗೆ ಹೋಗಿದ್ದೀರಾ ಎಂದು ಶಾಸಕರನ್ನು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ. ಡಿ.ಕೆ.ಶಿವಕುಮಾರ್‌ ಶಾಸಕರ ಸಹಿ ಸಂಗ್ರಹ ಮಾಡುತ್ತಿದ್ದಾರೆ ಎಂಬ ಊಹಾ-ಪೋಹಗಳು ಸಿದ್ದರಾಮಯ್ಯ ಅವರ ಬಣದ ಕೆಂಗಣ್ಣಿಗೆ ಗುರಿಯಾಗಿದೆ.

RELATED ARTICLES

Latest News