Friday, February 7, 2025
Homeರಾಷ್ಟ್ರೀಯ | Nationalಫಲಿತಾಂಶಕ್ಕೂ ಮುನ್ನವೇ 16 ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ 15 ಕೋಟಿ ರೂ. ಆಫರ್ : ಕೇಜ್ರಿವಾಲ್...

ಫಲಿತಾಂಶಕ್ಕೂ ಮುನ್ನವೇ 16 ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ 15 ಕೋಟಿ ರೂ. ಆಫರ್ : ಕೇಜ್ರಿವಾಲ್ ಆರೋಪ

Arvind Kejriwal's Big 'Rs 15 Crore' Claim, BJP Hits Back With Legal Threat

ನವದೆಹಲಿ,ಫೆ.7- ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಬಿಜೆಪಿ ಕೆಲ ನಾಯಕರಿಗೆ ಹಣದ ಆಮಿಷ ನೀಡುತ್ತಿದೆ ಎಂದು ಆಮ್ ಆದಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತನ್ನ 16 ಅಭ್ಯರ್ಥಿಗಳಿಗೆ ಬಿಜೆಪಿ ಕರೆ ಮಾಡಿ 15 ಕೋಟಿ ರೂಪಾಯಿ ನೀಡುವುದಾಗಿ ಆಫರ್ ನೀಡಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಕೆಲವು ಸಂಸ್ಥೆಗಳು ದುರುಪಯೋಗ ಪಡಿಸಿಕೊಂಡ ಪಕ್ಷ 55ಕ್ಕೂ ಹೆಚ್ಚು ಸ್ಥಾನ ಪಡೆಯುತ್ತಿದೆ ಎಂದು ತೋರಿಸುತ್ತಿವೆ. ಕಳೆದ ಎರಡು ಗಂಟೆಗಳಲ್ಲಿ ನಮ 16 ಅಭ್ಯರ್ಥಿಗಳಿಗೆ ಆಪ್ ತೊರೆದು ನಮ ಪಕ್ಷ ಸೇರಿದರೆ ಸಚಿವರನ್ನಾಗಿ ಮಾಡುವುದಾಗಿ ಹಾಗೂ ಪ್ರತಿಯೊಬ್ಬರಿಗೂ 15 ಕೋಟಿ ರೂಪಾಯಿ ನೀಡುವುದಾಗಿ ಕರೆ ಬಂದಿದೆ ಎಂದು ಕೇಜ್ರಿವಾಲ್ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ.

ಅವರ ಪಕ್ಷವು 55 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿದ್ದರೆ ಅವರು ನಮ ಅಭ್ಯರ್ಥಿಗಳನ್ನು ಕರೆಯುವ ಅಗತ್ಯವೇನು? ನಿಸ್ಸಂಶಯವಾಗಿ ಈ ನಕಲಿ ಸಮೀಕ್ಷೆಗಳನ್ನು ಕೆಲವು ಅಭ್ಯರ್ಥಿಗಳನ್ನು ಒಡೆಯಲು ಈ ವಾತಾವರಣವನ್ನು ಸೃಷ್ಟಿಸುವ ಏಕೈಕ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿದೆ. ಆದರೆ ನಮ ಒಬ್ಬ ವ್ಯಕ್ತಿ ಕೂಡ ಬೇರೆ ಆಗುವುದಿಲ್ಲ ಎಂದು ಅವರು ಹೇಳಿದರು.

ಎಎಪಿ ಬಿಟ್ಟು ನಮೊಂದಿಗೆ ಬನ್ನಿ :
ಕೇಜ್ರಿವಾಲ್ ಅವರ ಆರೋಪಗಳನ್ನು ಬೆಂಬಲಿಸಿದ ಎಎಪಿ ನಾಯಕ ಮುಖೇಶ್ ಅಹ್ಲಾವತ್ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿಯ ಪಕ್ಷವನ್ನು ತೊರೆಯುವುದಕ್ಕಿಂತ ಸಾಯಲು ಬಯಸುತ್ತೇನೆ ಎಂದು ಹೇಳಿದರು.

ದೂರವಾಣಿ ಕರೆಯೊಂದರ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿರುವ ಅವರು ನನಗೆ ಈ ಸಂಖ್ಯೆಯಿಂದ ಕರೆ ಬಂದಿದೆ. ಅವರ ಸರ್ಕಾರ ರಚನೆಯಾಗುತ್ತಿದೆ, ನನ್ನನ್ನು ಮಂತ್ರಿ ಮಾಡಿ 15 ಕೋಟಿ ರೂ. ಕೊಡುತ್ತಾರೆ ಎಂದರು. ಎಎಪಿ ತೊರೆದು ನಮೊಂದಿಗೆ ಬನ್ನಿ ಎಂದರು ಎಂದು ಅಹ್ಲಾವತ್ ಎಕ್‌್ಸನಲ್ಲಿ ಪೋಸ್ಟ್ನಲ್ಲಿ ಹೇಳಿದ್ದಾರೆ. ಕರೆ ಬಂದಿರುವ ನಂಬರ್ನ ಸ್ಕ್ರೀನ್ಶಾಟ್ ಜೊತೆಗೆ ಬಿಜೆಪಿಗೆ ಸೇರಲು ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಹ್ಲಾವತ್ ಅವರು, ಕೇಜ್ರಿವಾಲ್ ಮತ್ತು ಎಎಪಿ ಪಕ್ಷವು ನನಗೆ ನೀಡಿದ ಗೌರವವನ್ನು ನಾನು ಅವರಿಗೆ ಹೇಳಲು ಬಯಸುತ್ತೇನೆ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ನನ್ನ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಮತ್ತು ಅಹ್ಲಾವತ್ ಇಬ್ಬರೂ ಮಾಡಿದ ಹಣದ ಆಮಿಷದ ಆರೋಪಗಳಿಗೆ ಬಿಜೆಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಯು ಆಡಳಿತಾರೂಢ ಆಮ್ ಆದಿ ಪಕ್ಷಕ್ಕೆ ಆಘಾತ ಕೊಟ್ಟಿದೆ. ದಶಕಗಳ ಕಾಲ ದೆಹಲಿಯಲ್ಲಿ ಆಡಳಿತ ನಡೆಸಿದ್ದ ಎಎಪಿ ಈ ಬಾರಿ ಭಾರಿ ಹಿನ್ನಡೆಯನ್ನು ಅನುಭವಿಸಲಿದ್ದು 15 ರಿಂದ 25 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೇಜ್ರಿವಾಲ್ ಜನಪ್ರಿಯ ಸಿಎಂ, ಸಮೀಕ್ಷೆಯಲ್ಲಿ ಎಎಪಿಗೆ ಹಿನ್ನಡೆಯಾದರೂ ದೆಹಲಿ ಜನರು ಮಾತ್ರ ಅರವಿಂದ್ ಕೇಜ್ರಿವಾಲ್ ಅವರೇ ಸಿಎಂ ಆಗಬೇಕು ಎಂದು ಒಲವು ತೋರಿಸಿದ್ದಾರೆ. ಬಳಿಕ ಬಿಜೆಪಿಯ ಪರ್ವೇಶ್ ವರ್ಮಾ ಮತ್ತು ಮನೋಜ್ ತಿವಾರಿ ಅವರನ್ನು ಸಿಎಂ ಹ್ದುೆಯಲ್ಲಿ ನೋಡಲು ಜನ ಇಷ್ಟಪಟ್ಟಿದ್ದಾರೆ. ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ, ನವದೆಹಲಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಬಿಜೆಪಿ ಏಳು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಆಮ್ ಆದಿ ಪಕ್ಷ ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಬಹುದು ಎಂದು ಹೇಳಿದೆ. ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.

ಈಶಾನ್ಯ ದೆಹಲಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದು ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಎಎಪಿ ಗೆಲ್ಲಲಿದೆ ಎಂದು ತಿಳಿಸಿದೆ. ಆಗ್ನೇಯ ದೆಹಲಿ ಜಿಲ್ಲೆಯಲ್ಲಿ, ಬಿಜೆಪಿ ಮತ್ತು ಎಎಪಿ ತಲಾ ಐದು ಸ್ಥಾನಗಳನ್ನು ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಬುಧವಾರ ಮತದಾನ ಮುಗಿದ ಬಳಿಕ ಹಲವು ಮಾಧ್ಯಮಗಳು, ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ತಿಳಿಸಿವೆ. ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಎಎಪಿಗೆ ಈ ಸಮೀಕ್ಷೆಗಳು ಆಘಾತ ಕೊಟ್ಟಿದೆ. ಇನ್ನು ಕಾಂಗ್ರೆಸ್ ಇಲ್ಲಿ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಎಂದು ಸಮೀಕ್ಷೆಗಳು ಹೇಳಿದ್ದು 0-1 ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ತಿಳಿಸಿವೆ.

ಫೆಬ್ರವರಿಯಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಾದ್ಯಂತ ಮತದಾರರು ತಮ ಮತಗಳನ್ನು ಚಲಾಯಿಸಿದ್ದಾರೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದ್ದು, ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.

RELATED ARTICLES

Latest News