ಮಹಾಕುಂಭ ನಗರ, ಫೆ.2- ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ 77 ರಾಜತಾಂತ್ರಿಕರು ಸೇರಿದಂತೆ 118 ವಿದೇಶಿ ಪ್ರಜೆಗಳು ಪುಣ್ಯ ಸ್ನಾನ ಮಾಡಿ ಗಮನ ಸೆಳೆದಿದ್ದಾರೆ.
ವಿವಿಧ ದೇಶಗಳ ರಾಯಭಾರಿಗಳು ಮತ್ತು ಅವರ ಕುಟುಂಬಗಳು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತಿಕತೆಯನ್ನು ಮೆಚ್ಚಿ ಪುಣ್ಯ ಸ್ನಾನ ಮಾಡಿದ್ದಲ್ಲದೆ, ಈ ಬಹತ್ ಆಧ್ಯಾತಿಕ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಡಿದ ವ್ಯವಸ್ಥೆಗಳನ್ನು ಶ್ಲಾಘಿಸಿದ್ದಾರೆ.
ನಿಯೋಗವು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಕತಜ್ಞತೆ ಸಲ್ಲಿಸಿತು ಮತ್ತು ಈ ಪವಿತ್ರ ಸ್ಥಳವನ್ನು ತಲುಪುವುದು ಒಂದು ಅನನ್ಯ ಅನುಭವ ಎಂದು ಬಣ್ಣಿಸಿದರು.ಮಹಾಕುಂಭದ ಈ ಐತಿಹಾಸಿಕ ಸಂದರ್ಭವನ್ನು ನೋಡಿದ ನಿಯೋಗದ ಹಲವಾರು ಸದಸ್ಯರು ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಗೌರವವನ್ನು ಪಡೆದರು.
ಕೊಲಂಬಿಯಾದ ರಾಯಭಾರಿ ವಿಕ್ಟರ್ ಚಾವೇರಿ ಅವರು, ಇದು ನನ್ನ ಜೀವನದ ಅದ್ಭುತ ಅನುಭವವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಮೆ ಅನುಭವಿಸಬೇಕಾದ ಅವಕಾಶವಾಗಿದೆ. ಮಹಾಕುಂಭದಲ್ಲಿ ಇಲ್ಲಿನ ಜನರ ಆಧ್ಯಾತಿಕತೆ ಮತ್ತು ಶಕ್ತಿಯನ್ನು ಅನುಭವಿಸುವುದು ಬಹಳ ವಿಶೇಷವಾದ ಅನುಭವ ಎಂದಿದ್ದಾರೆ.
ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಮತ್ತು ಗಂಗಾ, ಯಮುನಾ ಮತ್ತು ನದಿಗಳ ಸಂಗಮದಲ್ಲಿ ಅನೇಕ ಜನರು ಆಧ್ಯಾತಿಕತೆಯಲ್ಲಿ ಮುಳುಗಿರುವುದನ್ನು ನೀವು ನೋಡಿದಾಗ ಇಲ್ಲಿ ಶಾಂತಿ ಮತ್ತು ಮಾನವೀಯತೆಯ ಸಂದೇಶವಿದೆ ಎಂದಿದ್ದಾರೆ.
ರಷ್ಯಾದ ರಾಯಭಾರಿಯ ಪತ್ನಿ ಡಯಾನಾ ಅವರು, ಈ ಪವಿತ್ರ ಕಾರ್ಯಕ್ರಮದ ಭಾಗವಾಗಲು ನಮಗೆ ಅವಕಾಶ ನೀಡಿದ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಇಲ್ಲಿ ಸ್ನಾನ ಮಾಡಿದ ನಂತರ ನಾನು ಸಾಕಷ್ಟು ಆಧ್ಯಾತಿಕ ಶಾಂತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇಲ್ಲಿನ ನೀರಿನ ಸುರಕ್ಷತೆ, ಸಂಘಟನೆ ಮತ್ತು ಶುಚಿತ್ವದಿಂದ ಪ್ರಭಾವಿತರಾದ ಭಾರತೀಯ ಸಂಸ್ಕೃತಿಯು ಅತ್ಯಂತ ವೈವಿಧ್ಯಮಯ ಮತ್ತು ಆಳವಾಗಿ ಬೇರೂರಿದೆ ಮತ್ತು ಇಲ್ಲಿನ ಜನರು ಅದನ್ನು ಸಂರಕ್ಷಿಸಿ ಅನುಸರಿಸುವುದನ್ನು ನೋಡುವುದು ಅದ್ಭುತವಾಗಿದೆ ಎಂದಿದ್ದಾರೆ.