ರಾಜ್ಕೋಟ್, ಜ.28- ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನಂತರ ಗಾಯದ ಸಮಸ್ಯೆಯಿಂದ ಬಳಲಿ ಸಂಪೂರ್ಣವಾಗಿ ಫಿಟ್ನೆಸ್ ಪಡೆದಿರುವ ಅನುಭವಿ ವೇಗಿ ಮೊಹಮದ್ ಶಮಿ ಅವರು ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಪಂದ್ಯದಲ್ಲೂ ಸ್ಥಾನ ಪಡೆಯುವುದು ಅನುಮಾನವಾಗಿದೆ. ಆದರೆ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಯುವ ವಿಕೆಟ್ ಕೀಪರ್ ಧ್ರುವಜುರೇಲ್ ಅವರು ರಾಜ್ಕೋಟ್ ಪಂದ್ಯದಿಂದ ಹೊರಗುಳಿಯಲಿದ್ದು ಅವರ ಸ್ಥಾನವನ್ನು ಆಲ್ರೌಂಡರ್ ಶಿವಂದುಬೇ ಅವರು ತುಂಬಲಿದ್ದಾರೆ. ಐದು ಪಂದ್ಯಗಳ ಚುಟುಕು ಸರಣಿಯಲ್ಲಿ ಈಗಾಗಲೇ 2-0 ಯಿಂದ ಮುನ್ನಡೆ ಸಾಧಿಸಿರುವ ಸೂರ್ಯಕುಮಾರ್ಯಾದವ್ ಸಾರಥ್ಯದ ಟೀಮ್ ಇಂಡಿಯಾ ಸರಣಿ ಗೆಲ್ಲುವ ಹಾದಿಯಲ್ಲಿದೆ.