ನವದೆಹಲಿ,ಫೆ.2 – ದೆಹಲಿ ವಿಧಾನಸಭೆ ಚುನಾವಣೆ-2025ರ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಚುನಾವಣೆಯಲ್ಲಿ ಬಿಜೆಪಿ, ಎಎಪಿ ನೇರ ಎದುರಾಳಿಗಳು. 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ಫೆ.5ರಂದು. ಫೆ.8ಕ್ಕೆ ಫಲಿತಾಂಶ ಪ್ರಕಟ. ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 36.
ದೆಹಲಿ ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ಎದುರಾಳಿಗಳು. ಎಎಪಿ 2015, 2020ರ ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ. 2025ರಲ್ಲಿಯೂ ಗೆದ್ದು, ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಈ ಬಾರಿ ಎಎಪಿಗೆ ಅಧಿಕಾರ ತಪ್ಪಿಸಬೇಕು ಎಂದು ಬಿಜೆಪಿ, ಕಾಂಗ್ರೆಸ್ ತಂತ್ರ ರೂಪಿಸಿವೆ.
ದೆಹಲಿ ವಿಧಾನಸಭೆ ಚುನಾವಣೆ-2025ರ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯ ವರದಿ ಪ್ರಕಾರ ಬಿಜೆಪಿಯಿಂದ ಎಎಪಿ ಪ್ರಬಲ ಪೈಪೋಟಿಯನ್ನು ಎದುರಿಸಲಿದೆ. ಹಲವು ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿಲ್ಲ, ಇದು ಅಚ್ಚರಿಗೆ ಕಾರಣವಾಗಿದೆ.
ಪೂರ್ವ ಸಮೀಕ್ಷೆಯ ಪ್ರಕಾರ ಆಮ್ ಆದಿ ಪಕ್ಷವೇ ಗೆಲುವು ಸಾಧಿಸಲಿದೆ. ಆದರೆ 2015, 2020ಕ್ಕೆ ಹೋಲಿಕೆ ಮಾಡಿದರೆ ಸೀಟುಗಳ ಸಂಖ್ಯೆಯಲ್ಲಿ ಕುಸಿತವಾಗಲಿದೆ. ಬಿಜೆಪಿ ಎಎಪಿಗೆ ಪ್ರಬಲ ಎದುರಾಳಿಯಾಗಲಿದೆ.ಚುನಾವಣೆಯಲ್ಲಿ ಎಎಪಿ 38-40 ಸೀಟುಗಳನ್ನು ಪಡೆದು ಸರಳ ಬಹುಮತ ಪಡೆಯಲಿದೆ. ಆದರೆ ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಯಾವುದೇ ಸೀಟು ಸಿಗುವುದಿಲ್ಲ ಎಂದು ಅಂದಾಜಿಸಲಾಗಿದೆ. 2020ರಲ್ಲಿಯೂ ಕಾಂಗ್ರೆಸ್ ರಾಜ್ಯದಲ್ಲಿ ಒಂದೇ ಒಂದು ಸೀಟು ಗೆಲ್ಲಲು ವಿಫಲವಾಗಿತ್ತು.
30-32 ಸೀಟುಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಈ ಮೊದಲು ಬಿಜೆಪಿ 31-33 ಸೀಟು ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿತ್ತು. ಆದರೆ ಈಗ ಚುನಾವಣಾ ಚಿತ್ರಣ ಬದಲಾಗಿದ್ದು, ಬಿಜೆಪಿಯ ಸೀಟುಗಳು ಎಎಪಿ ಕಡೆಗೆ ಸಾಗಿವೆ ಎಂದು ಸಮೀಕ್ಷೆ ಹೇಳಿದೆ.ದೆಹಲಿಯ ಪ್ರಮುಖ ಸೀಟುಗಳ ಪೈಕಿ ನವದೆಹಲಿ ಕ್ಷೇತ್ರದಲ್ಲಿ ಅರವಿಂದ ಕೇಜ್ರಿವಾಲ್ ಮುನ್ನಡೆ ಪಡೆಯಲಿದ್ದಾರೆ. ಬಿಜೆಪಿಯಿಂದ ಪರ್ವೇಶ್ ವರ್ಮಾ, ಕಾಂಗ್ರೆಸ್ನಿಂದ ಸಂದೀಪ್ ದೀಕ್ಷಿತ್ ಎದುರಾಳಿಗಳು. ಕೇಜ್ರಿವಾಲ್ ಗೆಲ್ಲುವ ಸಾಧ್ಯತೆ ಶೇ 66ರಿಂದ 85ರಷ್ಟಿದೆ.
ಕಲ್ಕಜಿ ಕ್ಷೇತ್ರದಲ್ಲಿ ದೆಹಲಿ ಮುಖ್ಯಮಂತ್ರಿ ಅತಿಷಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ರಮೇಶ್ ಬಿಧೂರಿ, ಕಾಂಗ್ರೆಸ್ನಿಂದ ಅಲ್ಕ ಲಾಂಬಾ ಅಭ್ಯರ್ಥಿಗಳು. ಶೇ 25 ರಿಂದ 33ರಷ್ಟು ಆತಿಶಿಗೆಲುವು ಸಾಧಿಸುವ ಸಾಧ್ಯತೆ ಇದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗ್ಪುರ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ತರ್ವೀಂದರ್ ಎಸ್ ಮಾರ್ವಾ ಮತ್ತು ಕಾಂಗ್ರೆಸ್ನಿಂದ ಫರಾದ್ ಸೂರಿ ಕಣದಲ್ಲಿದ್ದಾರೆ. ಸಮೀಕ್ಷೆಗಳ ಪ್ರಕಾರ ಶೇ 55 ರಿಂದ 70ರಷ್ಟು ಸಿಸೋಡಿಯಾ ಮುನ್ನಡೆ ಪಡೆಯಲಿದ್ದಾರೆ.ಚುನಾವಣೆಯಲ್ಲಿ ಎಎಪಿ, ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ-ಎಎಪಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲು ವಿಫಲವಾಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ದೆಹಲಿ ಚುನಾವಣೆ ಕುರಿತು ಇದುವರೆಗೂ ಬಂದಿರುವ ಎಲ್ಲಾ ಸಮೀಕ್ಷೆಗಳು ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಎಎಪಿ, ಬಿಜೆಪಿ ನಡುವೆ ಚುನಾವಣೆಯಲ್ಲಿ ನೇರ ಪೈಪೋಟಿ ಇರಲಿದೆ ಎಂದು ಅಂದಾಜಿಸಿವೆ. ಮತದಾರ ಯಾವ ತೀರ್ಪು ನೀಡಲಿದ್ದಾನೆ? ಎಂಬುದು ಫೆಬ್ರವರಿ 8ರ ಶನಿವಾರ ತಿಳಿಯಲಿದೆ.