Wednesday, February 5, 2025
Homeರಾಷ್ಟ್ರೀಯ | Nationalದೆಹಲಿ ಸಿಎಂ ಆತಿಶಿ ವಿರುದ್ಧ ಪ್ರಕರಣ ದಾಖಲು

ದೆಹಲಿ ಸಿಎಂ ಆತಿಶಿ ವಿರುದ್ಧ ಪ್ರಕರಣ ದಾಖಲು

Disobedience Case Against Atishi Day Before Delhi Election

ನವದೆಹಲಿ, ಫೆ.4– ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಆತಿಶಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಆತಿಶಿ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮತ್ತು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಲ್ಕಾಜಿಯ ಎಎಪಿ ಅಭ್ಯರ್ಥಿಯಾಗಿರುವ ಅತಿಶಿ ಅವರು, ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು, ತನ್ನ ಎದುರಾಳಿ, ಬಿಜೆಪಿಯ ರಮೇಶ್ ಬಿಧುರಿ ಬಹಿರಂಗವಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ದೆಹಲಿ ಪೊಲೀಸರು ಬಿಧುರಿಯತ್ತ ಕಣ್ಣು ಮುಚ್ಚಿದ್ದಕ್ಕಾಗಿ ತೀವ್ರ ಟೀಕೆ ಮಾಡಿದ ಅವರು, ಚುನಾವಣಾ ಆಯೋಗವೂ ಅದ್ಭುತವಾಗಿದೆ! ರಮೇಶ್ ಬಿಧುರಿ ಅವರ ಕುಟುಂಬ ಸದಸ್ಯರು ಬಹಿರಂಗವಾಗಿ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಯಾವುದೇ ಕ್ರಮವಿಲ್ಲ. ಅವರ ವಿರುದ್ಧ ನಾನು ದೂರು ದಾಖಲಿಸಿದ್ದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ! ಎಂದು ಹರಿಹಾಯ್ದಿದ್ಧಾರೆ.

ಪೊಲೀಸರ ಪ್ರಕಾರ, ಅತಿಶಿ ಹತ್ತು ವಾಹನಗಳು ಮತ್ತು ಸುಮಾರು ಅರವತ್ತು ಬೆಂಬಲಿಗರೊಂದಿಗೆ ಫತೇಹ್ ಸಿಂಗ್ ಮಾರ್ಗಕ್ಕೆ ಆಗಮಿಸುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.

ಏತನಧ್ಯೆ, ಆತಿಶಿ, ಎಕ್‌್ಸಗೆ ತೆಗೆದುಕೊಂಡು, ದೆಹಲಿ ಪೊಲೀಸರು ಎಂಸಿಸಿ ಉಲ್ಲಂಘನೆಗಳ ಬಗ್ಗೆ ವರದಿ ಮಾಡುತ್ತಿದ್ದ ಮತ್ತು ವೀಡಿಯೊ ಮಾಡುತ್ತಿದ್ದ ಇಬ್ಬರನ್ನು ಕಾನೂನುಬಾಹಿರವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎಂಸಿಸಿಯನ್ನು ಉಲ್ಲಂಘಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಎಕ್‌್ಸನಲ್ಲಿ ವಿಡಿಯೋ ಶೇರ್ ಮಾಡಿದ ಅತಿಶಿ, ವಿಡಿಯೋ ಮಾಡುತ್ತಿದ್ದ ಹುಡುಗನನ್ನು ಪೊಲೀಸರು ಥಳಿಸಿ ಕರೆದೊಯ್ದಿದ್ದಾರೆ. ಪೊಲೀಸರು ಆತನಿಗೆ ಒದೆಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಏನೂ ಇಲ್ಲ ಎಂದು ಆರೋಪಿಸಿದ್ದಾರೆ.

RELATED ARTICLES

Latest News