Thursday, February 6, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಹಾಸನ : ಬುದ್ಧಿಮಾಂದ್ಯ ಬಾಲಕಿ ಮೇಲೆ ಪಕ್ಕದಮನೆಯವನಿಂದಲೇ ಅತ್ಯಾಚಾರ

ಹಾಸನ : ಬುದ್ಧಿಮಾಂದ್ಯ ಬಾಲಕಿ ಮೇಲೆ ಪಕ್ಕದಮನೆಯವನಿಂದಲೇ ಅತ್ಯಾಚಾರ

Hassan: Mentally retarded girl raped by neighbor

ಹಾಸನ,ಫೆ.6- ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ. ಬಾಲಕಿಯ ಪಕ್ಕದ ಮನೆಯ ನಿವಾಸಿಯಿಂದಲೇ ಹೀನಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಕರೊಬ್ಬರ ಬೀಗರ ಊಟಕ್ಕೆ ಬಾಲಕಿಯ ಪೋಷಕರು ಹೋಗಿದ್ದಾಗ ಮನೆಗೆ ನುಗ್ಗಿದ ಕಾಮುಕ ಒಬ್ಬಳೇ ಇದ್ದ ಬುದ್ಧಿಮಾಂದ್ಯ ಬಾಲಕಿಗೆ ಚಾಕಲೆಟ್ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ.

ಸಂಜೆ ವೇಳೆಗೆ ಪೋಷಕರು ಬಂದಾಗ ಬಾಲಕಿಯ ವರ್ತನೆ ಬದಲಾಗಿದ್ದನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ನಡೆದಿರುವ ಬೆಳಕಿಗೆಬಂದಿದೆ. ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ಮನೆಯ ಹಿಂಬಾಗಿಲಿನಿಂದ ಆರೋಪಿ ಪಾರಿಯಾಗಿದ್ದಾನೆ.ಆರೋಪಿಗೆ ಮದುವೆಯಾಗಿ ಇಬ್ಬರು ಮಕ್ಕಳಿದಾರೆ.ಪ್ರಸ್ತುತ ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ .ಹಳೇಬೀಡು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ .

RELATED ARTICLES

Latest News