Wednesday, February 5, 2025
Homeರಾಷ್ಟ್ರೀಯ | Nationalಮಹಾಕುಂಭದಲ್ಲಿ ನಾಳೆ ಪವಿತ್ರ ಸ್ನಾನ ಮಾಡಲಿದ್ದಾರೆ ಮೋದಿ

ಮಹಾಕುಂಭದಲ್ಲಿ ನಾಳೆ ಪವಿತ್ರ ಸ್ನಾನ ಮಾಡಲಿದ್ದಾರೆ ಮೋದಿ

PM Modi to visit Mahakumbh on February 5: Holy dip at Sangam

ಲಕ್ನೋ, ಫೆ.4- ಉತ್ತರ ಪ್ರದೇಶದ ಪ್ರಯಾಗ್‌ರಾಜ್‌‍ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಲಿದ್ದಾರೆ.ಪ್ರಧಾನಿ ನಾಳೆ ಬೆಳಗ್ಗೆ 10 ಗಂಟೆಗೆ ಮಹಾಕುಂಭವನ್ನು ತಲುಪಲಿದ್ದಾರೆ. ಮಾಘ ಮಾಸದ ಅಷ್ಟಮಿಯಂದು ಅವರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಸ್ನಾನದ ನಂತರ ಸಂಗಮದಲ್ಲಿ ಗಂಗೆಯನ್ನು ಪೂಜಿಸಲಿದ್ದಾರೆ.

ನಂತರ ಅವರು ಅರೈಲ್‌ ಘಾಟ್‌ ನಿಂದ ದೋಣಿ ಮೂಲಕ ಸಂಗಮ್‌ ಗೆ ಹೋಗಲಿದ್ದಾರೆ. ಒಟ್ಟಾರೆಯಾಗಿ, ಪ್ರಧಾನಿ ಮೋದಿ ಸುಮಾರು ಒಂದು ಗಂಟೆ ಪ್ರಯಾಗ್‌ರಾಜ್‌ನಲ್ಲಿ ಇರಲಿದ್ದಾರೆ.

ಮಹಾ ಕುಂಭಮೇಳಕ್ಕೂ ಮುನ್ನ, 2024 ರ ಡಿಸೆಂಬರ್‌ 13 ರಂದು ಮೋದಿ ಸಂಗಮದ ದಡದಲ್ಲಿ ಗಂಗಾ ನದಿಗೆ ಆರತಿ ಮತ್ತು ಪೂಜೆ ಸಲ್ಲಿಸಿದ್ದರು ಮತ್ತು ಈ ಬಹತ್‌ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಅವರು 2019 ರ ಕುಂಭ ಮೇಳದ ಆರಂಭದಲ್ಲಿ ಮತ್ತು ನಂತರವೂ ಬಂದಿದ್ದರು.

ಮೂರು ಸೇನಾ ಹೆಲಿಕಾಪ್ಟರ್‌ಗಳು ಅರೈಲ್‌ನಲ್ಲಿರುವ ಡಿಪಿಎಸ್‌‍ ಮೈದಾನದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದು, ಅಲ್ಲಿಂದ ಕಾರಿನಲ್ಲಿ ತೆರಳಲಿದ್ದಾರೆ. ಇಲ್ಲಿಂದ ಅವರು ಡಿಪಿಎಸ್‌‍ ಹೆಲಿಪ್ಯಾಡ್‌ ಮೂಲಕ ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಪ್ರಧಾನಿ ಮೋದಿ ಅವರು ಮಧ್ಯಾಹ್ನ 12.30 ಕ್ಕೆ ವಾಯುಪಡೆಯ ವಿಮಾನದ ಮೂಲಕ ಪ್ರಯಾಗ್‌ರಾಜ್‌ನಿಂದ ಹಿಂತಿರುಗಲಿದ್ದಾರೆ.

RELATED ARTICLES

Latest News