ಬೆಂಗಳೂರು,ಜ.31- ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿರುವ ಇಬ್ಬರು ಕಾಮುಕರ ಬಂಧನಕ್ಕೆ ಬಾಣಸವಾಡಿ ಠಾಣೆ ಪೊಲೀಸರು ಶೋಧ ನಡೆಸುತ್ತಿ ದ್ದಾರೆ.
ಜ.27ರಂದು ಯುವತಿ ಯೊಬ್ಬರು ಕಮನಹಳ್ಳಿಯಿಂದ ವೈಟ್ಫೀಲ್ಡ್ ಗೆ ಹೋಗಲು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಕ್ಯಾಬ್ ಬುಕ್ ಮಾಡಿದ್ದರು.ಸ್ಥಳಕ್ಕೆ ಕ್ಯಾಬ್ ಬಂದಾಗ ಅದರೊಳಗೆ ಕುಳಿತುಕೊಳ್ಳು ತ್ತಿದ್ದಂತೆಯೇ ಇಬ್ಬರು ವ್ಯಕ್ತಿಗಳು ಏಕಾಏಕಿ ಬಂದು ಕಾರಿನಲ್ಲಿ ಆಕೆಯ ಪಕ್ಕದಲ್ಲೇ ಕುಳಿತುಕೊಳ್ಳುತ್ತಾರೆ.
ಇದರಿಂದ ಭಯಗೊಂಡು ಆಕೆ ಕಾರಿನಿಂದ ಇಳಿದು ಓಡಿದರೂ ಆಕೆಯನ್ನ ಹಿಂಬಾಲಿಸಿಕೊಂಡು ಹೋದ ಕಾಮುಕರು ಆಕೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ ಆಕೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕ ಪಕ್ಕದ ನಿವಾಸಿಗಳು ಹಾಗೂ ಸಾರ್ವಜನಿಕರು ಅಲ್ಲಿಗೆ ಬಂದಿದ್ದಾರೆ.
ತಕ್ಷಣ ಕಾಮುಕರು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಯುವತಿ ಬಾಣಾಸವಾಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಮುಕರಿಗಾಗಿ ಹುಡುಕಾಟ ನಡೆಸಿದ್ದಾರೆ.