Thursday, February 6, 2025
Homeಇದೀಗ ಬಂದ ಸುದ್ದಿವಿತ್ತ ಸಚಿವೆ ನಿರ್ಮಲಾ ವಿರುದ್ಧ ಗೃಹಸಚಿವ ಪರಮೇಶ್ವರ್ ಗರಂ

ವಿತ್ತ ಸಚಿವೆ ನಿರ್ಮಲಾ ವಿರುದ್ಧ ಗೃಹಸಚಿವ ಪರಮೇಶ್ವರ್ ಗರಂ

Home Minister Parameshwar against Finance Minister Nirmala

ಬೆಂಗಳೂರು,ಫೆ.3- ಕರ್ನಾಟಕಕ್ಕೆ ಯಾವುದೇ ಯೋಜನೆ ನೀಡದೇ ಮಾತನಾಡಿದರೆ ಹೇಗೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ ರಾಜ್ಯಕ್ಕೆ ಯಾವುದಾದರೂ ಒಂದು ಯೋಜನೆ ಕೊಡಬೇಕಲ್ಲವೇ?, ನಮಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದವರು ನಮಗೆ ಬಜೆಟ್ನಲ್ಲಿ ಹಣ ಕೊಡಲಿಲ್ಲ ಎಂದರೆ ನಮಗೆ ನಾಚಿಕೆಯಾಗುತ್ತದೆ ಎಂದರು.

ನಿರ್ಮಲಾ ಸೀತಾರಾಮನ್ ಆರೋಪ ಮಾಡುವ ಮುನ್ನ ಕರ್ನಾಟಕಕ್ಕೆ ಏನು ಮಾಡಿದ್ದೀರ ಎಂಬುದನ್ನು ಹೇಳಿ. ನೀವು ಮಾಡಿರುವ ಕೆಲಸ ಏನೆಂಬುದು ಹೇಳಬೇಕಾಗುತ್ತದೆ. ನೀತಿ ಆಯೋಗದ ಅಳತೆಗೋಲು ಏನು ಎಂದು ಅವರು ಪ್ರಶ್ನಿಸಿದರು. ಕೃಷ್ಣ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ ಹಣವನ್ನೇ ನೀಡದಿದ್ದರೆ ಹೇಗೆ?, ಹೀಗಾಗಿ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಶೂನ್ಯ ಎಂಬ ಆರೋಪ ಮಾಡಲಾಗುತ್ತಿದೆ. ನಾವು ಬಡವರಿಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿ ಮಾತನಾಡುತ್ತಾರೆ : ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ಮತ್ತು ಅವರ ಬೇಸರದ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಾದ ನಂತರ ಶಾಸಕರ ಕ್ಷೇತ್ರಗಳಿಗೆ 10 ಕೋಟಿ ರೂ. ನೀಡಿದ್ದೇವೆ. ಅದಾದ ಮೇಲೆ ಯಾವುದೇ ಬೇಸರ ಇದ್ದಂತಿಲ್ಲ. ಬಿ.ಆರ್.ಪಾಟೀಲ್ರೊಂದಿಗೆ ಮುಖ್ಯಮಂತ್ರಿ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಮೈಕ್ರೋ ಫೈನಾನ್‌್ಸ ಕಿರುಕುಳಕ್ಕೆ ಕಡಿವಾಣ ಹಾಕುವ ಸಂಬಂಧ ಸುಗ್ರೀವಾಜ್ಞೆ ಜಾರಿಯಾಗಲಿದೆ. ಸುಗ್ರೀವಾಜ್ಞೆ ಕರಡನ್ನು ಮುಖ್ಯಮಂತ್ರಿ ಪರಿಶೀಲಿಸಿ ರಾಜ್ಯಪಾಲರಿಗೆ ಕಳುಹಿಸುತ್ತಾರೆ. ಈಗಾಗಲೇ ಕೆಲವು ಕಾನೂನುಗಳಿವೆ. ಅವನ್ನು ಬಳಸಿಕೊಂರು ಸುಗ್ರೀವಾಜ್ಞೆ ತರಬೇಕಾಗುತ್ತದೆ ಎಂದರು.

RELATED ARTICLES

Latest News