ನವದೆಹಲಿ, ಜ.27- ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಹನ ನಡೆಸುವ ಜನಪ್ರಿಯ ಕಾರ್ಯಕ್ರಮ ಪರೀಕ್ಷಾ ಪೆ ಚರ್ಚಾದ 9ನೇ ಆವೃತ್ತಿ ಅತ್ಯಂತ ಯಶಸ್ವಿಯಾಗಿದೆ. ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಯಮತ್ತೂರು (ತಮಿಳುನಾಡು), ರಾಯ್ಪುರ (ಛತ್ತೀಸ್ಗಢ), ದೇವ್ ಮೋಗ್ರಾ (ಗುಜರಾತ್) ಮತ್ತು ಗುವಾಹಟಿ (ಅಸ್ಸಾಂ) ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು 2026ರಲ್ಲಿ ಒಂದು ಹೊಸ ಆಯಾಮವನ್ನು ಪಡೆದುಕೊಂಡಿದೆ. ಈ ವರ್ಷದ ಸಂವಾದವು ನಿಜವಾದ ಅರ್ಥದಲ್ಲಿ ಸಂಪೂರ್ಣ ಭಾರತದ ಧ್ವನಿಯಾಗಿ ಪ್ರತಿಧ್ವನಿಸಿದೆ. 4.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
2.26 ಕೋಟಿ ಜನರು ಇದರ ತಯಾರಿಯಲ್ಲಿ ಹಾಗೂ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.ಈ ವರ್ಷ ಒಟ್ಟು 6.76 ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದಾರೆ. 2025ರ ಫೆಬ್ರವರಿ 10 ರಂದು ದೆಹಲಿಯ ಸುಂದರ್ ನರ್ಸರಿಯಲ್ಲಿ ವಿಶಿಷ್ಟ ಮಾದರಿಯಲ್ಲಿ ನಡೆಯಿತು. ಇದರಲ್ಲಿ ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 36 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ರೀಡೆ, ಮಾನಸಿಕ ಆರೋಗ್ಯ, ಪೌಷ್ಟಿಕಾಂಶ, ತಂತ್ರಜ್ಞಾನ, ಹಣಕಾಸು ಮತ್ತು ಸೃಜನಶೀಲತೆ ಎಂಬ ಏಳು ವಿಷಯಗಳ ಕುರಿತು ಪ್ರಸಿದ್ಧ ವ್ಯಕ್ತಿಗಳು ಪ್ರೇರಣಾದಾಯಕ ಮಾಹಿತಿ ನೀಡಿದರು. 2025ರಲ್ಲಿ ಈ ಕಾರ್ಯಕ್ರಮವು ಜಾಗತಿಕ ಮಟ್ಟಕ್ಕೆ ಬೆಳೆದು, 245 ದೇಶಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತ್ತು.
2018ರಲ್ಲಿ ಕೇವಲ 22,000 ಭಾಗವಹಿಸುವಿಕೆಯಿಂದ ಆರಂಭವಾದ ಈ ಕಾರ್ಯಕ್ರಮವು, ಇಂದು ಕೋಟಿಗಟ್ಟಲೆ ಜನರನ್ನು ತಲುಪುವ ಮೂಲಕ ಜನ್ ಆಂದೋಲನ (ಜನ ಚಳವಳಿ) ಆಗಿ ಮಾರ್ಪಟ್ಟಿದೆ. ಇದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೇರಿ ಒತ್ತಡ ನಿರ್ವಹಣೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಿದೆ.
ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯೊಂದಿಗೆ ಪರೀಕ್ಷೆಯನ್ನು ಎದುರಿಸುವಂತೆ ಮಾಡುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ. 1.55 ಕೋಟಿ ಜನರು 2025 ಗೆ ಸಂಬಂಧಿಸಿದ ರಾಷ್ಟ್ರವ್ಯಾಪಿ ಜನ ಆಂದೋಲನ ಚಟುವಟಿಕೆಗಳಲ್ಲಿ ಭಾಗವಹಿಸಿದರು, ಸುಮಾರು 5 ಕೋಟಿ ಇದರಲ್ಲಿ ಭಾಗವಹಿಸಿದ್ದಾರೆ.
