Friday, February 7, 2025
Homeಕ್ರೀಡಾ ಸುದ್ದಿ | Sportsಅನಿಲ್ ಕುಂಬ್ಳೆ 10 ವಿಕೆಟ್ ಸಂಭ್ರಮಕ್ಕೆ 26 ವರ್ಷ

ಅನಿಲ್ ಕುಂಬ್ಳೆ 10 ವಿಕೆಟ್ ಸಂಭ್ರಮಕ್ಕೆ 26 ವರ್ಷ

Anil Kumble's historic 'perfect ten' against Pakistan

ಬೆಂಗಳೂರು, ಫೆ. 7- ಪಾಕಿಸ್ತಾನದ ಆಟಗಾರರ ವಿರುದ್ಧ ಪ್ರಾಬಲ್ಯ ಮೆರೆದು ಒಂದೇ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ 10 ವಿಕೆಟ್ ಪಡೆದ ಸಂಭ್ರಮಕ್ಕೆ ಇಂದು 26 ವರ್ಷಗಳು ತುಂಬಿದ್ದು, ಬಿಸಿಸಿಐ , ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಜಂಬೂವಿನ ಈ ಸಾಧನೆಯನ್ನು ಶ್ಲಾಘಿಸಿದೆ.

ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 7 ಫೆಬ್ರವರಿ 1999ರಂದು ಪಾಕಿಸ್ತಾನ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ತಮ ಸ್ಪಿನ್ ಮೋಡಿಯಿಂದ ಸಾಂಪ್ರಾಯಿಕ ವೈರಿ ಪಾಕಿಸ್ತಾನದ ಬ್ಯಾಟರ್ ಗಳ ಸದ್ದಗಡಿಸಿ 10 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ದಾಖಲೆಗೆ ಅನಿಲ್ ಕುಂಬ್ಳೆ ಪಾತ್ರರಾದರು.

ಇದಕ್ಕೂ ಮುನ್ನ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ನ ಜಿಮ್ ಲೇಖರ್ 53 ರನ್ ಗಳಿಗೆ 10 ವಿಕೆಟ್ ಪಡೆದು ನಿರ್ಮಿಸಿದ್ದ ದಾಖಲೆಯನ್ನು ಕುಂಬ್ಳೆ ಸರಿಗಟ್ಟಿದರು. ಅಂದಿನ ಸರಣಿಯಲ್ಲಿ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ 12 ರನ್ ಸೋಲು ಕಂಡಿದ್ದ ಭಾರತ ತಂಡ 0-1 ಹಿನ್ನಡೆ ಅನುಭವಿಸಿತ್ತು.

ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಮೊಹಮದ್ ಅಜರುದ್ದೀನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಇನಿಂಗ್ಸ್ ನಲ್ಲಿ 252 ರನ್ ಗಳಿಗೆ ಅಲೌಟ್ ಆಯಿತು. ನಂತರ ಪಾಕಿಸ್ತಾನ ಮೊದಲ ಇನಿಂಗ್‌್ಸ ನಲ್ಲಿ 172 ರನ್ ಅಲೌಟ್ ಆಯಿತು. 80 ರನ್ ಗಳ ಮುನ್ನಡೆ ಪಡೆದ ಭಾರತ ದ್ವಿತೀಯ ಇನಿಂಗ್‌್ಸ ನಲ್ಲಿ 339 ರನ್ ಗಳಿಸಿ ಒಟ್ಟಾರೆ 420 ರನ್ ಗುರಿ ನೀಡಿತು.

ಮೊದಲ ವಿಕೆಟ್ ಗೆ ಶಾಹಿದ್ ಆಫ್ರಿದಿ ಹಾಗೂ ಶಹೀದ್ ಅನ್ವರ್ ಅವರು 101 ರನ್ ಗಳ ಜೊತೆಯಾಟದ ನಡುವೆಯೂ ಕುಂಬ್ಳೆ ಬೌಲಿಂಗ್ ಚಮತ್ಕಾರ (74ಕ್ಕೆ 10) ದಿಂದ 208 ರನ್ ಗಳಿಗೆ ಅಲೌಟ್ ಆಯಿತು. 212 ರನ್ ಗೆಲುವು ಸಾಧಿಸಿದ ಭಾರತ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

RELATED ARTICLES

Latest News