Friday, January 31, 2025
Homeಅಂತಾರಾಷ್ಟ್ರೀಯ | Internationalಡಾಲರ್‌ಗೆ ಬದಲಿಸಲೆತ್ನಿಸಿದರೆ ಹುಷಾರ್, ಬ್ರಿಕ್ಸ್ ರಾಷ್ಟ್ರಗಳಿಗೆ ಟ್ರಂಪ್‌ ವಾರ್ನಿಂಗ್

ಡಾಲರ್‌ಗೆ ಬದಲಿಸಲೆತ್ನಿಸಿದರೆ ಹುಷಾರ್, ಬ್ರಿಕ್ಸ್ ರಾಷ್ಟ್ರಗಳಿಗೆ ಟ್ರಂಪ್‌ ವಾರ್ನಿಂಗ್

Trump repeats tariffs threat to dissuade BRICS nations from replacing US dollar

ವಾಷಿಂಗ್ಟನ್‌, ಜ. 31 (ಪಿಟಿಐ) ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕದ ಡಾಲರ್‌ ಅನ್ನು ಬದಲಿಸಲು ಪ್ರಯತ್ನಿಸಿದರೆ ಬ್ರಿಕ್ಸ್ ರಾಷ್ಟ್ರಗಳ ವಿರುದ್ಧ ಶೇಕಡಾ 100 ರಷ್ಟು ಸುಂಕವನ್ನು ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಮತ್ತೊಮೆ ಎಚ್ಚರಿಸಿದ್ದಾರೆ.

ಬ್ರಿಕ್‌್ಸ ಹತ್ತು ದೇಶಗಳ ಅಂತರ್‌ ಸರ್ಕಾರಿ ಸಂಸ್ಥೆಯಾಗಿದೆ –ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಫ್‌್ಟ, ಇಥಿಯೋಪಿಯಾ, ಇಂಡೋನೇಷಿಯಾ, ಇರಾನ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌‍ ದೇಶಗಳನ್ನು ಒಳಗೊಂಡಿದೆ.

ಬ್ರಿಕ್‌್ಸ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ, ಅಂತಹ ಪ್ರಯತ್ನ ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಟ್ರಂಪ್‌ ತಮ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್‌ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಯುಎಸ್‌‍ ಡಾಲರ್‌ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಬೇಕು ಮತ್ತು ಅಮೆರಿಕಕ್ಕೆ ವಿದಾಯ ಹೇಳಬೇಕು! ಎಂದು ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ತಮ ಸ್ವಂತ ಕರೆನ್ಸಿಯನ್ನು ತೇಲಿಸುವ ಯಾವುದೇ ಕ್ರಮದ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳನ್ನು ಟ್ರಂಪ್‌ ಪದೇ ಪದೇ ಟೀಕಿಸುತ್ತಿದ್ದರೂ, ಇದು ಇದುವರೆಗಿನ ಅವರ ಪ್ರಬಲ ವಿರೋಧವಾಗಿದೆ. ಡಿಸೆಂಬರ್‌ನಲ್ಲೂ ಟ್ರಂಪ್‌ ಇಂತಹ ಕ್ರಮದ ವಿರುದ್ಧ ಬ್ರಿಕ್‌್ಸ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದರು.

RELATED ARTICLES

Latest News