ನವದೆಹಲಿ,ಜ.28- ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಹಾಜನತೆಗೆ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮಿರುವ ಬೆಂಗಳೂರು ಮೆಟೋ ದರ ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ಮತ್ತೆ ಮೆಟೋ ಟಿಕೆಟ್ ದರ ಕೂಡ ಹೆಚ್ಚಳವಾದರೆ ಜನರಿಗೆ ಹೆಚ್ಚಿನ ಹೊರೆ ಆಗಲಿದೆ. ಅಲ್ಲದೆ, ಪ್ರಯಾಣ ದರ ಏರಿಕೆ ನಿರ್ಧಾರ ಅಂತಿಮಗೊಳಿಸುವುದಕ್ಕೂ ಮುನ್ನ ವರದಿ ಸಲ್ಲಿಸುವಂತೆ ಕೇಂದ್ರ ತಂಡ ಸೂಚನೆ ನೀಡಿದೆ. ಹೀಗಾಗಿ ವರದಿ ಸಲ್ಲಿಕೆಗೆ ಬಿಎಂಆರ್ಸಿಎಲ್ ಸಮಯ ಕೇಳಿದೆ.
ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ ವ್ಯಕ್ತವಾಗಿದ್ದರೂ ನಿರ್ವಹಣೆ ನೆಪವೊಡ್ಡಿ ದರ ಏರಿಕೆ ಬಿಎಂಆರ್ಸಿಎಲ್ ಮುಂದಾಗಿತ್ತು. ಇದೀಗ ಬಿಎಂಆರ್ಸಿಎಲ್ ನಿರ್ಧಾರಕ್ಕೆ ಕೇಂದ್ರದಿಂದ ತಾತ್ಕಾಲಿಕ ತಡೆಯೊಡ್ಡಲಾಗಿದೆ. ಎರಡು ವಾರಗಳ ಹಿಂದೆ ಟಿಕೆಟ್ ದರ ಏರಿಕೆ ಸಂಬಂಧ ಬಿಎಂಆರ್ಸಿಎಲ್ ಸಭೆ ನಡೆಸಿತ್ತು. ಶೇ 45ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಬಿಎಂಆರ್ ಸಿಎಲ್ ಫೆ 1 ರಿಂದ ಅನ್ವಯವಾಗುವಂತೆ ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆ ಇತ್ತು.
ದರ ನಿಗದಿ ಸಮಿತಿಯನ್ನು ಪ್ರಯಾಣ ದರ ಪರಿಷ್ಕರಿಸಲು ನೇಮಿಸಲಾಗಿತ್ತು. ಬೆಂಗಳೂರು ಮೆಟೋ ರೈಲು ಕಾರ್ಪೊರೇಷನ್ ಲಿಮಿಟೆಡ್ಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ ದರ ರಚನೆಯು ಸುಮಾರು ಶೇಕಡಾ 20ರಷ್ಟು ಹೆಚ್ಚಳವನ್ನು ಶಿಫಾರಸು ಮಾಡಿತ್ತು. ಬಿಎಂಆರ್ಸಿಎಲ್ ಮಂಡಳಿಯು ಇದಕ್ಕೆ ಅನುಮೋದನೆ ನೀಡಬೇಕಾಗಿತ್ತು. ಸಮಿತಿಯನ್ನು ಮೆಟೋ ಕಾಯಿದೆ 2002 ರ ಅಡಿಯಲ್ಲಿ ನೇಮಿಸಲಾಗಿದೆ. ಅದರ ಶಿಫಾರಸುಗಳು ಬಿಎಂಆರ್ಸಿಎಲ್ಗೆ ಬದ್ಧವಾಗಿವೆ. ಏಳೂವರೆ ವರ್ಷಗಳ ನಂತರ ಪ್ರಯಾಣ ದರ ಏರಿಕೆಯಾಗುತ್ತಿರುವುದರಿಂದ ಮಂಡಳಿ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇತ್ತು. ಹಿಂದಿನ ಹೆಚ್ಚಳದ ನಂತರದ ವರ್ಷಗಳಲ್ಲಿ ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು ಶೇಕಡಾ 45ರಷ್ಟು ಏರಿಕೆಯಾಗಿದೆ ಎಂಬ ಅಂಶವನ್ನು ನಾವು ಪರಿಗಣಿಸಿದರೆ ಇದನ್ನು ಗಣನೀಯ ಏರಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ನಮ್ಮ ಮೆಟೋ ಈ ಹಿಂದೆ 2017 ರಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿತ್ತು. ಬಳಿಕ ಪ್ರಯಾಣ ದರ ಪರಿಷ್ಕರಣೆ ಮಾಡುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಇದೀಗ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದ ಬಿಎಂಆರ್ಸಿಎಲ್ಗೆ ಹಿನ್ನಡೆಯಾಗಿದೆ.ಸದ್ಯ ಬೆಂಗಳೂರು ಮೆಟೋದಲ್ಲಿ ಟಿಕೆಟ್ಗೆ ಕನಿಷ್ಠ ದರ 10 ರೂ. ಹಾಗೂ ಗರಿಷ್ಠ ದರ 60 ರೂ. ಇದೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಕಾರಣದಿಂದ ಪ್ರಯಾಣ ದರ ಏರಿಕೆಗೆ ನಿಗಮ ಮುಂದಾಗಿತ್ತು. ಮೆಟೋ ದರ ಪರಿಷ್ಕರಣೆ ಕುರಿತು ತ್ರಿ ಸದಸ್ಯ ಸಮಿತಿಯ ನೇತೃತ್ವವನ್ನು ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್ ಥರಾಣಿ ಮತ್ತು ಅದರ ಸದಸ್ಯರು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ ವಹಿಸಿಕೊಂಡಿದ್ದಾರೆ. ಇದು ತನ್ನ ಶಿಫಾರಸುಗಳನ್ನು ಸಲ್ಲಿಸಲು ಡಿಸೆಂಬರ್ 15, 2024 ರ ಗಡುವನ್ನು ಹೊಂದಿತ್ತು. ಅದು ತನ್ನ ಅಂತಿಮ ವರದಿಯನ್ನು ಸಲ್ಲಿಸಲು ಎರಡು ವಾರಗಳ ಕಾಲ ವಿಸ್ತರಣೆ ಕೋರಿದೆ. ಸಮಿತಿಯು ದೆಹಲಿ, ಸಿಂಗಾಪುರ ಮತ್ತು ಹಾಂಗ್ ಕಾಂಗ್ ಮೆಟೋ ನೆಟ್ವರ್ಕ್ಗಳಿಗೆ ಭೇಟಿ ನೀಡಿ ಅವುಗಳ ದರ ರಚನೆ ಮತ್ತು ಆಯಾ ಮೆಟೋ ರೈಲು ವ್ಯವಸ್ಥೆಗಳು ಅನುಸರಿಸುತ್ತಿರುವ ಪರಿಷ್ಕರಣೆ ವಿಧಾನವನ್ನು ಅಧ್ಯಯನ ಮಾಡಿತ್ತು.
ಸಂಪರ್ಕ ಜಾಲದ ವಿಸ್ತರಣೆಯಲ್ಲಿನ ಬೃಹತ್ ಹೂಡಿಕೆ, ಎಲ್ಲಾ ನಿಧಿಸಂಸ್ಥೆಗಳು ಮತ್ತು ಬ್ಯಾಂಕ್ಗಳಿಗೆ ಪಾವತಿಸಲಾಗುತ್ತಿರುವ ಬಡ್ಡಿ, ಮಾಸಿಕ ಕಾರ್ಯಾಚರಣೆ ವೆಚ್ಚ ಸುಮಾರು 50 ಕೋಟಿ (ಅದರ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಭದ್ರತೆಯನ್ನು ಒದಗಿಸಲು ತಗಲುವ ಮಾಸಿಕ ವೆಚ್ಚ 7 ಕೋಟಿ ಸೇರಿದಂತೆ), ನಿರ್ವಹಣೆ ಅದರ ನೆಟ್ವರ್ಕ್ನಲ್ಲಿ ಮತ್ತು ಸಿಬ್ಬಂದಿಯ ಸಂಬಳವನ್ನು ಪರಿಷ್ಕರಣೆಗೆ ಶಿಫಾರಸು ಮಾಡುವಾಗ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಸಾರ್ವಜನಿಕರು ಬಿಎಂಆರ್ಸಿಎಲ್ ಒದಗಿಸಿದ ಸೇವೆಯ ಗುಣಮಟ್ಟವನ್ನು ಮುಂದುವರಿಸಲು ಬಯಸಿದರೆ, ಅವರು ಅದನ್ನು ಪಾವತಿಸಲು ಸಿದ್ಧರಿರಬೇಕು. ಪ್ರಯಾಣ ದರವನ್ನು ಹೆಚ್ಚಿಸದಿದ್ದರೆ, ಕೇಂದ್ರವು ಕಾರ್ಯಾಚರಣೆಯ ವೆಚ್ಚವನ್ನು ಭರಿಸುವುದಿಲ್ಲವಾದ್ದರಿಂದ ಆಗುವ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಇನ್ನೊಂದು ಮೂಲ ತಿಳಿಸಿದೆ. ಈ ಮಧ್ಯೆ, ಮೆಟೋ ಸ್ಟೇಷನ್ಗಳ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿವೆ. ಬೆಂಗಳೂರಿನ 66 ಮೆಟೋ ನಿಲ್ದಾಣಗಳ ಪೈಕಿ 33 ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಸುಮಾರು 11000 ದ್ವಿಚಕ್ರವಾಹನ ಮತ್ತು 1500ಕ್ಕೂ ಹೆಚ್ಚು ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಬಿಎಂಆರ್ಸಿಎಲ್ ಒದಗಿಸುತ್ತಿದೆ.
ಈ ಹಿಂದೆ 2017 ರಲ್ಲಿ ನಮ ಮೆಟೋ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಆಗ 10-15 ಶೇಕಡಾ ಏರಿಕೆಯಾಗಿತ್ತು. ಆ ಬಳಿಕ ಮಾರ್ಗ ಸಾಕಷ್ಟು ವಿಸ್ತರಣೆಯಾಗಿದೆ. ಹೊಸ ಮಾರ್ಗಗಳು ಕೂಡ ಹೆಚ್ಚಳವಾಗುತ್ತಿವೆ. ಹೀಗಾಗಿ, ಸದ್ಯ ದರ ಶೇಕಡಾ 105 ರಷ್ಟು ಏರಿಕೆಯಾಗಬೇಕು ಎಂದು ಬಿಎಂಆರ್ಸಿಎಲ್ ದರ ಏರಿಕೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಗ್ರೀನ್ಪೀಸ್ ಇಂಡಿಯಾ ವಿರೋಧ
ಮೆಟೋ ಟಿಕೆಟ್ ದರ ಪರಿಷ್ಕರಣೆ ಸಂಬಂಧಿಸಿದಂತೆ ತಮ ಸಲಹೆಗಳನ್ನು ಸಮಿತಿಯೊಂದಿಗೆ ಹಂಚಿಕೊಳ್ಳುವಂತೆ ಬಿಎಂಆರ್ಸಿಎಲ್ ಕಳೆದ ವರ್ಷ (2024) ಅಕ್ಟೋಬರ್ನಲ್ಲಿ ನಾಗರಿಕರಲ್ಲಿ ಮನವಿ ಮಾಡಿತ್ತು. ಮೆಟೋ ಪ್ರಯಾಣ ದರ ಏರಿಕೆಯ ಪ್ರಸ್ತಾವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಮರುಪರಿಶೀಲಿಸಬೇಕು ಎಂದು ಗ್ರೀನ್ಪೀಸ್ ಇಂಡಿಯಾ ಸಂಸ್ಥೆಯು ಒತ್ತಾಯಿಸಿದೆ. ರಾಜ್ಯದಲ್ಲಿಈಗಾಗಲೇ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಮಾಡಿವೆ. ಮೆಟೋ ರೈಲು ನಿಗಮವು ಪ್ರಸ್ತುತ ಪ್ರಯಾಣ ದರದಲ್ಲಿ ಶೇ 40 ರಿಂದ 45 ರಷ್ಟು ಹೆಚ್ಚಳ ಪ್ರಸ್ತಾಪಿಸಿದೆ. ಈ ದರ ಜಾರಿಯಾದರೆ ಕನಿಷ್ಠ ದರ 15 ರೂ. ಮತ್ತು ಗರಿಷ್ಠ ದರ 85 ರೂ.ಗೆ ಹೆಚ್ಚಲಿದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಗ್ರೀನ್ಪೀಸ್ ಇಂಡಿಯಾ ಹೇಳಿತ್ತು.