Wednesday, February 5, 2025
Homeಬೆಂಗಳೂರು4 ರಾಜ್ಯಗಳಿಗೆ ಬೇಕಾಗಿದ್ದ ಖತರ್ನಾಕ್ ಕಳ್ಳನ ಬಂಧನ

4 ರಾಜ್ಯಗಳಿಗೆ ಬೇಕಾಗಿದ್ದ ಖತರ್ನಾಕ್ ಕಳ್ಳನ ಬಂಧನ

Wanted thief from 4 states arrested

ಬೆಂಗಳೂರು,ಫೆ.4- ಮನೆಗಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಹಣ ಆಭರಣಗಳನ್ನು ಕಳವು ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಆರೋಪಿಯೊಬ್ಬನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 12.25ಲಕ್ಷ ರೂ. ಮೌಲ್ಯದ 181ಗ್ರಾಂ ಚಿನ್ನದ ಗಟ್ಟಿ ಮತ್ತು 333 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಂಚಾಕ್ಷರಿಸ್ವಾಮಿ(37) ಬಂಧಿತ ಆರೋಪಿ. ಈತನ ವಿರುದ್ಧ ಗುಜರಾತ್, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಈತ ಮಹಾರಾಷ್ಟ್ರ ಜೈಲಿನಿಂದ ಇತ್ತೀಚಿಗೆ ಬಿಡುಗಡೆಯಾಗಿ ಹೊರ ಬಂದಿದ್ದನು.

ಮಹಾರಾಷ್ಟ್ರದ ನಟಿಯೊಬ್ಬರು ಈ ಆರೋಪಿಗೆ ಸ್ನೇಹಿತೆ. ಅಲ್ಲದೇ ಲೈವ್ಬ್ಯಾಂಡ್ ಗರ್ಲ್ ಫ್ರೆಂಡ್ ಸಹ ಇದ್ದಾಳೆ. ಈಕೆಗೆ ಕೊಲ್ಕತ್ತಾದಲ್ಲಿ ಮೂರು ಕೋಟಿ ಬೆಲೆಯ ಮನೆ ಕಟ್ಟಿಸಿಕೊಟ್ಟಿದ್ದಾನೆ. ಇಷ್ಟೇಅಲ್ಲದೇ ಆಕೆಯ ಬರ್ತ್ಡೇಗೆ ಮಹಾರಾಷ್ಟ್ರದಿಂದ ಕೊಲ್ಕತ್ತಾಗೆ 22 ಲಕ್ಷ ಬೆಲೆಯ ಭಾರೀ ಗಾತ್ರದ ಅಕ್ವೇರಿಯಂಅನ್ನು ಟ್ರಕ್ನಲ್ಲಿ ಕಳುಹಿಸಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಮಡಿವಾಳದ ಮಾರುತಿನಗರದಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಮನೆಯ ಬೀಗ ಹೊಡೆದು ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಕಾರ್ಯಾಚರಣೆ ಮುಂದುವರೆಸಿದ ಮಡಿವಾಳ ಠಾಣೆ ಪೊಲೀಸರು ಇಲ್ಲಿನ ಮಾರುಕಟ್ಟೆಯ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ತನ್ನ ಸಹಚರನೊಂದಿಗೆ ಸೇರಿಕೊಂಡು ಈ ಪ್ರಕರಣದಲ್ಲಿ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿ, ಆತ ನೀಡಿದ ಮಾಹಿತಿಯ ಮೇರೆಗೆ ಕೋರಮಂಗಲದ ವೆಂಕಟರೆಡ್ಡಿ ಲೇಔಟ್ನಲ್ಲಿರುವ ಪಿಜಿಯೊಂದರಲ್ಲಿ ಕೃತ್ಯಕ್ಕೆ ಉಪಯೋಗಿಸಿದ್ದ ಕಬ್ಬಿಣದ ರಾಡ್ ಮತ್ತು ಮನೆಯ ಬೀಗ ಇಟ್ಟಿರುವುದಾಗಿ ತಿಳಿಸಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.ಕಳವು ಮಾಡಿದ್ದ, ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಯಾಗಿ ಮಾರ್ಪಡಿಸಿ, ಬೆಳ್ಳಿಯ ವಸ್ತುಗಳನ್ನು ತನ್ನ ಸ್ವಂತ ಊರಾದ ಮಹರಾಷ್ಟ್ರದ ಸೊಲ್ಲಾಪುರದ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು ಮಹಾರಾಷ್ಟ್ರಕ್ಕೆ ತೆರೆಳಿ ಆರೋಪಿಯ ವಾಸದ ಮನೆಯಿಂದ 181 ಗ್ರಾಂ ತೂಕದ ಚಿನ್ನದ ಗಟ್ಟಿ, 333 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಚಿನ್ನದ ಗಟ್ಟಿಯನ್ನು ಮಾಡಲು ಉಪಯೋಗಿಸಿದ ಒಂದು ಫೈರ್ಗನ್ ಮತ್ತು ಮೂಸ್ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 12.25 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಸಹಚರ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ. ಇನ್‌್ಸಪೆಕ್ಟರ್ ಮೊಹಮದ್ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News