Friday, January 31, 2025
Homeಬೆಂಗಳೂರುಮದುವೆ ಆಗುವುದಾಗಿ ನಂಬಿಸಿ ಮಹಿಳಾ ಕಾನ್ಸ್‌ಟೇಬಲ್‌ಗೆ 18ರೂ. ಲಕ್ಷ ವಂಚನೆ

ಮದುವೆ ಆಗುವುದಾಗಿ ನಂಬಿಸಿ ಮಹಿಳಾ ಕಾನ್ಸ್‌ಟೇಬಲ್‌ಗೆ 18ರೂ. ಲಕ್ಷ ವಂಚನೆ

Woman constable cheated of Rs 18 lakh by promising marriage

ನೆಲಮಂಗಲ,ಜ.31– ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳೆ ಕಾನ್ಸ್ ಟೇಬಲ್ ಬಳಿ 18 ಲಕ್ಷ ರೂ ಪಡೆದು ವಂಚಿಸಿರುವ ಘಟನೆ ಇಲ್ಲಿ ನಡೆದಿದೆ. ವಂಚಕನ ವಿರುದ್ದ ದಾಬಸ್ ಪೇಟೆ ಪೊಲೀಸರಿಗೆ ಈಗ ನೊಂದ ಮಹಿಳೆ ಕಾನ್‌್ಸಟೆಬಲ್ ದೂರು ನೀಡಿದ್ದಾರೆ.

ಇತ್ತೀಚೆಗೆ ಯಾದವ ಮ್ಯಾಟ್ರಿ ಮೋನಿ ಜಲ ತಾಣಗಳ ಮೂಲಕ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದಾನೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಮಾಡುತ್ತಿದ್ದೇನೆ ಎಂದು ನಂಬಿಸಿ ಆತ ಮನೆಗೂ ಬಂದು ಮದುವೆ ಮಾತುಕತೆ ನಡೆಸಿದ್ದ ನಂತರ ವರದಕ್ಷಿಣೆಯಾಗಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

ಮದುವೆಯಾಗುತ್ತದೆ ಎಂದು ನಂಬಿ ಯುವಕ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.ನಂತರ ಆತನ ವರ್ತನೆಯೇ ಬದಲಾಗಿದೆ ಸಬೂಬು ಹೇಳಿ ತಡಮಾಡಿದ ನಂತರ ಮದುವೆ ನಿರಾಕರಿಸಿದ್ದ. ಹೋಗಲಿ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ.

ಈಗ ಹಣವನ್ನೂ ವಾಪಸ್ ಕೊಡದೇ, ಮೊಬೈಲ್ ಕರೆ ಸ್ವೀಕರಿಸದೆ ನನ್ನನ್ನು ಮೋಸ ಮಾಡಿದ್ದಾನೆಂದು ದಾಬಸ್ ಪೇಟೆ ಪೊಲೀಸರಿಗೆ ಮಹಿಳೆ ಕಾನ್ಸ್ ಟೇಬಲ್ದೂರು ನೀಡಿದ್ದಾರೆ. ತೆಲಂಗಾಣ ಮೂಲದ ಆರೋಪಿಅಶೋಕ್ ಮುಸ್ತಿ ಮತ್ತು ಆತನ ಕುಟುಂಬದವರ ವಿರುದ್ದ ಪ್ರಕರಣ ದಾಖಲಾಗಿದೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಮ್ಯಾಟ್ರಿಮೋನಿ ತಾಣಗಳಲ್ಲಿ ಪರಿಚಯವಾಗುವವರ ಜತೆ ಗೆಳೆತನ, ಹಣಕಾಸು ವ್ಯವಹಾರಗಳನ್ನು ನಡೆಸುವ ಮುನ್ನ ಹೆಚ್ಚಿನ ಪರಿಶೀಲನೆ, ಎಚ್ಚರಿಕೆ ಅಗತ್ಯವಿದೆ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

RELATED ARTICLES

Latest News