Friday, February 7, 2025
Homeರಾಜ್ಯBIG NEWS : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ

BIG NEWS : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ

No grace marks for SSLC students

ಬೆಂಗಳೂರು : ಮುಂದಿನ ಮಾರ್ಚ್‌ 21ರಿಂದ ಏ.4ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1ಕ್ಕೆ ಈ ಬಾರಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಕೃಪಾಂಕ(ಗ್ರೇಸ್‌‍ ಮಾಮಾರ್ಕ್ಸ್ ) ನೀಡುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತೊಮೆ ಸ್ಪಷ್ಟಪಡಿಸಿದೆ.

ಕಳೆದ ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಿತದೃಷ್ಟಿಯಿಂದ 20 ಅಂಕಗಳನ್ನು ಕೃಪಾಂಕ ರೂಪದಲ್ಲಿ ನೀಡಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.

ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಾಕ್ಷರತಾ ಮತ್ತು ಶೈಕ್ಷಣಿಕ ಇಲಾಖೆಯ ಸಚಿವ ಮಧುಬಂಗಾರಪ್ಪ ಅವರು, ಮಾರ್ಚ್‌ 21ರಂದು ಏ.4ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗ್ರೇಸ್‌‍ಮಾರ್ಕ್‌್ಸ ನೀಡುವುದಿಲ್ಲ. ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲಕ್ಕ ಒಳಗಾಗುವುದು ಬಡ ಎಂದು ಮನವಿ ಮಾಡಿದರು.

ಕಳೆದ ವರ್ಷ ಗ್ರೇಸ್‌‍ ಮಾರ್ಕ್‌್ಸ ನೀಡಿದ್ದರಿಂದ ಸಾಕಷ್ಟು ಗದ್ದಲ ಉಂಟಾಗಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗಬಾರದೆಂದು ನಾವು ಗ್ರೇಸ್‌‍ ಮಾರ್ಕ್‌್ಸ ಎಗೆದು ಹಾಕಿದ್ದೇವೆ. ವಿದ್ಯಾರ್ಥಿಗಳಿಗೂ ಹಿಂದಿನ ವ್ಯವಸ್ಥೆಯೇ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ನಿರ್ದೇಶಕರು, ಉಪನಿರ್ದೇಶಕರು, ಶಿಕ್ಷಣ ಇಲಾಖೆ ಮತ್ತು ಮಕ್ಕಳು, ಶಿಕ್ಷಕರು, ತಜ್ಞರ ಜೊತೆ ಸಂವಾದ ನಡೆಸಲಾಗಿದೆ. ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು, ಭಯ ಹೋಗಿಸುವುದು, ಆತ ಸ್ಥೈರ್ಯ ತುಂಬುವುದು ನಮ ಮುಖ್ಯ ಉದ್ದೇಶವಾಗಿತ್ತೆಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಆತವಿಶ್ವಾಸದಿಂದ ಎದುರಿಸುವಂತೆ ಮನವಿ ಮಾಡಲಾಗಿದೆ. ನಮ ಸಂವಾದವನ್ನು ಹೆಚ್ಚಿನ ಆಸಕ್ತಿಯಿಂದ ಕೇಳದ್ದಾರೆ. ಪರೀಕ್ಷೆಗೆ ಇಲಾಖೆಯು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ವಿವರಿಸಿದರು.

ಮಕ್ಕಳಿಗೆ 24 ಗಂಟೆಗಳ ದಿನಚರಿಯನ್ನು ಬಿಡುಗಡೆ ಮಾಡಿದ್ದೇವೆ. ಬೆಳಗ್ಗೆ 5ರಿಂದ ರಾತ್ರಿ 11 ಗಂಟೆವರೆಗೆ ಯಾವೆಲ್ಲ ವಿಷಯಗಳ ಬಗ್ಗೆ ಅಭ್ಯಾಸ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಈ ಬಾರಿ ನಮಗೆ ನಿರೀಕ್ಷೆಗೂ ಮೀರಿದ ಉತ್ತಮ ಫಲಿತಾಂಶ ಬರುವ ವಿಶ್ವಾಸವಿದೆ ಎಂದರು.

ನಾವು ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸಿದ್ದೇವೆ. ಶಿಕ್ಷಕರು, ಅಧಿಕಾರಿಗಳು, ಜಿಲ್ಲಾ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ಪರಿಶ್ರಮ ವಹಿಸಿದ್ದಾರೆ. ಫಲಿತಾಂಶವನ್ನು ಉತ್ತಮಪಡಿಸಲು ವಿಶೇಷ ಮಾರ್ಗದರ್ಶಿ ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮವನ್ನು ರೂಪಿಸಿದ್ದೇವೆ.

ಹೆಚ್ಚು ಅಂಕಗಳಿಗೆ ಕಾರ್ಯಕ್ರಮವನ್ನು ಮಾಡಲಾಗಿದೆ. ಶೇ.70ರಷ್ಟು ಅಂಕ ಪಡೆಯುವ ಮಕ್ಕಳಿಗೆ ಪ್ರತ್ಯೇಕವಾಗಿ ವಿಶೇಷ ತರಗತಿಗಳನ್ನು ಪ್ರಾರಂಭ ಮಾಡಿದ್ದೇವೆ. ಬೆಳಗ್ಗೆ ಮಕ್ಕಳನ್ನು ಓದಿಸುವ ಕೆಲಸವು ನಡೆಯುತ್ತದೆ. ಉತ್ತಮ ಫಲಿತಾಂಶ ಬರಲು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಎಲ್ಲವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು.

ಕೊನೆ ಕ್ಷಣದಲ್ಲಿ ವೆಬ್‌ ಕಾಸ್ಟಿಂಗ್‌ ಜಾರಿಗೆ ತಂದ ಕಾರಣ ಗ್ರೇಸ್‌‍ ಮಾರ್ಕ್ಸ್ ನೀಡಲಾಗಿತ್ತು. ಈ ಬಾರಿ ಪ್ರತಿಯೊಂದು ಕೇಂದ್ರಗಳಲ್ಲಿಯೂ ಇದನ್ನು ಜಾರಿಗೆ ತರಲಾಗಿದೆ ಎಂದರು. ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಹಿಜಾಬ್‌ ವ್ಯವಸ್ಥೆ ಇರಲಿದೆ ಎಂಬ ಪ್ರಶ್ನೆಗೆ, ಇದನ್ನು ಮುಂದುವರೆಸಬೇಕೆ ಬೇಡವೇ ಎಂಬುದರ ಬಗ್ಗೆ ಗೃಹಸಚಿವರು ನಿರ್ಧರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News