Wednesday, February 5, 2025
Homeರಾಜ್ಯಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ನಿರೀಕ್ಷೆ : ಪರಂ

ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ನಿರೀಕ್ಷೆ : ಪರಂ

Governor's signature expected for Microfinance Ordinance

ಬೆಂಗಳೂರು,ಫೆ.5- ಮೈಕ್ರೋ ಫೈನಾನ್ಸ್ ಕಿರುಕುಳವನ್ನು ನಿಯಂತ್ರಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವ ನಿರೀಕ್ಷೆಗಳಿವೆೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ಈಗಾಗಲೇ ಮಸೂದೆಯನ್ನು ರಾಜ್ಯಪಾಲರಿಗೆ ರವಾನೆ ಮಾಡಿದೆ. ಕಾನೂನು ತಜ್ಞರು ಕೂಡ ರಾಜ್ಯಪಾಲರ ಜೊತೆ ಚರ್ಚೆ ಮಾಡಿದ್ದಾರೆ. ಬಹುತೇಕ ಇಂದು ಸಹಿ ಆಗಬಹುದು ಎಂದುಕೊಂಡಿದ್ದೇವೆ.

ಸುಗ್ರೀವಾಜ್ಞೆಗೆ ಅಂಗೀಕಾರ ದೊರೆತ ಬಳಿಕ ಯಾವಾಗಿನಿಂದ ಅನುಷ್ಠಾನಕ್ಕೆ ಬರಲಿದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಸುಗ್ರೀವಾಜ್ಞೆಯಲ್ಲಿ ತಿದ್ದುಪಡಿಗಳನ್ನು ರಾಜ್ಯಪಾಲರು ಸೂಚಿಸಿದರೆ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ. ಇರುವಂತೆಯೇ ಒಪ್ಪಿದರೂ ಮಸೂದೆ ಜಾರಿಯಾಗಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ಬಜೆಟ್‌ ಸಿದ್ಧತೆ ನಡೆಸಲಿದ್ದಾರೆ. ಪೊಲೀಸ್‌‍ ಇಲಾಖೆಯ ಜೊತೆಯೂ ಚರ್ಚೆ ಸಭೆ ನಡೆಸಿ ತಮ ಬೇಡಿಕೆಗಳನ್ನು ಕೇಳಲಿದ್ದಾರೆ. ಪ್ರಸ್ತಾವನೆಗಳನ್ನು ಸಲ್ಲಿಸುವುದು ನಮ ಕರ್ತವ್ಯ. ಅದನ್ನು ಅಂಗೀಕರಿಸುವುದು ಅಥವಾ ಬಿಡುವುದು ಮುಖ್ಯಮಂತ್ರಿಯವರಿಗೆ ಸೇರಿದೆ ಎಂದರು.

ಶಾಲೆಗಳಲ್ಲಿ ಹಿಜಾಬ್‌ ಧರಿಸುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನವಾಗಬೇಕು. ಅದಕ್ಕಾಗಿ ನಾವು ನಮ ಅಭಿಪ್ರಾಯವನ್ನು ಹೇಳುತ್ತೇವೆ. ಈ ಕಾರಣಕ್ಕೆ ಚರ್ಚೆ ಮಾಡಲು ಸಭೆ ಕರೆಯಲಾಗಿದೆ. ಪರ-ವಿರೋಧಗಳು ಸಹಜ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚೆಗಳು ಮುಂದುವರೆದಿವೆ. ತುಮಕೂರಿನಲ್ಲಿ ಸ್ಥಳ ಗುರುತಿಸುವಂತೆ ನಾವು ಬೇಡಿಕೆ ಸಲ್ಲಿಸಿದ್ದು, ಮತ್ತೊಂದೆಡೆ ಬಿಡದಿಯಲ್ಲಿ ಏರ್‌ಪೋರ್ಟ್‌ ಆಗಬೇಕೆಂಬ ಬೇಡಿಕೆಯೂ ಇದೆ. ಅದರ ಕುರಿತು ಚರ್ಚೆಗಳಾಗುತ್ತಿವೆ. ಸೂಕ್ತ ಸ್ಥಳವನ್ನು ನಿರ್ಧಾರ ಮಾಡಲಾಗುವುದು ಎಂದರು.

ಸಿಎಂ ಬದಲಾವಣೆ ಬಗ್ಗೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿರುವುದರ ಬಗ್ಗೆ ನಮ ತಕರಾರಿಲ್ಲ. ಅವರು ಯಾವಾಗಿನಿಂದ ಜ್ಯೋತಿಷ್ಯ ಹೇಳಲು ಶುರು ಮಾಡಿದರೋ ಗೊತ್ತಿಲ್ಲ, ನಮಗೆ ತಿಳಿದ ಮಟ್ಟಿಗೆ ನಮ ಪಕ್ಷದಲ್ಲಿ ಅಂತಹ ಸೂಚನೆಗಳಿಲ್ಲ. ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಿದರು.

RELATED ARTICLES

Latest News