ಹಾಸನ,ಫೆ.6- ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.ಮಲ್ಲಾಪುರ ಗ್ರಾಮದ ಸಂಜು (25) ಮೃತ ದುರ್ದೈವಿ.
ಬೇಲೂರು ತಾಲ್ಲೂಕಿನ ಹಕ್ಕಿಹಳ್ಳಿ ಸಮೀಪದ ಸಿಲ್ವರ್ ಸ್ಯಾಂಡ್ ಕ್ರಷರ್‌ನಿಂದ ಲೋಡ್ ತುಂಬಿಕೊಂಡು ಬರುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಸಂಜು ಟ್ರ್ಯಾಕ್ಟರ್ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ರಷರ್ ಮಾಲೀಕರು ಸಮರ್ಪಕ ರಸ್ತೆ ವ್ಯವಸ್ಥಿತವಾಗಿ ನಿರ್ಮಿಸದ ಕಾರಣ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.