Tuesday, January 27, 2026
Homeರಾಷ್ಟ್ರೀಯವೀರಪ್ಪನ್‌ ಹುಟ್ಟಡಗಿಸಿದ್ದ ನಿವೃತ್ತ ಐಪಿಎಸ್‌‍ ಅಧಿಕಾರಿ ವಿಜಯ್‌ ಕುಮಾರ್‌ಗೆ ಪದಶ್ರೀ ಪ್ರಶಸ್ತಿ

ವೀರಪ್ಪನ್‌ ಹುಟ್ಟಡಗಿಸಿದ್ದ ನಿವೃತ್ತ ಐಪಿಎಸ್‌‍ ಅಧಿಕಾರಿ ವಿಜಯ್‌ ಕುಮಾರ್‌ಗೆ ಪದಶ್ರೀ ಪ್ರಶಸ್ತಿ

Veteran Cop K Vijay Kumar Awarded Padma Shri for Daring Operations

ಶ್ರೀನಗರ,ಜ.27- ದಂತಚೋರ, ಅರಣ್ಯ ದರೋಡೆಕೋರ ವೀರಪ್ಪನ್‌ನನ್ನು ಕೊನೆಗೊಳಿಸಲು ಪಡೆಗಳನ್ನು ಮುನ್ನಡೆಸಿದ ತಮಿಳುನಾಡಿನ ನಿವೃತ್ತ ಐಪಿಎಸ್‌‍ ಅಧಿಕಾರಿ ಕೆ.ವಿಜಯ್‌ಕುಮಾರ್‌ ಅವರಿಗೆ ನಾಗರಿಕ ಸೇವಾ ವಿಭಾಗದಲ್ಲಿ ಪದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸೂಪರ್‌ ಕಾಪ್‌ ಎಂದೇ ಕರೆಯಲ್ಪಡುವ ವಿಜಯಕುಮಾರ್‌ ಅವರ 2004ರಲ್ಲಿ ಆಪರೇಷನ್‌ ಕೋಕೂನ್‌ ಅನ್ನು ಮುನ್ನಡೆಸಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ, ಅದು ಅದೇ ವರ್ಷ ವೀರಪ್ಪನ್‌ ಸಾವಿಗೆ ಕಾರಣವಾಗಿತ್ತು.

2010ರಿಂದ ಎರಡು ವರ್ಷಗಳ ಕಾಲ ಕೇಂದ್ರ ಮೀಸಲು ಪೊಲೀಸ್‌‍ ಪಡೆ (ಸಿಆರ್‌ಪಿಎಫ್‌)ಯ ಮಹಾನಿರ್ದೇಶಕ ಹುದ್ದೆ ಸೇರಿದಂತೆ ಹಲವಾರು ಉನ್ನತ ಹುದ್ದೆಗಳನ್ನು ಹೊಂದಿದ್ದರು. 2022ರಲ್ಲಿ ಎಡಪಂಥೀಯ ಉಗ್ರವಾದವನ್ನು ಎದುರಿಸಲು ನಿರ್ದಿಷ್ಟವಾಗಿ ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಶೀರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌‍ಎಫ್‌)ಯ ಇನ್ಸ್ ಪೆಕ್ಟರ್‌ ಜನರಲ್‌ ಆಗಿದ್ದರು. 2018ರಲ್ಲಿ ಅವರನ್ನು ಜಮು ಮತ್ತು ಕಾಶೀರ ರಾಜ್ಯಪಾಲರ ಸಲಹೆಗಾರರನ್ನಾಗಿಯೂ ಇವರನ್ನು ನೇಮಿಸಲಾಗಿತ್ತು.

ವಿಶೇಷ ರಕ್ಷಣಾ ಗುಂಪಿನಲ್ಲಿ (ಎಸ್‌‍ಪಿಜಿ) ಸೇವೆ ಸಲ್ಲಿಸಿದ್ದು, ದಿವಂಗತ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ಭದ್ರತೆ ಒದಗಿಸಿದ್ದರು. ಅದಾದ ನಂತರ ತಮಿಳುನಾಡಿನ ಮುಖ್ಯಮಂತ್ರಿ ದಿ.ಜಯಲಲಿತಾ ಅವರಿಗಾಗಿ ವಿಶೇಷ ಭದ್ರತಾ ಗುಂಪು ಅನ್ನು ರಚಿಸಿ ಮುನ್ನಡೆಸಿದ್ದರು. ತಮಿಳುನಾಡು ಕೇಡರ್‌ಗೆ ಸೇರಿದ 1975ರ ಬ್ಯಾಚ್‌ ಅಧಿಕಾರಿ 2012 ರಲ್ಲಿ ನಿವೃತ್ತರಾದರು.

ವಿಜಯ್‌ಕುಮಾರ್‌ ಅವರಿಗೆ ಶುಭ ಕೋರಿರುವ ಸಿಆರ್‌ಪಿಎಫ್‌ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದು, ದಿ ಸೂಪರ್‌ ಕಾಪ್‌ ಆನರಡ್‌ ಎಂಬ ಶೀರ್ಷಿಕೆಯಡಿ ಜೀವಂತ ಐಕಾನ್‌, ಒಂದು ದಂತಕಥೆಯ ಸೆಲ್ಯೂಟ್‌… ಡಿಜಿ ಸಿಆರ್‌ಪಿಎಫ್‌ ಜಿ ಪಿ ಸಿಂಗ್‌ ಮತ್ತು ಎಲ್ಲಾ ಶ್ರೇಣಿಗಳು ಭಾರತದ ಆಂತರಿಕ ಭದ್ರತೆಯನ್ನು ಮರು ವ್ಯಾಖ್ಯಾನಿಸಿದ ದಾರ್ಶನಿಕನಿಗೆ ತಮ ಆತೀಯ ಅಭಿನಂದನೆಗಳು ಎಂದು ತಿಳಿಸಿದೆ.

ಚೆನ್ನೈ ಪೊಲೀಸ್‌‍ ಆಯುಕ್ತ ಸ್ಥಾನದಿಂದ ನಿರ್ದೇಶಕ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ರಾಷ್ಟ್ರೀಯ ಪೊಲೀಸ್‌‍ ಅಕಾಡೆಮಿಯವರೆಗೆ, ಅವರ ವೃತ್ತಿಜೀವನವು ನಾಯಕತ್ವದಲ್ಲಿ ಒಂದು ಮಾಸ್ಟರ್‌ಕ್ಲಾಸ್‌‍ ಆಗಿದೆ ಎಂದು ಆರ್‌ಪಿಎಸ್‌‍ ಶ್ಲಾಘಿಸಿದೆ.

ಇಡೀ ಪಡೆಗೆ ಅಪಾರ ಹೆಮೆಯ ಕ್ಷಣ. 2017ರಲ್ಲಿ ವಿಜಯಕುಮಾರ್‌ ಅವರು ವೀರಪ್ಪನ್‌: ಚೇಸಿಂಗ್‌ ದಿ ಬ್ರಿಗೇಂಡ್‌ ಪುಸ್ತಕವನ್ನು ಬಿಡುಗಡೆ ಮಾಡಿದ್ದರು ಎಂದು ಸರಿಸಿದೆ.

RELATED ARTICLES

Latest News