ಬೆಂಗಳೂರು,ಫೆ.6- ಬೆಟ್ಟ ಅಗಿದು ಇಲಿ ಹಿಡಿದರು ಎಂಬಂತಾಗಿದೆ ಬಿಜೆಪಿಯ ಭಿನ್ನಮತೀಯರ ನಡೆ! ಏಕೆಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಈ ಬಾರಿ ಬದಲಾವಣೆ ಮಾಡಿಯೇ ತಿರುತ್ತೇವೆ ಎಂದು ದೆಹಲಿಗೆ ಹಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮುಕ್ತ ಹಾಗೂ ಹಿಂದುತ್ವದ ವಿರೋಧಿಗಳನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇದರ ಜೊತೆಗೆ ಒಬ್ಬ ವ್ಯಕ್ತಿಗೆ ಒಂದೇ ಹ್ದುೆ ಎಂಬ ಪಕ್ಷ ಸಿದ್ಧಾಂತದ ಬೇಡಿಕೆಯನ್ನೂ ಬಿಜೆಪಿ ಹೈಕಮಾಂಡ್ ಮುಂದೆ ಯತ್ನಾಳ್ ಟೀಂ ಇಟ್ಟಿದೆ ಎನ್ನಲಾಗಿದೆ.
ಇನ್ನೆರೆಡು ದಿನದ ನಂತರ ಪುನಃ ದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವುದಾಗಿ ಭಿನ್ನಮತೀಯರು ಹೇಳಿಕೊಂಡಿದ್ದರೂ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು, ಒಂದು ವೇಳೆ ಮತಗಟ್ಟೆ ಸಮೀಕ್ಷೆಯ ಪ್ರಕಾರ ಬಿಜೆಪಿ ಈ ಬಾರಿ ಸ್ವತಃ ಬಲದ ಮೇಲೆ ಅಧಿಕಾರಕ್ಕೆ ಬಂದರೆ, ಸರ್ಕಾರ ರಚನೆ ಮಾಡುವವರೆಗೂ ಕರ್ನಾಟಕ ಸೇರಿದಂತೆ ಬೇರೆ ಯಾವುದೇ ರಾಜ್ಯದ ಬೆಳವಣಿಗೆಗಳ ಬಗ್ಗೆ ಕೇಂದ್ರ ನಾಯಕರು ತಲೆಕೆಡಿಸಿಕೊಳ್ಳುವ ಸಾಧ್ಯತೆಗಳು ಇಲ್ಲ ಎಂದು ಹೇಳುತ್ತಿವೆ ಪಕ್ಷದ ಮೂಲಗಳು.
ಹೀಗಾಗಿ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದ ಭಿನ್ನಮತೀಯರು ಇದೀಗ ತಮ ತಮ ಸ್ವಕೇತ್ರಗಳಿಗೆ ಹಿಂತಿರುಗಿದ್ದಾರೆ. ಯತ್ನಾಳ್ ಹೈದರಬಾದ್ ಮೂಲಕ ವಿಜಯಪುರಕ್ಕೆ ಬಂದರೆ, ಕುಮಾರ್ ಬಂಗಾರಪ್ಪನವರು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ತೆರಳಿದ್ದಾರೆ. ಉಳಿದವರು ತಮ ತಮ ಊರುಗಳಿಗೆ ತೆರಳಿದ್ದಾರೆ.
ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಈ ರೆಬೆಲ್ಸ್ ನಾಯಕರು ಬಿಜೆಪಿ ಹೈಕಮಾಂಡ್‌ಗೆ ತಮ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ, ರೆಬೆಲ್ ನಾಯಕರಿಗೆ ಹೈಕಮಾಂಡ್ ಭೇಟಿ ಸಾಧ್ಯವಾಗದೆ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕೆಂದು ಪ್ರಯತ್ನ ನಡೆಸುತ್ತಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಸೇರಿ ಹಲವು ನಾಯಕರು ಕೆಲ ದಿನ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಆದರೆ, ಅವರಿಗೆ ಹೈಕಮಾಂಡ್ ಭೇಟಿ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇದೀಗ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಥಾನದಲ್ಲಿ ಮುಂದುವರೆಯಲಿದ್ದಾರೆಯೇ? ಇಲ್ಲವೆ ಭಿನ್ನಮತೀಯರ ಪಟ್ಟಿನಂತೆ ಬದಲಾಗಲಿದ್ದಾರೆಯೇ ಎಂಬುದರ ಕುರಿತು ಕುತೂಹಲಗಳು ಹೆಚ್ಚಾಗತೊಡಗಿದೆ.
ಇನ್ನು ರೆಬೆಲ್ಸ್ ನಾಯಕರು ದೆಹಲಿ ಪ್ರಯಾಣಕ್ಕೆ ಮತ್ತೆ ದಿನಾಂಕ ನಿಗದಿ ಮಾಡೇ ವಾಪಸ್ ಆಗಿದ್ದಾರೆ ಎನ್ನಲಾಗಿದೆ. ಮತ್ತೆ ಒಗ್ಗಟ್ಟಿನಿಂದ ದೆಹಲಿಗೆ ಹೋಗಲು ನಿರ್ಧಾರ ಮಾಡಿದ್ದಾರೆ. ರಾಜನಹಳ್ಳಿಯ ವಾಲೀಕಿ ಗುರುಪೀಠದ ಜಾತ್ರೆ ಮುಗಿಸಿ ದೆಹಲಿಗೆ ಮತ್ತೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 9ರಂದು ರಾಜನಹಳ್ಳಿ ವಾಲೀಕಿ ಗುರುಪೀಠದಲ್ಲಿ ವಾಲೀಕಿ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಬಹುತೇಕ ಭಿನ್ನಮತೀಯ ನಾಯಕರು ಭಾಗಿಯಾಗಲಿದ್ದಾರೆ.
ಸೋಮಣ್ಣ ನಿವಾಸದಲ್ಲಿ ರೆಬೆಲ್ಸ್ ಸಭೆ :
ಫೆ. 9ರಂದು ದೆಹಲಿಗೆ ಪ್ರಯಾಣಕ್ಕೆ ದಿನಾಂಕ ನಿಗಧಿ ಮಾಡಲಿದ್ದಾರೆ. ಯತ್ನಾಳ್ ಮತ್ತು ತಂಡ ಒಗ್ಗಟ್ಟಾಗಿ ದೆಹಲಿಗೆ ಮತ್ತೆ ಪ್ರಯಾಣಿಸಲಿದೆ. ಅಲ್ಲದೆ ಫೆಬ್ರವರಿ 10ರಂದು ದೆಹಲಿಯಲ್ಲಿನ ಕೇಂದ್ರ ಸಚಿವ ಸೋಮಣ್ಣ ಅವರ ಸರ್ಕಾರಿ ನಿವಾಸದಲ್ಲಿ ನಡೆಯಲಿರುವ ಪೂಜೆಯಲ್ಲಿ ರೆಬಲ್ಸ್ ಭಾಗಿಯಾಗಲಿದ್ದಾರೆ. ಪೂಜೆಗೆ ಬರುವಂತೆ ರೆಬಲ್‌್ಸ ತಂಡಕ್ಕೆ ಸೋಮಣ್ಣ ಆಹ್ವಾನ ನೀಡಿದ್ದಾರೆ. 10ರಂದು ಸೋಮಣ್ಣ ಅವರ ದೆಹಲಿ ನಿವಾಸದಲ್ಲಿ ಸಭೆ ಸೇರಿಲಿದ್ದು, ಫೆ.12ರವರೆಗೂ ದೆಹಲಿಯಲ್ಲೇ ಬೀಡುಬಿಡಲು ನಿರ್ಧಾರ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ನಿರ್ಣಾಯಕ ಪಾತ್ರ ವಹಿಸಿದ್ದು, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ವಾದ ಸರಿಯಲ್ಲ ಎಂದು ವಿಜಯೇಂದ್ರ ಪರವಿರುವ ನಾಯಕರು ವಾದಿಸಿದ್ದಾರೆ. ಆದರೆ, ಇತ್ತೀಚಿನ ಉಪಚುನಾವಣೆಯಲ್ಲಿನ ಸೋಲಿನ ವಿಚಾರ ಇಟ್ಟು, ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಬಂಡಾಯ ನಾಯಕರು ಆಗ್ರಹಿಸಿದ್ದಾರೆ.
ಇತ್ತ ವಿಜಯೇಂದ್ರ ಪರವಿರುವ ನಾಯಕರು, ಮೂರು ಕ್ಷೇತ್ರಗಳ ಉಪಚುನಾವಣೆಯ ಪೈಕಿ ಒಂದು ಕ್ಷೇತ್ರ ಮಾತ್ರ ಬಿಜೆಪಿಗೆ ಸೇರಿತ್ತು. ಉಳಿದ ಸ್ಥಾನಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪರವಿತ್ತು. ಹೀಗಾಗಿ ಇತರ ಸೋಲಿನ ಹೊಣೆಯನ್ನು ವಿಜಯೇಂದ್ರ ಅವರ ಮೇಲೆ ಹಾಕಬಾರದು ಎಂದು ಹೇಳಿದ್ದಾರೆ. ಇಬ್ಬರ ಆಗ್ರಹಗಳ ನಡುವೆ ಹೈಕಮಾಂಡ್ ನಾಯಕರು ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.