ಚೆನ್ನೈ, ಫೆ.4- ಇಲ್ಲಗೆ ಬರುತ್ತಿದ್ದ ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಆತಂಕಗೊಂಡ ಘಟನೆ ನಡೆದಿದೆ.ಸುಮಾರು 237 ಪ್ರಯಾಣಿಕರಿದ್ದ ವಿಮಾನವನ್ನು ಸುರಕ್ಷಿತವಾಗಿ ಇಳಿದ ನಂತರ ಸಂಪೂರ್ಣವಾಗಿ ಪರಿಶೀಲಿಸಲಾಯಿತು ಆದರೆ ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಯ ಆಧಾರದ ಮೇಲೆ ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಯಿತು ನಂತರ ಇದು ಹುಸಿಕರೆ ಎಂದು ತಿಳಿದುಬಂತು ಂದು ಅವರು ಹೇಳಿದರು.
ಇದಲ್ಲದೆ ಮುಂಜಾನೆ ದಟ್ಟ ಮಂಜಿನಿಂದಾಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಅಡ್ಡಿಯುಂಟಾಗಿದ್ದು, ಕೆಲವು ಅಂತರಾಷ್ಟ್ರೀಯ ವಿಮಾನಗಳನ್ನು ಹತ್ತಿರದ ನಗರಗಳಿಗೆ ತಿರುಗಿಸಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 6-7 ರ ನಡುವೆ ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಮಸ್ಕತ್ ಮತ್ತು ದುಬೈ ಸೇರಿದಂತೆ ವಿವಿಧ ಸ್ಥಾನಗಳಿಂದ ಒಳಬರುವ ಅಂತರರಾಷ್ಟ್ರೀಯ ವಿಮಾನಗಳನ್ನು ಹತ್ತಿರದ ತಿರುಪತಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು ಎಂದು ಅವರು ಹೇಳಿದರು.ಕೆಲವು ದೇಶೀಯ ವಿಮಾನಗಳು ವಿಳಂಬವನ್ನು ಅನುಭವಿಸಿದವು ಎಂದು ಅವರು ತಿಳಿಸಿದರು