Friday, February 7, 2025
Homeಬೆಂಗಳೂರುವಿಧವೆಯನ್ನು ಮದುವೆಯಾಗಿ ಕಿರುಕುಳ ನೀಡುತ್ತಿದ್ದ ಕಾನ್‌ಸ್ಟೆಬಲ್ ಸೇರಿ 6 ಮಂದಿ ವಿರುದ್ಧ ದೂರು

ವಿಧವೆಯನ್ನು ಮದುವೆಯಾಗಿ ಕಿರುಕುಳ ನೀಡುತ್ತಿದ್ದ ಕಾನ್‌ಸ್ಟೆಬಲ್ ಸೇರಿ 6 ಮಂದಿ ವಿರುದ್ಧ ದೂರು

Complaint filed against 6 people including constable for marrying a widow and harassing her

ಬೆಂಗಳೂರು,ಫೆ.3- ಜೀವನ ಕೊಡುವುದಾಗಿ ವಿಧವೆಯನ್ನು ಮದುವೆಯಾಗಿ ಇದೀಗ ಕಿರುಕುಳ ನೀಡುತ್ತಿರುವ ಇಂದಿರಾನಗರ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಹಾಗೂ ಅವರ ಕುಟುಂಬದ ಮೂವರು ಸದಸ್ಯರು ಸೇರಿ ಆರು ಮಂದಿ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಖಾ ಎಂಬುವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಲೆಟರ್ ಕೊಡಲು ಇಂದಿರಾನಗರ ಠಾಣೆ ಕಾನ್ಸ್ಟೇಬಲ್ ಮನೋಜ್ ಹೋಗಿದ್ದಾಗ ರೇಖಾ ಅವರಿಗೆ ಪರಿಚಯವಾಗಿದ್ದು, ನಂತರ ಇವರ ಮಧ್ಯೆ ಸ್ನೇಹವಾಗಿದೆ.

ಈ ಸ್ನೇಹ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ರೇಖಾ ಅವರು ವಿದವೆ ಹಾಗೂ ಎರಡು ಹೆಣ್ಣು ಮಕ್ಕಳು ಇರುವ ವಿಷಯ ತಿಳಿದಿದ್ದರೂ ಸಹ ಜೀವನ ಕೊಡುವುದಾಗಿ ಕಳೆದ ಆ.7 ರಂದು ನಂಜನಗೂಡಿನಲ್ಲಿ ರೇಖಾ ಅವರನ್ನು ಮನೋಜ್ ಮದುವೆಯಾಗಿದ್ದು, ವೈಯಾಲಿಕಾವಲ್ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಮಾಡಿಸಿದ್ದಾರೆ. ದಂಪತಿ ವಸಂತನಗರ ಕ್ವಾಟರ್ಸ್ನಲ್ಲಿ ವಾಸ ಮಾಡುತ್ತಿದ್ದರು.

ತದನಂತರ ಮನೋಜ್ ಅವರ ಕುಟುಂಬದವರಿಗೆ ವಿಷಯ ತಿಳಿದು ಇವರ ಮನೆ ಬಳಿ ಹೋಗಿ ಜಗಳವಾಡಿದ್ದಾರೆ.ಮನೋಜ್ ಸಹ ರೇಖಾ ಜೊತೆ ಜಗಳವಾಡಿ, ನಿನ್ನನ್ನು ಮದುವೆಯಾಗಿರುವುದು ಮನೆಯವರಿಗೆ ಇಷ್ಟವಿಲ್ಲ, ನೀನು ನನಗೆ ಡೈವೋರ್ಸ್ ಕೊಟ್ಟು ಹೋಗು ಎಂದು ಕಿರುಕುಳ ನೀಡಿದ್ದಾರೆ.

ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಮನೋಜ್ ವರ್ತನೆಯಿಂದ ರೇಖಾ ನೊಂದಿದ್ದರು. ಮನೋಜ್ ಅವರ ಮೊಬೈಲ್ ಪರಿಶೀಲಿಸಿದಾಗ ಬೇರೆ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿರುವುದು ತಿಳಿದು, ಈ ಬಗ್ಗೆ ಪ್ರಶ್ನಿಸಿದಾಗ ಆಕೆಗೆ ಹೊಡೆದು ಗಲಾಟೆ ಮಾಡಿದ್ದಾನೆ.

ಹಾಗಾಗಿ ರೇಖಾ ಅವರು ಮನೋಜ್ ಸೇರಿ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News