ಬೆಂಗಳೂರು,ಜ.31- ಮಾರ್ಷಲ್ಗಳ ಸೇವೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಬಹತ್ ಹಗರಣಕ್ಕೆ ಸಂವಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು, ವಿಶೇಷ ಆಯುಕ್ತರು, ಚೀಫ್ ಮಾರ್ಷಲ್ ರಾಜವೀರ್ ಸಿಂಗ್ ಮತ್ತು ಇತರೆ 16 ಮಂದಿ ಹಿರಿಯ ಅಧಿಕಾರಿಗಳ ವಿರುದ್ಧ ಇಡಿ ಮತ್ತು ಲೋಕಾಯುಕ್ತದಲ್ಲಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದಾರೆ.
ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯದ ನಿರ್ವಹಣೆ ಕಾರ್ಯಗಳಿಗೆಂದು 2017 ರಲ್ಲಿ ಪಾಲಿಕೆಯ ಕೌನ್ಸಿಲ್ ಸಭೆಯ ತೀರ್ಮಾನದಂತೆ ಸರ್ಕಾರದಿಂದ ಅನುಮೋದನೆಯೊಂದಿಗೆ ಮಾರ್ಷಲ್ಗಳನ್ನು ನಿಯೋಜಿಸಿಕೊಳ್ಳಲಾಗಿತ್ತು.
ಆದರೆ, ಕಾಲಾನುಕ್ರಮದಲ್ಲಿ ಕೆರೆಗಳ ಭದ್ರತೆಗೆಂದು, ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕಗಳ ಭದ್ರತೆಗೆಂದು, ಇಂದಿರಾ ಕ್ಯಾಂಟೀನ್ ಗಳ ಭದ್ರತೆಗೆಂದು 700 ಕ್ಕೂ ಹೆಚ್ಚು ಮಾರ್ಷಲ್ ಗಳನ್ನು ನಿಯೋಜನೆ ಮಾಡಿಕೊಂಡಿರುವುದಾಗಿ ತಪ್ಪು ಮಾಹಿತಿಗಳನ್ನು ನೀಡುತ್ತಾ, ನಕಲಿ ದಾಖಲೆಗಳನ್ನು ಸಷ್ಟಿಸಿ ಪ್ರತೀ ವರ್ಷ ಹತ್ತಾರು ಕೋಟಿ ರೂಪಾಯಿಗಳಷ್ಟು ಹಣವನ್ನು ಲೂಟಿ ಹೊಡೆಯುತ್ತಿರುವ ಬಗ್ಗೆ ಈ ಹಿಂದೆ ಲೋಕಾಯುಕ್ತ ಸಂಸ್ಥೆಯಲ್ಲಿ ದೂರನ್ನು ನೀಡಿದ್ದೇ.
2017 ರ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವತ್ತರಾಗಿರುವ ನಿವತ್ತ ಸೈನಿಕರನ್ನು ಮಾರ್ಷಲ್ ಸೇವೆಗಳಿಗೆ ಬಳಸಿಕೊಳ್ಳಬೇಕೆಂದು ಅತ್ಯಂತ ಸ್ಪಷ್ಟವಾಗಿ ನಿರ್ಣಯ ತೆಗೆದುಕೊಂಡಿದ್ದರೂ ಸಹ ಯಾವ ಒಂದು ವಾರ್ಡಿನಲ್ಲಿಯಾಗಲೀ, ತ್ಯಾಜ್ಯ ಸಂಸ್ಕರಣಾ ಘಟಕದಲ್ಲಾಗಲೀ, ಇಂದಿರಾ ಕ್ಯಾಂಟೀನ್ ಗಳಲ್ಲಾಗಲೀ, ಕೆರೆಗಳಲ್ಲಾಗಲೀ ಒಬ್ಬರೇ ಒಬ್ಬ ನಿವತ್ತ ಸೈನಿಕರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳದೇ ಕೇವಲ ಎನ್ಸಿಸಿ ಸಂಪೂರ್ಣಗೊಳಿಸಿರುವ ವ್ಯಕ್ತಿಗಳನ್ನು ಮಾತ್ರವೇ ಮಾರ್ಷಲ್ ಗಳ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ.
ಪ್ರತಿಯೊಬ್ಬ ಮಾರ್ಷಲ್ ಗೆ ತಲಾ 25 ಸಾವಿರ ರೂಪಾಯಿ ವೇತನವನ್ನು ಪಾಲಿಕೆಯು ನೀಡುತ್ತಿದ್ದು, ವಾಸ್ತವವಾಗಿ ಮಾರ್ಷಲ್ ಗಳಿಗೆ ಕೇವಲ 17 ರಿಂದ 18 ಸಾವಿರ ರೂಪಾಯಿ ಮಾತ್ರವೇ ಹಣ ಸಂದಾಯವಾಗುತ್ತಿದೆ.
ಪ್ರತಿಯೊಬ್ಬ ಮಾರ್ಷಲ್ ಗಳಿಗೆ 05 ಲಕ್ಷ ರೂ.ಗಳಷ್ಟು ಮೊತ್ತದ ವಿಮೆಯನ್ನು ಮಾಡಿಸಲಾಗಿದ್ದು, ವಿಮೆಯ ಹಣವನ್ನು ಪಾಲಿಕೆಯ ಬೊಕ್ಕಸದಿಂದಲೇ ಭರಿಸುತ್ತಿದೆ. ಆದರೆ, ಈ ಮಾರ್ಷಲ್ ಗಳು ಖಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ದಾಖಲಾದ ಸಂದರ್ಭದಲ್ಲಿ ಆ ವಿಮೆ ಮೊತ್ತವನ್ನು ಪಡೆದುಕೊಳ್ಳದೆ, ಪಾಲಿಕೆಯ ಬೊಕ್ಕಸದಿಂದಲೇ ಆಸ್ಪತ್ರೆ ವೆಚ್ಛವನ್ನೂ ಸಹ ಭರಿಸುತ್ತಿರುವುದು ದೊಡ್ಡ ವಂಚನೆಯಾಗಿದೆ.
ಮಾರ್ಷಲ್ಗಳ ಸೇವೆಗಳಿಗೆ ಸಂಬಂಧಿಸಿದಂತೆ ಕಳೆದ ನಾಲ್ಕೈದು ವರ್ಷಗಳಲ್ಲಿ 16 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣಕ್ಕೆ ದಾಖಲೆಗಳನ್ನು ಒದಗಿಸುತ್ತಿಲ್ಲವೆಂದು ಮಹಾ ಲೆಕ್ಕ ಪರಿಶೋಧಕರು ನಿರಂತರವಾಗಿ 15ಕ್ಕೂ ಹೆಚ್ಚು ಬಾರಿ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದರೂ ಸಹ ಪಾಲಿಕೆಯ ಮುಖ್ಯ ಆಯುಕ್ತರಾಗಲೀ, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ) ರವರಾಗಲೀ, ವಿಶೇಷ ಆಯುಕ್ತರು (ಆರೋಗ್ಯ) ರವರಾಗಲೀ ಮುಖ್ಯ ಲೆಕ್ಕ ಪರಿಶೋಧಕರ ಆಕ್ಷೇಪಣೆಗಳಿಗೆ ಕವಡೆ ಕಾಸಿನಷ್ಟೂ ಬೆಲೆಯನ್ನು ಕೊಡದೇ ಕಡೆಗಣಿಸುತ್ತಿರುವುದನ್ನು ನೋಡಿದರೆ ರಾಜ್ ವೀರ್ ಸಿಂಗ್ ಎಂಬ ಮಹಾ ವಂಚಕನ ಜೊತೆಗೆ ಅವರುಗಳು ಶಾಮೀಲಾಗಿರುವ ಅನುಮಾನಗಳು ವ್ಯಕ್ತವಾಗುತ್ತಿದೆ.ಕಣ್ಣು ಮುಚ್ಚಿಕೊಂಡು ನಕಲಿ ದಾಕಲೆಗಳಿಗೆ ಸಹಿಗಳನ್ನು ಹಾಕುತ್ತಾ, ಮಹಾ ವಂಚನೆಯಲ್ಲಿ ಮತ್ತು ಮಹಾ ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆ.
2017ರಿಂದ ಇಲ್ಲಿಯವರೆಗೆ 160 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೇವಲ ಮಾರ್ಷಲ್ ಗಳ ಸೇವೆಗೆಂದು ವೆಚ್ಛ ಮಾಡಲಾಗಿದೆ, ಇದರ ಪೈಕಿ ಶೇ. 50 ಕ್ಕೂ ಹೆಚ್ಚು ಹಣವನ್ನು ಮಾರ್ಷಲ್ ಗಳ ಸೇವೆಯ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ.
ಇದರ ಜೊತೆಗೆ ಆಸ್ಪತ್ರೆ ಸೇವೆಗಳಿಗೆಂದು 300ಕ್ಕೂ ಹೆಚ್ಚು ಮಾರ್ಷಲ್ ಗಳ ಸೇವೆ ಅಗತ್ಯವಿದೆ ಎಂದು ಟೆಂಡರ್ ಅನ್ನು ಕರೆಯಲು ಈಗಾಗಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅಲ್ಲಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮಾರ್ಷಲ್ ಗಳ ಸಂಖ್ಯೆ ಮುಂದಿನ ಎರಡು ತಿಂಗಳೊಳಗಾಗಿ 1,100 ಕ್ಕೂ ಹೆಚ್ಚು ಆಗುತ್ತದೆ ಎಂಬುದು ಆಶ್ಚರ್ಯಕರ ವಿಷಯ.
ಹೀಗಾಗಿ ಆಯುಕ್ತ ತುಷಾರ್ಗಿರಿನಾಥ್ ಸೇರಿದಂತೆ 20ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ವಂಚನೆ, ಭ್ರಷ್ಟಾಚಾರ, ನಕಲಿ ದಾಖಲೆ ತಯಾರಿಕೆ, ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕರ ಹಣ ದುರ್ಬಳಕೆ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ ಹಾಗೂ ಇವರುಗಳ ಕಾನೂನು ಬಾಹಿರ ಕಾರ್ಯಗಳನ್ನು ಅವರವರ ಸೇವಾ ಪುಸ್ತಕ ದಲ್ಲಿ ನಮೂದಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ವಿನಂತಿಸಿಕೊಳ್ಳಲಾಗಿದೆ ಹಾಗೂ ಈ ಮಾರ್ಷಲ್ ಗಳಿಗೆ ಸಂಬಂಧಿಸಿದ ಬಹತ್ ಲೂಟಿ ಹಗರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.