Tuesday, January 27, 2026
Homeರಾಜ್ಯಕಲಾಪಕ್ಕೆ ಸಚಿವರು ಗೈರು, ಬಿಜೆಪಿ ತೀವ್ರ ಆಕ್ಷೇಪ

ಕಲಾಪಕ್ಕೆ ಸಚಿವರು ಗೈರು, ಬಿಜೆಪಿ ತೀವ್ರ ಆಕ್ಷೇಪ

Ministers absent from the session, BJP outraged

ಬೆಂಗಳೂರು,ಜ.27- ಪ್ರಶ್ನೋತ್ತರ ವೇಳೆ ಆರಂಭವಾದ ಸಂದರ್ಭದಲ್ಲಿ ಸಂಬಂಧಪಟ್ಟ ಸಚಿವರು ಹಾಜರಿಲ್ಲದ ಬಗ್ಗೆ ಬಿಜೆಪಿ ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಪ್ರಶ್ನೋತ್ತರ ಕಲಾಪ ಆರಂಭಿಸಿ
ಪ್ರಶ್ನೆ ಕೇಳಬೇಕಾದ ಶಾಸಕರು ಹೆಸರನ್ನು ಹೇಳಲಾರಂಭಿಸಿದರು.

ಆಗ ಸಂಬಂಧಿತ ಸಚಿವರು ಇಲ್ಲದಿರುವುದನ್ನು ಗಮನಿಸಿದ ವಿರೋಧಪಕ್ಷದ ನಾಯಕ, ಸಚಿವರೇ ಇಲ್ಲ ಎಂದರೆ ಹೇಗೆ?, ಜವಾಬ್ದಾರಿ ಬೇಡವೇ? ಇಂದು ಸದನದಲ್ಲಿ ಹಾಜರಿರಬೇಕಾದ ಹೆಸರುಗಳನ್ನು ವಾಚಿಸಿ, ಬರದೇ ಇರುವವರಿಗೆ ಛೀಮಾರಿ ಹಾಕಿ ಎಂದರು.

ಆಗ ಸಭಾಧ್ಯಕ್ಷರು ಇಂದು ಏಕೆ ಸದನ ಆರಂಭವಾಗಿದೆ?, ಹಾಜರಾತಿ ಏಕೆ ಕಡಿಮೆ ಇದೆ ಎಂಬುದು ನಿಮಗೆ ಗೊತ್ತಿದೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎನ್ನುತ್ತಿದ್ದಂತೆ, ಅಶೋಕ್‌ ಅವರು ನೀವು ಕಾಂಗ್ರೆಸ್‌‍ ಪಕ್ಷದರಲ್ಲ. ಇಂದು ಸದನದಲ್ಲಿ ಹಾಜರಿರಬೇಕಾದವರ ಪಟ್ಟಿಯನ್ನು ವಾಚಿಸಿ ಎಂದು ಒತ್ತಾಯಿಸಿದರು.

ಆಗ ಸಭಾಧ್ಯಕ್ಷರು ಪ್ರಶ್ನೋತ್ತರ ಅವಧಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪರವಾಗಿ ಸಚಿವರು ಉತ್ತರ ಕೊಡುತ್ತಾರೆ. ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ಸಚಿವರು ಬೆಳಿಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ಹಾಜರಿರುವ ಬಗ್ಗೆ ಹೇಳಲಾಗಿದೆ. ಅದರಂತೆ ಬರುತ್ತಾರೆ ಎಂದರು.

ಆಗ ಇಂದು ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಸಭಾಧ್ಯಕ್ಷರು ವಾಚಿಸಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ದಿನೇಶ್‌ ಗುಂಡೂರಾವ್‌, ಡಾ.ಎಚ್‌.ಸಿ.ಮಹದೇವಪ್ಪ ಅವರ ಹೆಸರನ್ನು ಉಲ್ಲೇಖಿಸಿದರು. ಅವರು ಸದನದಲ್ಲಿ ಇಲ್ಲದಿರುವುದನ್ನು ಗಮನಿಸಿದ ಬಿಜೆಪಿ ಶಾಸಕರು ಇಲ್ಲ, ಇಲ್ಲ ಎಂಬ ಘೋಷಣೆಯನ್ನು ಕೂಗಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸದನದಲ್ಲಿ ಹಾಜರಿದ್ದರು. ಜಮೀರ್‌ ಅಹಮದ್‌ ಖಾನ್‌, ಈಶ್ವರ್‌ ಖಂಡ್ರೆ, ಸುಧಾಕರ್‌ ಸೇರಿದಂತೆ ಇನ್ನೂ ಕೆಲವು ಸಚಿವರು ಸದನದಲ್ಲಿ ಹಾಜರಿರಲಿಲ್ಲ. ಆಗ ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಇದು ಇಲ್ಲಗಳ ಸರ್ಕಾರ. ಮಂತ್ರಿಗಳೂ ಇಲ್ಲ, ಅನುದಾನವೂ ಇಲ್ಲ ಎಂದು ಛೇಡಿಸಿದರು.

ಆಗ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡ ಸಭಾಧ್ಯಕ್ಷರು ಎಚ್‌ಕೆ.ಸುರೇಶ್‌ರನ್ನು ಪ್ರಶ್ನೆ ಕೇಳುವಂತೆ ಆಹ್ವಾನಿಸಿದರು.ಆಗ ಶಾಸಕರು ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ. ಇದನ್ನು ಗಮನಿಸಿದ ಸಭಾಧ್ಯಕ್ಷರು ನಿಮ ಸದಸ್ಯರೂ ಇಲ್ಲ ಎಂದರು.ಪ್ರತಿಯಾಗಿ ಅಶೋಕ್‌ ಮಾತನಾಡಿ, ನಮವರು ಸದನದಲ್ಲಿ ಹೆಚ್ಚಾಗಿ ಇದ್ದಾರೆ, ಆಡಳಿತ ಪಕ್ಷದವರ ಕಡೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Latest News