Thursday, January 30, 2025
Homeಇದೀಗ ಬಂದ ಸುದ್ದಿನಮಲ್ಲಿ ಯಾವುದೇ ಗೊಂದಲವಿಲ್ಲ : ಚಲುವರಾಯಸ್ವಾಮಿ ಸ್ಪಷ್ಟನೆ..

ನಮಲ್ಲಿ ಯಾವುದೇ ಗೊಂದಲವಿಲ್ಲ : ಚಲುವರಾಯಸ್ವಾಮಿ ಸ್ಪಷ್ಟನೆ..

ಬೆಂಗಳೂರು,ಜ.28- ನಮಲ್ಲಿ ಆಂತರಿಕ ಪ್ರಜಾಪ್ರಭುತ್ವದಿಂದಾಗಿ ಶೇಕಡಾ 2 ರಷ್ಟು ಮಂದಿ ಅವರ ಅಳತೆಮಿತಿಯಲ್ಲಿ ಮಾತನಾಡಬಹುದು. ಆದರೆ ಬಿಜೆಪಿಯಲ್ಲಿದ್ದಂತೆ ತೊಡೆ ತಟ್ಟಿ ರಾಜಕಾರಣ ಮಾಡುವುದಿಲ್ಲ ಎಂದು ಕೃಷಿ ಸಚಿವ ಚಲವರಾಯಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಹೈಕಮಾಂಡ್‌ ಸೂಚನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಲವು ಬಾರಿ ಸ್ಪಷ್ಟನೆ ನೀಡಿಯಾಗಿದೆ.

ಇದರ ನಂತರ ಯಾರಾದರೂ ಮಾತನಾಡಿದರೆ ಅದು ಲೆಕ್ಕಕ್ಕೆ ಉಳಿಯುವುದಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮುನ್ನಡೆಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರು ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿರುವಾಗ ಬೇರೆ ಯಾರೋ ಏನೋ ಹೇಳಿದರೆ ಅದಕ್ಕೆ ಆದೇಶ ನೀಡಬೇಕಿಲ್ಲ ಎಂದು ತಿಳಿಸಿದರು. ಎಲ್ಲರಿಗೂ ತಾಳೆ ಇರುವುದಿಲ್ಲ. ಸಣ್ಣಪುಟ್ಟ ಮಾತುಗಳನ್ನಾಡಿದರೂ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತದೆ. ಬಿಜೆಪಿಯಲ್ಲಿರುವಂತೆ ಹುಚ್ಚ, ಭ್ರಷ್ಟ ಎಂಬೆಲ್ಲಾ ಟೀಕೆಗಳಾಗುತ್ತಿಲ್ಲ. ಅವರಲ್ಲಿ ತೊಡೆ ತಟ್ಟಿ ನೇರವಾಗಿ ಸವಾಲು ಹಾಕುತ್ತಿದ್ದಾರೆ. ಇಂತಹುದ್ದೆಲ್ಲ ನಮಲ್ಲಿ ನಡೆಯುತ್ತಿಲ್ಲ ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ಕಾಂಗ್ರೆಸ್‌‍ ಸರ್ಕಾರದಲ್ಲಿ ಯಾವುದೇ ಲೋಪವಾಗಿಲ್ಲ. ಬಸವರಾಜ ಬೊಮಾಯಿ ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ಹಂಚಿಕೆಯಾಗಿದೆ. ತನಿಖೆಯಾಯಾಗುವುದಾದರೆ ಅವರ ವಿರುದ್ಧ ಆಗಬೇಕು. ಆದರೆ ಕಾಂಗ್ರೆಸ್‌‍ ನಾಯಕರ ವಿರುದ್ಧ ಇ.ಡಿ ತನಿಖೆ ನಡೆಯುತ್ತಿರುವುದು ಪಕ್ಷಪಾತ ಎಂದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು. ಸಿದ್ದರಾಮಯ್ಯ ಜನಪ್ರಿಯ ನಾಯಕರು. ಅವರ ಜೀವನ ತೆರೆದ ಪುಸ್ತಕ ಇದ್ದಂತೆ. ಹೆಚ್ಚು ಬಜೆಟ್‌ ಮಂಡಿಸಿದ ಮುತ್ಸದ್ದಿ ರಾಜಕಾರಣಿ. ಆಡಳಿತಾತಕವಾಗಿ ಹೆಚ್ಚು ಅನುಭವಿ ಹಾಗೂ ಅಷ್ಟೇ ಸರಳ ವ್ಯಕ್ತಿ. ಇಂತವರು ಕಾಂಗ್ರೆಸ್‌‍ನಲ್ಲಿರುವುದು ಬಿಜೆಪಿಯವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅದಕ್ಕಾಗಿ ಅಪಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌‍ ಪಕ್ಷ ಗೆದ್ದ ನಂತರ ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮೈ ಪರಚಿಕೊಳ್ಳುತ್ತಿದ್ದಾರೆ. ತನಿಖೆ ಯಾರ ಮೇಲೆ ಆಗಬೇಕೆಂಬುದನ್ನೇ ತಿರುಚಲಾಗುತ್ತಿದೆ. ಇದು ದುರದೃಷ್ಟ ಎಂದರು. ಸಿದ್ದರಾಮಯ್ಯನವರ ಕುಟುಂಬ ನಿವೇಶನವನ್ನು ವಾಪಸ್‌‍ ನೀಡಿದೆ. ನ್ಯಾಯಯುತವಾದರೆ ನಿವೇಶನ ವಾಪಸ್‌‍ ಕೊಡಿ. ಇಲ್ಲವಾದರೆ ಮುಟ್ಟುಗೋಲು ಹಾಕಿಕೊಳ್ಳಿ ಎಂಬ ನಿಲುವನ್ನು ಹೊಂದಿದೆ. ಹೀಗಿದ್ದ ಮೇಲೆ ತಪ್ಪು ಎಲ್ಲಿಂದ ನಡೆಯಲು ಸಾಧ್ಯ ಎಂದರು.

ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಇಲಾಖೆ ಹಾಗೂ ಪಾನೀಯ ನಿಗಮಕ್ಕೆ 11 ಮಹಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಇದರಲ್ಲಿ 2 ಇಲಾಖೆಗಳಿಗೂ ಕಚೇರಿ ಒದಗಿಸಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆಗೆ ಸೇರಿದ ಜಾಗವನ್ನು ಪಶುಸಂಗೋಪನಾ ಆಸ್ಪತ್ರೆಗಾಗಿ 2 ಎಕರೆ ನೀಡಲು ಚರ್ಚೆ ನಡೆಯುತ್ತಿದೆ ಎಂದರು.

RELATED ARTICLES

Latest News