Friday, February 7, 2025
Homeರಾಷ್ಟ್ರೀಯ | Nationalಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ರೈಲಿನಿಂದ ತಳ್ಳಿದ ಕಾಮುಕ

ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ರೈಲಿನಿಂದ ತಳ್ಳಿದ ಕಾಮುಕ

Pregnant Woman sexually harassed, pushed off train after calling for help in Tamil Nadu

ಚೆನ್ನೈ,ಫೆ.7- ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ತಳ್ಳಿರುವ ಹದಯ ವಿದ್ರಾವಕ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕೊಯಮತ್ತೂರಿನಿಂದ ಚಿತ್ತೂರಿಗೆ ಪ್ರಯಾಣಿಸುತ್ತಿದ್ದ ಇಂಟರ್‌ ಸಿಟಿ ರೈಲಿನಲ್ಲಿ ಮಹಿಳಾ ಬೋಗಿಯಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಲ್ಲದ್ದೆ ಆಕೆಯನ್ನು ರೈಲಿನಿಂದ ಕೆಳಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುಪ್ಪೂರು ಜಿಲ್ಲೆಯ ಅವಿನಾಶಿಯ ಮಹಿಳೆ ಕೊಯಮತ್ತೂರಿನಿಂದ ತಿರುಪತಿಗೆ ತೆರಳುತ್ತಿದ್ದಾಗ ವೆಲ್ಲೂರು ಜಿಲ್ಲೆಯ ಕೆವಿ ಕುಪ್ಪಂ ಬಳಿ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.

ಮಹಿಳೆ ಕೊಯಮತ್ತೂರಿನಲ್ಲಿ ರೈಲು ಹತ್ತಿದ್ದಳು, ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಗೊತ್ತುಪಡಿಸಿದ್ದ ಮಹಿಳಾ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಜೋಲಾರ್‌ ಪೇಟೆಯಲ್ಲಿ ರೈಲು ಹತ್ತಿದ ವ್ಯಕ್ತಿಯೊಬ್ಬ ಗರ್ಭಿಣಿಗೆ ತೊಂದರೆ ಕೊಟ್ಟಿದೆ. ಮಾತವಲ್ಲ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಹಿಳೆ ಶೌಚಾಲಯಕ್ಕೆ ಹೋದಾಗ ಆ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಕೆ ಸಹಾಯಕ್ಕಾಗಿ ಕಿರುಚಿದಾಗ, ದುಷ್ಕರ್ಮಿ ಯಾವುದೇ ಕರುಣೆ ತೋರಿಸದೆ ಆಕೆಯನ್ನು ರೈಲಿನಿಂದ ಕ್ರೂರವಾಗಿ ಕೆಳಗೆ ತಳ್ಳಿದ್ದಾರೆ. ಸಹಾಯಕ್ಕಾಗಿ ಮಹಿಳೆಯ ಕೂಗು ಕೇಳಿ ದಾರಿಹೋಕರು ಧಾವಿಸಿ ಬಂದು ಆಕೆಯನ್ನು ರಕ್ಷಿಸಿ ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ಧಾರೆ.

ಮಹಿಳೆಯ ಕೈ ಮತ್ತು ಕಾಲುಗಳಲ್ಲಿ ಮೂಳೆ ಮುರಿತಗಳಾಗಿದ್ದು, ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಗುರುತಿನ ಆಧಾರದ ಮೇಲೆ ಕೆ.ವಿ. ಕುಪ್ಪಂ ಪ್ರದೇಶದ ಪೂಂಚೋಲೈ ಗ್ರಾಮದ ಹೇಮರಾಜ್‌ ಎಂಬ ಯುವಕನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಮಹಿಳೆಯರಿಗೆ ಮಾತ್ರ ಪ್ರತ್ಯೇಕ ಬೋಗಿಗಳಿದ್ದರೂ, ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಲಾಗಿದೆ.

RELATED ARTICLES

Latest News