ನವದೆಹಲಿ,ಫೆ.1- ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ 7 ರೂ. ಇಳಿಕೆಯಾಗಿದ್ದು, ವಿಮಾನ ಇಂಧನದ ದರದಲ್ಲಿ (ಎಟಿಎಫ್) ಏರಿಕೆಯಾಗಿದೆ.
ಪರಿಷ್ಕೃತ ದರ ಶನಿವಾರದಿಂದಲೇ ಜಾರಿಗೆ ಬರಲಿದೆ. ಶನಿವಾರದಿಂದ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಐಉ ಸಿಲಿಂಡರ್ ಚಿಲ್ಲರೆ ಮಾರಾಟದ ಬೆಲೆ 1,804 ರೂ.ಗಳ ಬದಲಿಗೆ 1,797ರೂ. ಆಗಿರಲಿದೆ.
ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್) ದರವು ಪ್ರತಿ 1 ಸಾವಿರ ಲೀಟರ್ ಗೆ 5,078 (ಶೇ.5.6ರಷ್ಟು) ಏರಿಕೆ ಮಾಡಲಾಗಿದೆ. ಪರಿಷ್ಕೃತ ದರದಿಂದ ವಿಮಾನಗಳಲ್ಲಿ ಬಳಸುವ ಇಂಧನದ ದರ ದಿಲ್ಲಿಯಲ್ಲಿ 95,533ರೂ. ಮತ್ತು ಮುಂಬೈಯಲ್ಲಿ 84,511 ಆಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಮಂಡಿಸಲಿರುವ ಕೇಂದ್ರ ಬಜೆಟ್‌ಗೆ ಮುನ್ನ ಈ ಬೆಳವಣಿಗೆ ನಡೆದಿದೆ.
ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ದರವನ್ನು 62 ರೂ.ಗಳಷ್ಟು ಹೆಚ್ಚಿಸಿವೆ. ಈ ಬೆಲೆ ಹೊಂದಾಣಿಕೆಗಳು ತಮ ಕಾರ್ಯಾಚರಣೆಗಳಿಗಾಗಿ ಎಲ್ಪಿಜಿ ಮೇಲೆ ಹೆಚ್ಚು ಅವಲಂಬಿತವಾಗಿರುವ ವಾಣಿಜ್ಯ ಸಂಸ್ಥೆಗಳು ಮತ್ತು ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ಆಧಾರದ ಮೇಲೆ ಐಉ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಹೊಸ ಪರಿಷ್ಕರಣೆಯಲ್ಲಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 7 ರೂ. ಇಳಿಕೆಯಾಗಿದೆ. ಇದರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಸಿಲಿಂಡರ್ ಚಿಲ್ಲರೆ ಮಾರಾಟ ಬೆಲೆ ಈಗ 1,797 ರೂ. ತಮ ದೈನಂದಿನ ಕೆಲಸಗಳಿಗಾಗಿ ಎಲ್ಪಿಜಿಯನ್ನು ಅವಲಂಬಿಸಿರುವ ವ್ಯವಹಾರಗಳಿಗೆ ಬೆಲೆ ಕಡಿತವು ಸ್ವಲ್ಪ ಪರಿಹಾರವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಜಾಗತಿಕ ಕಚ್ಚಾ ತೈಲ ದರಗಳಲ್ಲಿನ ಬದಲಾವಣೆಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ತೈಲ ಕಂಪನಿಗಳು ನಿಯಮಿತವಾಗಿ ಐಉ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಪರಿಷ್ಕರಣೆಯಲ್ಲಿ ಮನೆಯ ಅಡುಗೆಗೆ ಬಳಸುವ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ.