Saturday, February 1, 2025
Homeರಾಷ್ಟ್ರೀಯ | Nationalಬಜೆಟ್‌ನಲ್ಲಿ ಪ್ರಮುಖ 10 ಅಂಶಗಳಿಗೆ ಆದ್ಯತೆ : ನಿರ್ಮಲಾ ಸೀತಾರಾಮನ್‌

ಬಜೆಟ್‌ನಲ್ಲಿ ಪ್ರಮುಖ 10 ಅಂಶಗಳಿಗೆ ಆದ್ಯತೆ : ನಿರ್ಮಲಾ ಸೀತಾರಾಮನ್‌

Budget to prioritize ten key points: Nirmala Sitharaman

ನವದೆಹಲಿ,ಫೆ.1- ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಪ್ರಮುಖವಾಗಿ 10 ಅಂಶಗಳ ಗುರಿ ಇಡಲಾಗಿದೆ ಎಂದು ಹೇಳಿದ್ದಾರೆ.

ಅಭಿವೃದ್ದಿಯ ಕಾರ್ಯಕ್ರಮಗಳು, ಗರೀಬ್‌, ಯುವಕರು, ಅನ್ನದಾತ, ನಾರಿಯರನ್ನು ಕೇಂದ್ರಿಕರಿಸುವುದು ಸೇರಿದಂತೆ ಬಜೆಟ್‌ನಲ್ಲಿ ಹತ್ತು ಅಂಶಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಮ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಅಧಿಕ ಇಳುವರಿ ಬೀಜಗಳ ಉತ್ಪಾದನೆ ಮತ್ತು ಸಂಶೋಧನೆ, ಎನ್‌ಸಿಸಿಎಫ್‌ ಕಡೆಯಿಂದ ಧಾನ್ಯಗಳ ಸಂಗ್ರಹಣೆ, ಹಣ್ಣು ಮತ್ತು ತರಕಾರಿ ಬೆಳೆಗೆ ಪ್ರೋತ್ಸಾಹ ನೀಡಲಾಗುವುದು. ರಾಜ್ಯಗಳಲ್ಲಿ ಸಹಯೋಗದೊಂದಿಗೆ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

2025-26ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಿದ ಅವರು, ಕಡಿಮೆ ಉತ್ಪಾದಕತೆಯನ್ನು ಹೊಂದಿರುವ ನೂರು ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಧನಧಾನ್ಯ ಯೋಜನೆಯನ್ನು ಪ್ರಾರಂಭ ಮಾಡಲಾಗುತ್ತಿದೆ. ಇದು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಿದ್ದು, ಪಂಚಾಯ್ತಿ ಮಟ್ಟದಲ್ಲಿ ಆಹಾರ ಸಂಗ್ರಹಣೆಯನ್ನು ಹೆಚ್ಚಿಸಲಿದೆ. ದೇಶದಲ್ಲಿ ಒಟ್ಟು 1.7 ಕೋಟಿ ರೈತರನ್ನು ಒಳಗೊಂಡಿರುತ್ತದೆ.

ಈ ಯೋಜನೆಯನ್ನು ಪ್ರಾರಂಭಿಸಲು ಎಲ್ಲಾ ರಾಜ್ಯಗಳ ಜೊತೆ ನಾವು ಮಾತುಕತೆ ನಡೆಸಲಿದ್ದೇವೆ. ಇದು ಸಾಕಷ್ಟು ಅವಕಾಶಗಳನ್ನು ನೀಡಲಿದ್ದು, ಹೆಚ್ಚಿನ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ.

ನಮ ಸರ್ಕಾರವು ದ್ವಿದಳ ಧಾನ್ಯದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಿದೆ. ಉರಡ್‌ , ಟುವರ್‌ ಮತ್ತು ಮಸೂದ್‌ನ್ನು ಕೇಂದ್ರೀಕರಿಸಲಾಗುವುದು. ರೈತರ ಆದಾಯ ಮಟ್ಟವನ್ನು ಹೆಚ್ಚಿಸಲು ವಿಶೇಷ ಯೋಜನೆಯನ್ನು ರೂಪಿಸಿದ್ದೇವೆ.

ಬಿಹಾರದಲ್ಲಿ ಇದನ್ನು ಜಾರಿಗೊಳಿಸಿ, ಮಖಾನ ಮಂಡಳಿಯನ್ನು ಸ್ಥಾಪನೆ ಮಾಡಲಾಗುವುದು. ಇದರ ಮೂಲಕ ಎಲ್ಲಾ ರಾಜ್ಯಗಳು ಅನುಕೂಲ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

RELATED ARTICLES

Latest News