Friday, November 22, 2024
Homeರಾಷ್ಟ್ರೀಯ | Nationalದೆಹಲಿಗೆ ಹೊಂದಿಕೊಂಡ ಹಲವು ನಗರಗಳಲ್ಲಿ ಕಂಪಿಸಿದ ಭೂಮಿ

ದೆಹಲಿಗೆ ಹೊಂದಿಕೊಂಡ ಹಲವು ನಗರಗಳಲ್ಲಿ ಕಂಪಿಸಿದ ಭೂಮಿ

ನವದೆಹಲಿ,ನ.4- ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡಂತಿರುವ ಹಲವು ನಗರಗಳಲ್ಲಿ ಶುಕ್ರವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ.

ಕಂಪನದ ಕೇಂದ್ರ ಸ್ಥಾನದಿಂದ ಅಂದಾಜು 500 ಕಿ.ಮೀ. ದೂರವಿರುವ, ಭಾರತದ ರಾಜಧಾನಿ ದೆಹಲಿಯಲ್ಲೂ ಕಂಪನದ ಅನುಭವಗಳಾಗಿವೆ. ಆದರೆ, ಯಾವುದೇ ಕಟ್ಟಡ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ. ದೆಹಲಿ – ರಾಷ್ಟ್ರ ರಾಜಧಾನಿ ಪ್ರಾಂತ್ಯ (ದೆಹಲಿ – ಎನ್ ಸಿಆರ್) ಹಾಗೂ ನೊಯ್ಡಾ ಮುಂತಾದ ಕಡೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ.

ನೇಪಾಳದಲ್ಲಿ ಸಂಭವಿಸಿದ ಈ ಪ್ರಬಲ ಭೂಕಂಪದಿಂದಾಗಿ ಭಾರತದ ಜನರೂ ಭಯಭೀತರಾಗಿದ್ದಾರೆ. ರಾತ್ರಿ 11.32ರ ಸುಮಾರಿಗೆ ಭೂಕಂಪ ಸಂಭವಿಸಿದ್ದರಿಂದ ಜನರು ಮನೆಯಿಂದ ಹೊರ ಬರಬೇಕಾಯಿತು. ದೆಹಲಿಯ ಪಕ್ಕದಲ್ಲಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದ್ದು, ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವ ಅನೇಕ ಜನರು ಹೊರಬಂದಿದ್ದಾರೆ.

ಮಗನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಗುಂಡು ಹಾರಿಸಿದ ತಂದೆ

ಉತ್ತರ ಪ್ರದೇಶದ ಲಕ್ನೋ, ಬಸ್ತಿ, ಬಾರಾಬಂಕಿ, ಫಿರೋಜಾಬಾದ್, ಅಮೇಥಿ, ಗೊಂಡಾ, ಪ್ರತಾಪಗಢ, ಭದೋಹಿ, ಬಹ್ರೈಚ್, ಗೋರಖ್ಪುರ ಮತ್ತು ಡಿಯೋರಿಯಾ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ, ಜೊತೆಗೆ ಬಿಹಾರದ ಕತಿಹಾರ್, ಮೋತಿಹಾರಿ ಮತ್ತು ಪಾಟ್ನಾದಲ್ಲೂ ಭೂಮಿ ನಡುಗಿದೆ.

RELATED ARTICLES

Latest News