ಬೆಂಗಳೂರು,ಜ.28- ಹೈಕಮಾಂಡ್ ಅನ್ನು ಓಲೈಸಲು ಹಿಂದೂ ಧಾರ್ಮಿಕ ನಂಬಿಕೆ, ಆಚಾರ – ವಿಚಾರಗಳನ್ನು ಉಲ್ಲೇಖಿಸಿ ನೀವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ಟೀಕಿಸುತ್ತಿರುವ ಪರಿ ತುಕ್ಕು ಹಿಡಿದ ನಿಮ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ವಿರುದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾ ಪ್ರಹಾರ ನಡೆಸಿದ್ದಾರೆ.
ಪ್ರಧಾನಿ ಮೋದಿ ಜೀ ಹಾಗೂ ಅಮಿತ್ ಶಾ ಜೀ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ವ್ಯಂಗ್ಯದ ಮಾತುಗಳನ್ನಾಡುವ ಮೂಲಕ ಹಿಂದೂ ಧಾರ್ಮಿಕ ಶ್ರದ್ಧೆಯನ್ನು ಅಪಮಾನಿಸಿದ್ದೀರಿ. ನಿಮ ನಾಲಿಗೆಯಿಂದ ಹೊರಡುತ್ತಿರುವ ಮಾತುಗಳ ಬಗ್ಗೆ ಬೇಸರ ತರಿಸುತ್ತಿದೆ ಎಂದು ವಿಜಯೇಂದ್ರ ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್‌್ಸ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ವಾತಂತ್ರ್ಯ ನಂತರದ ದಿನಗಳಿಂದಲೂ ನೆಹರು ಕುಟುಂಬದ ಭಟ್ಟಂಗಿಗಳಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಕಸದ ಬುಟ್ಟಿಗೆ ಎಸೆದು ಬಡವರು, ಶೋಷಿತರು, ರೈತರು ಹಾಗೂ ಕೂಲಿ ಕಾರ್ಮಿಕರ ಬದುಕನ್ನು ನರಕಕ್ಕೆ ತಳ್ಳಿದ ಕುಖ್ಯಾತಿ ಕಾಂಗ್ರೆಸ್ಸಿಗರದು. ಈ ಕಾರಣಕ್ಕಾಗಿಯೇ ಭಾರತದ ರಾಜಕೀಯ ಭೂಪಟದಲ್ಲಿ ಪ್ರಾದೇಶಿಕ ಪಕ್ಷಗಳನ್ನೂ ಎದುರಿಸಲಾಗದ ಸ್ಥಿತಿಗೆ ತಲುಪಿ ಕಾಂಗ್ರೆಸ್ ಅವನತಿಯ ಹಾದಿಯಲ್ಲಿದೆ, ಇಂಥಾ ಸ್ಥಿತಿಯಲ್ಲಿ ನೀವು ಆ ಪಕ್ಷದ ಅಧ್ಯಕ್ಷರಾಗಿದ್ದೀರಿ, ಇಷ್ಟಾದರೂ ನಿಮ ಅನುಭವ ಹಾಗೂ ಹಿರಿತನವನ್ನು ಗುಲಾಮಗಿರಿ ಪಕ್ಷಕ್ಕೆ ಒತ್ತೆಯಿಟ್ಟವರಂತೆ ವರ್ತಿಸುತ್ತಿರುವ ನಿಮ ಬಗ್ಗೆ ನಮಗೆ ಗೌರವಪೂರ್ವಕ ಕನಿಕರವಿದೆ ಎಂದು ವ್ಯಂಗ್ಯವಾಡಿದ್ದಾರೆ.
ಎಲ್ಲಿ ಕಾಂಗ್ರೆಸ್ ಆಡಳಿತ ಇರುತ್ತದೋ ಅಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳು ಹಾಗೂ ರಾಷ್ಟ್ರವಿದೋಹಿ ಭಯೋತ್ಪಾದಕ ಚಟುವಟಿಕೆಗಳು ತಾಂಡವವಾಡುತ್ತವೆ ಎಂಬುದಕ್ಕೆ ಕರ್ನಾಟಕದ ನಿಮ ಕಾಂಗ್ರೆಸ್ ಪಕ್ಷದ ಆಡಳಿತವೇ ಸಾಕ್ಷಿಯಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಮೈಕೋ ಫೈನಾನ್‌್ಸ ಹಾವಳಿಯಿಂದ ದಿನವೂ ಬಡವರು ಹಾಗೂ ಗ್ರಾಮೀಣ ಪ್ರದೇಶದ ಜನರು ಊರು ಬಿಡುತ್ತಿದ್ದಾರೆ. ಸಾಲಗಾರರು ಸರಣಿ ರೂಪದಲ್ಲಿ ಆತಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಹಾಡಹಗಲಲ್ಲೇ ದರೋಡೆ ಹಾಗೂ ಬ್ಯಾಂಕ್ ಲೂಟಿ ಎಗ್ಗಿಲ್ಲದೆ ಸಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಮೈಸೂರು ಮುಡಾ ಹಗರಣದ ನಿವೇಶನ ಲೂಟಿಯ ಮುಂಚೂಣಿ ಫಲಾನುಭವಿಯಾಗಿದ್ದಾರೆ, ಬಾಣಂತಿಯರ ಸಾಲು ಸಾಲು ಸಾವು ಹೆಂಗರುಳಿಲ್ಲದ ನಿಮ ಹೈಕಮಾಂಡ್‌ಗೆ ಈಗಲೂ ತಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಇಂತಹ ಕ್ರೂರ ಮನಸ್ಥಿತಿಯ ದಪ್ಪಚರ್ಮದ ಬಡವರ ವಿರೋಧಿ ಆಡಳಿತ ನಡೆಸುತ್ತಿರುವ ನಿಮ ಸರ್ಕಾರಕ್ಕೆ ಕಿವಿ ಹಿಂಡಬೇಕೆಂದು ನಿಮಗೆ ಇನ್ನೂ ಜ್ಞಾನೋದಯ ಆಗಿಲ್ಲ ನಿಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹುಡುಕುವ ರೀತಿಯಲ್ಲಿ ಮಾತನಾಡುತ್ತಿದ್ದೀರಿ. ನಿಮ ಹಿರಿತನದ ಬಗ್ಗೆ ಗೌರವವಿದೆ. ಆದರೆ ನಿಮ ಮಾತುಗಳು ರಾಜಕೀಯ ಪರಿಭಾಷೆಯಿಲ್ಲದ ಪದ ಸಂಸ್ಕೃತಿಯನ್ನು ಮರೆತ ಕೀಳು ಅಭಿರುಚಿಯ ಮಾತುಗಳಾಡಿರುವುದು ನಿಮ ಘನತೆ ಕುಗ್ಗಿಸಿದೆ ಎಂದು ಬೇಸರ ಹೊರಹಾಕಿದ್ದಾರೆ.
ದೇಶದಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಪ್ರಧಾನಿಯಾಗಿ 10 ವರ್ಷ ಸಮರ್ಥ ಆಡಳಿತ ನೀಡಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ತಲೆ ಎತ್ತುವಂತೆ ಮಾಡಿದ್ದಾರೆ. ಗೃಹ ಸಚಿವರಾಗಿ ಮಾನ್ಯ ಅಮಿತ್ ಶಾಜೀಯವರು ರಾಷ್ಟ್ರದೊಳಗೆ ವಿಧ್ವಂಸಕ ಕೃತ್ಯ ನಡೆಸಿ ಅಟ್ಟಹಾಸ ಮೆರೆಯುತ್ತಿದ್ದ ಭಯೋತ್ಪಾದಕ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆದಿದ್ದಾರೆ ಎಂದು ಹೇಳಿದ್ದಾರೆ.
ಭಾರತಾಂಬೆ ಈ ಇಬ್ಬರ ರಕ್ಷಣೆಗೆ ನಿಂತಿದ್ದಾಳೆ. ಈ ಕಾರಣದಿಂದಲೇ ಮೂರನೇ ಅವಧಿಗೂ ಇವರ ಭಾರತ ಕಟ್ಟುವ ವಿಜಯ ಯಾತ್ರೆ ನಾಗಾಲೋಟದಲ್ಲಿ ಸಾಗಿದೆ. ಇದನ್ನು ಸಹಿಸಿಕೊಳ್ಳಲಾಗದ ನೀವು ಹಾಗೂ ನಿಮ ಕಾಂಗ್ರೆಸ್ಸಿಗರು ಹತಾಶೆಯಿಂದ ವಿವೇಕ ಸುಟ್ಟುಕೊಂಡವರಂತೆ ಮಾತನಾಡುತ್ತಿರುವುದು ಭಾರತದ ಪ್ರಜಾತಂತ್ರ ವ್ಯವಸ್ಥೆಯ ವಿರೋಧ ಪಕ್ಷ ದುರ್ಬಲ ಸ್ಥಿತಿಗೆ ತಲುಪಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ವಿಜಯೇಂದ್ರ ಕಾಂಗ್ರೆಸ್ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.